ಡಿಕೆಶಿ ಭೇಟಿ​ಯಾಗಿ ಚರ್ಚೆ: ಬಿಜೆಪಿ ನಾಯಕ ಕಾಂಗ್ರೆಸ್‌ಗೆ..!

ಬೆಳೆಯುವ ನಾಯಕರ ಕಾಲೆಳೆಯುವುದು ಬಿಜೆಪಿಯ ಪರಿಪಾಠ. ಈಗ ಬಿಜೆಪಿ ಒಳತಂತ್ರ ಅರಿವಾಗಿದೆ. ಕಳೆದ ಚುನಾವಣೆಯಲ್ಲಿ ಕಾರಣಗಳಿಲ್ಲದೆ ನನಗೆ ಸೀಟು ನಿರಾಕರಿಸಿದರು. ಬೈಂದೂರಲ್ಲಿ ಬಿಜೆಪಿ ಕಟ್ಟಿಬೆಳೆಸಿದ ನನ್ನನ್ನು ಮೂಲೆಗುಂಪು ಮಾಡಿದರು. ಇದರಿಂದ ಮಾನಸಿಕವಾಗಿ ನೊಂದಿದ್ದು, ಮನಸ್ಸಿಗೆ ಆಘಾತವಾಗಿದೆ. ಬೈಂದೂರಲ್ಲಿ ಪಕ್ಷ ಕಟ್ಟಿದ್ದೇನೆ. ಆದರೂ ನನ್ನನ್ನು ತುಳಿದು ಹಾಕಿದ್ದಾರೆ ಎಂದು ಬಿಜೆಪಿ ನಡೆದುಕೊಂಡ ರೀತಿ ಬಗ್ಗೆ ಅವರು ನೋವು ತೋಡಿಕೊಂಡ ಮಾಜಿ ಶಾಸಕ ಬಿ.ಎಮ್‌ ಸುಕುಮಾರ್‌ ಶೆಟ್ಟಿ 

BJP Former MLA BM Sukumar Shetty Join Congress grg

ಕುಂದಾಪುರ(ಸೆ.08):  ಬೈಂದೂರಲ್ಲಿ ದೊಡ್ಡಮಟ್ಟದಲ್ಲಿ ಪಕ್ಷ ಕಟ್ಟಿದ ನನ್ನಲ್ಲಿ ಸಾಮರ್ಥ್ಯ ಇದೆ ಎಂದು ತುಳಿದು ಹಾಕಿದ್ದಾರೆ. ಯಾರು ಸಮರ್ಥರಿರುತ್ತಾರೋ ಅವರಿಗೆ ಬಿಜೆಪಿಯಲ್ಲಿ ಜಾಗ ಇಲ್ಲ ಎನ್ನುವುದು ಸಾಬೀತಾಗಿದೆ. ಇನ್ನುಮುಂದೆ ನಾನು ಇಂಥ ಪಕ್ಷದ ನಾಯಕನಾಗಿರಲು ಸಾಧ್ಯವಿಲ್ಲ. ಮುಂದೆ ಬಿಜೆಪಿಗೆ ಒಳ್ಳೆಯ ದಿನಗಳೂ ಇಲ್ಲ. ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಭೇಟಿ​ಯಾಗಿ ಕಾಂಗ್ರೆಸ್‌ ಸೇರ್ಪಡೆ ಸಂಬಂಧ ಬಂದಿ​ದ್ದ ಆಹ್ವಾನವನ್ನು ಒಪ್ಪಿ​ಕೊಂಡಿ​ದ್ದೇನೆ ಎಂದು ಬೈಂದೂರು ಬಿಜೆಪಿ ಮಾಜಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

ಬುಧವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಬಳಿಕ ಗುರುವಾರ ನೆಂಪುವಿನ ತಮ್ಮ ನಿವಾಸಕ್ಕೆ ಆಗಮಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‌ ಹಿಡಿತದಲ್ಲಿದ್ದ ಬೈಂದೂರು ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿ ಪರಿವರ್ತಿಸಿ 25,000 ಮತಗಳ ಅಂತರದಿಂದ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದೆ. ಬೆಳೆಯುವ ನಾಯಕರ ಕಾಲೆಳೆಯುವುದು ಬಿಜೆಪಿಯ ಪರಿಪಾಠ. ಈಗ ಬಿಜೆಪಿ ಒಳತಂತ್ರ ಅರಿವಾಗಿದೆ. ಕಳೆದ ಚುನಾವಣೆಯಲ್ಲಿ ಕಾರಣಗಳಿಲ್ಲದೆ ನನಗೆ ಸೀಟು ನಿರಾಕರಿಸಿದರು. ಬೈಂದೂರಲ್ಲಿ ಬಿಜೆಪಿ ಕಟ್ಟಿಬೆಳೆಸಿದ ನನ್ನನ್ನು ಮೂಲೆಗುಂಪು ಮಾಡಿದರು. ಇದರಿಂದ ಮಾನಸಿಕವಾಗಿ ನೊಂದಿದ್ದು, ಮನಸ್ಸಿಗೆ ಆಘಾತವಾಗಿದೆ. ಬೈಂದೂರಲ್ಲಿ ಪಕ್ಷ ಕಟ್ಟಿದ್ದೇನೆ. ಆದರೂ ನನ್ನನ್ನು ತುಳಿದು ಹಾಕಿದ್ದಾರೆ ಎಂದು ಬಿಜೆಪಿ ನಡೆದುಕೊಂಡ ರೀತಿ ಬಗ್ಗೆ ಅವರು ನೋವು ತೋಡಿಕೊಂಡರು.

ಉದಯ ನಿಧಿ ಹೇಳಿಕೆ ಮೂಲಕ ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವು ಬಹಿರಂಗ : ಯಶ್ ಪಾಲ್ ಸುವರ್ಣ

ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದೇನೆ: 

ಕಳೆದ ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಬುಧವಾರ ಬೈಂದೂರಿನ ಮಾಜಿ ಶಾಸಕಾರದ ಗೋಪಾಲ ಪೂಜಾರಿ ಹಾಗೂ ಶೃಂಗೇರಿ ಶಾಸಕರ ಜೊತೆಗೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಡಿ.​ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ಸೇರುತ್ತೇನೆಂದು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದೇನೆ. ದೊಡ್ಡ ಮಟ್ಟದಲ್ಲಿ ಸಮಾರಂಭ ಮಾಡಿ ಕಾಂಗ್ರೆಸ್‌ ಸೇರುತ್ತೇನೆ ಎಂದರು.

ಬಿಜೆಪಿಯವ್ರು ಸುಮ್‌ ಸುಮ್ನೆ ಬಟಾಟೆ ಹೊಡಿತಾರೆ!

ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರನ್ನು ನೇಮಿಸಲು ಸಾಧ್ಯವಾಗಿಲ್ಲ. ಬಿಜೆಪಿಯವರು ಹಾಗ್‌ ಮಾಡ್ತೇನೆ, ಹೀಗ್‌ ಮಾಡ್ತೇನೆ ಅಂತ ಸುಮ್‌ ಸುಮ್ನೆ ಬಟಾಟೆ ಹೊಡಿತಾರೆ. ಅವರ ಬಳಿ ಏನೂ ಮಾಡೋದಕ್ಕೆ ಆಗೋದಿಲ್ಲ. ಜನಮನವನ್ನು ಗೆಲ್ಲಲು ಸಾಧ್ಯವಿಲ್ಲ. ಕರಾವಳಿ ಬಿಟ್ಟರೆ ಬೇರೆ ಎಲ್ಲಾ ಕಡೆಗಳಲ್ಲೂ ಬಿಜೆಪಿ ತನ್ನ ಹೆಸರನ್ನು ಹಾಳು ಮಾಡಿಕೊಂಡಿದೆ ಎಂದು ಮಾಜಿ ಶಾಸಕ ಬಿ.ಎಮ್‌ ಸುಕುಮಾರ್‌ ಶೆಟ್ಟಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios