Asianet Suvarna News Asianet Suvarna News

ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ

ವರ್ಷಾಂತ್ಯಕ್ಕೆ ನಡೆಯಲಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಈಗಿನಿಂದಲೇ ಬಿಜೆಪಿ ತಯಾರಿ ಆರಂಭಿಸಿದೆ. ಪಂಚರಾಜ್ಯಗಳ ಪೈಕಿ ಬುಧವಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣಾ ಸಿದ್ಧತೆ ಬಗ್ಗೆ ಬಿಜೆಪಿ ಚರ್ಚೆ ನಡೆಸಿದೆ.

BJP has already started preparations for the five state assembly elections to be held at the end of the year akb
Author
First Published Aug 17, 2023, 9:44 AM IST | Last Updated Aug 17, 2023, 12:11 PM IST

ನವದೆಹಲಿ: ವರ್ಷಾಂತ್ಯಕ್ಕೆ ನಡೆಯಲಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಈಗಿನಿಂದಲೇ ಬಿಜೆಪಿ ತಯಾರಿ ಆರಂಭಿಸಿದೆ. ಪಂಚರಾಜ್ಯಗಳ ಪೈಕಿ ಬುಧವಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣಾ ಸಿದ್ಧತೆ ಬಗ್ಗೆ ಬಿಜೆಪಿ ಚರ್ಚೆ ನಡೆಸಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿತು. ಈ ವೇಳೆ ಎರಡೂ ರಾಜ್ಯ ಘಟಕಗಳು ತಮ್ಮ ಸಿದ್ಧತೆಯ ವಿವರ ನೀಡಿದವು.

ಈ ವೇಳೆ, ಒಟ್ಟು ಕ್ಷೇತ್ರಗಳನ್ನು 4 ವಿಭಾಗಗಳಾಗಿ ವಿಂಗಡಿಸಿ ಅದಕ್ಕೆ ಅನುಗುಣವಾಗಿ ರಣನೀತಿ ಹೆಣೆಯುವ ಚರ್ಚೆ ನಡೆದಿದೆ. ‘ಎ’ ವಿಭಾಗದಲ್ಲಿ ಚುನಾವಣೆಯಲ್ಲಿ ಬಿಜೆಪಿ ಸತತ ಗೆಲ್ಲುತ್ತಿರುವ ಕ್ಷೇತ್ರಗಳು, ‘ಬಿ’ ವಿಭಾಗದಲ್ಲಿ ಮಿಶ್ರ ಫಲಿತಾಂಶ ಇರುವ ಕ್ಷೇತ್ರಗಳು, ‘ಸಿ’ ಬಿಜೆಪಿ ತುಂಬ ದುರ್ಬಲ ಹಾಗೂ ‘ಡಿ’ ವಿಭಾಗದಲ್ಲಿ ಈತನಕ ಬಿಜೆಪಿ ಗೆಲ್ಲದ ಕ್ಷೇತ್ರಗಳು ಬರುತ್ತವೆ. ಇದೇ ವೇಳೆ, ಶೇ.50ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆದಿದೆ. ಸಾಮಾನ್ಯವಾಗಿ ಸಾಮಾನ್ಯವಾಗಿ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಚುನಾವಣಾ ಸಮಿತಿ ಸಭೆ ಸೇರುತ್ತದೆ. ಆದರೆ ಇಷ್ಟುಬೇಗ ಸಭೆ ನಡೆಸಿರುವುದು 5 ರಾಜ್ಯಗಳ ಚುನಾವಣೆಗಳ ಮಹತ್ವ ಸಾರುತ್ತದೆ. ಏಕೆಂದರೆ ಇವುಗಳ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ಮಾನದಂಡ ಆಗುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಆಕಾಂಕ್ಷಿಗಳ‌ ಪಟ್ಟಿ ಆರಂಭ, ಮತ್ತೆ ಕಮಲ ಅರಳಿಸಲು ಪ್ಲಾನ್‌..!

ಛತ್ತೀಸ್‌ಗಢ, ಮಧ್ಯಪ್ರದೇಶ ಅಲ್ಲದೆ, ರಾಜಸ್ಥಾನ (Rajasthan), ತೆಲಂಗಾಣ (Telangana) ಮತ್ತು ಮಿಜೋರಂ  (Mizoram) ಇವು ಚುನಾವಣಾ ರಾಜ್ಯಗಳಾಗಿದ್ದು, ನವೆಂಬರ್‌-ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಮೋದಿಯವರಲ್ಲದೆ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಛತ್ತೀಸ್‌ಗಢದ ಮಾಜಿ ಸಿಎಂ ರಮಣ ಸಿಂಗ್‌ ಉಪಸ್ಥಿತರಿದ್ದರು.

ತಲಪಾಡಿ: ಬಿಜೆಪಿ-ಎಸ್ಡಿಪಿಐ ಒಪ್ಪಂದ: ಎಚ್ಚೆತ್ತ ಬಿಜೆಪಿ ನಾಯಕರಿಂದ ಪಕ್ಷ ವಿರೋಧಿಗಳಿಗೆ ಗೇಟ್ ಪಾಸ್!

Latest Videos
Follow Us:
Download App:
  • android
  • ios