125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ: ಸಚಿವ ಮುರುಗೇಶ್‌ನಿರಾಣಿ

ಬಿಜೆಪಿ ದೇಶದಲ್ಲಿ ಅಲ್ಲ, ಇಡೀ ಜಗತ್ತಿನಲ್ಲೇ ದೊಡ್ಡ ಪಕ್ಷ. ಇಂತಹ ಪಕ್ಷದ ನಾಯಕರುಗಳು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಗುಜರಾತ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಬದಲಾವಣೆ ಮಾಡಿ ಯಶಸ್ಸು ಪಡೆದಿದ್ದಾರೆ. 

BJP government formed after winning more than 125 constituencies Says Minister Murugesh Nirani gvd

ಬೀಳಗಿ (ಏ.15): ಬಿಜೆಪಿ ದೇಶದಲ್ಲಿ ಅಲ್ಲ, ಇಡೀ ಜಗತ್ತಿನಲ್ಲೇ ದೊಡ್ಡ ಪಕ್ಷ. ಇಂತಹ ಪಕ್ಷದ ನಾಯಕರುಗಳು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಗುಜರಾತ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಬದಲಾವಣೆ ಮಾಡಿ ಯಶಸ್ಸು ಪಡೆದಿದ್ದಾರೆ. ಈ ಹೊಸ ಪ್ರಯೋಗ ಯಾವುದೇ ಪರಿಣಾಮ ಬೀರಲ್ಲ. ರಾಜ್ಯದಲ್ಲಿ 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ನಿಶ್ಚಿತವಾಗಿಯೂ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಸಚಿವ, ಬೀಳಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಯಡಿಯೂರಪ್ಪನವರು, ಈಶ್ವರಪ್ಪನವರು ತಮ್ಮ ವಯಸ್ಸಿನ ಮತ್ತು ಅನುಭವದ ಹಿನ್ನೆಲೆಯಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಜತೆಗೆ ಪಕ್ಷ ಗೆಲ್ಲಿಸಲು ರಾಜ್ಯದ ತುಂಬಾ ಪ್ರವಾಸ ಮಾಡುತ್ತಿದ್ದಾರೆ. ಪಕ್ಷ ಯಾವ ನಿರ್ಧಾರ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದರು. ನಾವು ವಿಧಾನಸಭೆ ಚುನಾವಣೆಗೆ ಬೀಳಗಿ ಕ್ಷೇತ್ರದಿಂದ 5ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದು ತಾಲೂಕಿನಲ್ಲಿನ ಮತದಾರರು ಕಳೆದ 4 ಬಾರಿಗಿಂತ ಅತೀ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಈ ಬಾರಿ ಸುಮಾರು 50 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಲಿದ್ದು, ಬಾಗಲಕೋಟೆ ಜಿಲ್ಲೆಯ 7 ಮತಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳ ಗೆಲವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ನೆಪಮಾತ್ರ, ಪಕ್ಷದ ಕಾರ್ಯಕರ್ತರೆ ದೊಡ್ಡ ಶಕ್ತಿ: ಸಚಿವ ಸೋಮಣ್ಣ

ಬಸವಪ್ರಭು ಸರನಾಡಗೌಡರ ಬಂಡಾಯದ ಬಗ್ಗೆ ಅವರ ಜೊತೆ ಮಾತಾಡಿದ್ದೇನೆ. ಅವರು ತಮ್ಮ ಕಾರ್ಯಕರ್ತರ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇ್ತವೆ ಎಂದು ಹೇಳಿದ್ದಾರೆ. ಅವರ ಮಾತುಗಳಿಂದ ಸಕಾರಾತ್ಮಕ ಉತ್ತರ ಸಿಗುತ್ತದೆ ಎಂಬ ನಂಬಿಕೆ ನಮಗಿದೆ. ಅವರು ಬಿಜೆಪಿಗೆ ಬರಬೇಕು ಅನ್ನುವ ವಿನಂತಿಯನ್ನು ನಾವು ಹಾಗೂ ನಮ್ಮ ಪಕ್ಷದ ಹಿರಿಯರು ಮಾಡಿದ್ದೇವೆ ಎಂದರು. ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಕೃಷ್ಣಗೌಡ ಪಾಟೀಲ, ಮಲ್ಲಪ್ಪ ಶಂಭೋಜಿ, ಪಕ್ಷದ ಅನೇಕ ಕಾರ್ಯಕರ್ತರು ಇದ್ದರು.

ಸಚಿವ ನಿರಾಣಿಗಿಂತ ಪತ್ನಿಯ ಆಸ್ತಿ, ಸಾಲ ಹೆಚ್ಚು: ಸಚಿವ ಮುರುಗೇಶ ನಿರಾಣಿ ಅವರಿಗಿಂತಲೂ ಆಸ್ತಿ ಗಳಿಕೆ ಹಾಗೂ ಸಾಲದ ವಿಚಾರದಲ್ಲಿ ಪತ್ನಿ ಕಮಲಾ ನಿರಾಣಿ ಅವರೇ ಮುಂದಿದ್ದಾರೆ. ಮುರುಗೇಶ ನಿರಾಣಿ ಒಟ್ಟು 27.22 ಕೋಟಿಗಳ ಚರಾಸ್ತಿ ಹೊಂದಿದರೇ ಪತ್ನಿ ಕಮಲಾ ನಿರಾಣಿ 38.55 ಕೋಟಿಗಳ ಚರಾಸ್ತಿ ಹೊಂದಿದ್ದಾರೆ. ಇನ್ನು ಸಚಿವ ಮುರುಗೇಶ 8.60 ಕೋಟಿಗಳ ಸ್ಥಿರಾಸ್ತಿ ಹಾಗೂ ಪತ್ನಿ ಕಮಲಾ ನಿರಾಣಿ 23.85 ಕೋಟಿಗಳ ಸ್ಥಿರಾಸ್ತಿ, ಸಚಿವರು 22.62 ಕೋಟಿಗಳ ಸಾಲ ಹಾಗೂ ಪತ್ನಿ ಕಮಲಾ .47.56 ಕೋಟಿ ಸಾಲವನ್ನು ಹೊಂದಿದ್ದಾರೆ ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರೂ ಹಲವು ಕಂಪನಿಗಳಲ್ಲಿ ಶೇರುಗಳನ್ನು ಹೊಂದಿದ್ದಾರೆ.

ಈ ಬಾರಿ ಬಿಜೆಪಿ 140 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು: ಸಚಿವ ಎಸ್‌.ಟಿ.ಸೋಮಶೇಖರ್‌

ಸಚಿವರ ಕೈಯಲ್ಲಿ ಸದ್ಯ 140,765: ತಮ್ಮ ಹಾಗೂ ಕುಟುಂಬದ ಹಲವರ ಹೆಸರಿನಲ್ಲಿ ಹಲವು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಸಚಿವ ಮುರುಗೇಶ ನಿರಾಣಿ ಅವರ ಕೈಯಲ್ಲಿ ಸದ್ಯ .140,765ಗಳು ಮಾತ್ರ ಇರುವುದಾಗಿ ನಾಮಪತ್ರದ ಜೊತೆಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿಯು ಸಹ ಪತ್ನಿ ಕಮಲಾ ಅವರೇ ಹೆಚ್ಚು ಹಣ ಹೊಂದಿದ್ದಾರೆ, ಅವರ ಬಳಿ .256410ಗಳು ಕ್ಯೆಯಲ್ಲಿ ಇವೆ. ವಿವಿಧ ಬ್ಯಾಂಕ್‌ಗಳಲ್ಲಿ ಹಣ ಹೊಂದಿರುವ ಸಚಿವ ನಿರಾಣಿ ಅವರು ತಮ್ಮ ಕುಟುಂಬದ ಒಡೆತನದ ವಿಜಯ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ 37.30 ಲಕ್ಷ ಹಣವನ್ನು ಎಸ್‌ಬಿ ಖಾತೆಯಲ್ಲಿ ಹೊಂದಿದ್ದರೆ, ಬ್ಯಾಂಕ್‌ ಆಫ್‌ ಬರೋಡಾ, ಎಸ್‌ಬಿಐ, ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ಹಲವೆಡೆ ಹಣಕಾಸು ವ್ಯವಹಾರ ಸಚಿವರದ್ದು ಇದೆ. ಜೊತೆಗೆ ಮುಧೋಳದ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ .17 ಲಕ್ಷ ಹಣ ಮತ್ತು ಬೆಂಗಳೂರಿನ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 9 ಲಕ್ಷ ಹಣವನ್ನು ಎಫ್‌ಡಿ ಯಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios