ಬಿಜೆಪಿ ಮೈತ್ರಿ ತೊರೆದು ಆರ್‌ಜೆಡಿ ಜೊತೆ ಸರ್ಕಾರ ರಚಿಸಿದ ಸಿಎಂ ನಿತೀಶ್ ಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರದಲ್ಲೇ ಬಿಜೆಪಿಗೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿಕೆ ಬೆನ್ನಲ್ಲೇ ಬಿಜೆಪಿ ಪ್ರತಿಕ್ರಿಯಿಸಿದೆ. ಬಿಜೆಪಿ ಬಾಗಿಲು ಮುಚ್ಚಿದೆ ಎಂದಿದೆ.
ಪಾಟ್ನಾ(ಜು.30) ಬಿಹಾರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಬೀಸುತ್ತಿದೆ. ಬಿಜೆಪಿ ಮೈತ್ರಿ ಮುರಿದು ಆರ್‌ಜೆಡಿ ಜೊತೆ ಸೇರಿ ಸರ್ಕಾರ ರಚಿಸಿರುವ ಸಿಎಂ ನಿತೀಶ್ ಕುಮಾರ್ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕೈಗೊಂಬೆಯಾಗಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ಶೀಘ್ರದಲ್ಲೇ ಬಿಜೆಪಿಗೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ರಾಮದಾಸ್ ಅಠವಾಳೆ ಹೇಳಿದ್ದಾರೆ. ಆದರೆ ಈ ಹೇಳಿಕೆ ಬೆನ್ನಲ್ಲೇ ಬಿಹಾರ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ನಿತೀಶ್ ಕುಮಾರ್ ಬಾಗಿಲು ಯಾವತ್ತೆ ಮುಚ್ಚಿದೆ ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಪಾಟ್ನಾ ಭೇಟಿ ಬಳಿಕ ಮಾತನಾಡಿ ರಾಮದಾಸ್ ಅಠವಾಳೆ, ಸಿಎಂ ನಿತೀಶ್ ಕುಮಾರ್ ಯಾವುದೇ ಕ್ಷಣದಲ್ಲಿ ಎನ್‌ಡಿಎ ಮಿತ್ರಕೂಟ ಸೇರಿಕೊಳ್ಳಲಿದ್ದಾರೆ ಎಂದು ಅಠವಾಳೆ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ. ಮಾಧ್ಯಮಗಳಲ್ಲಿ ವಿಚಾರವನ್ನು ನಿತೀಶ್ ಅಲ್ಲಗೆಳೆದರು ಅಸಮಾಧಾನ ಮಾತ್ರ ಹಾಗೇ ಇದೆ. ನಿತೀಶ್ ಕುಮಾರ್ ಎನ್‌ಡಿಎ ಮಿತ್ರಪಕ್ಷದ ಸದಸ್ಯರಾಗಿದ್ದರು. ಕಳೆದ ವರ್ಷದ ಬಿಜೆಪಿ ತೊರೆದು ಆರ್‌ಜೆಡಿ ಜೊತೆ ಸರ್ಕಾರ ರಚಿಸಿದ್ದಾರೆ. ಇದೀಗ ವಿಪಕ್ಷಗಳ ನಡೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಅಠವಾಳೆ ಹೇಳಿದ್ದಾರೆ.
ವಿಪಕ್ಷಗಳ ಮೈತ್ರಿಗೆ INDIA ಹೆಸರು, ನಿತೀಶ್ ಕುಮಾರ್ ಅಪಸ್ವರ; ಇತ್ತ ಚುನಾವಣಾ ಆಯೋಗಕ್ಕೆ ದಾಖಲಾಯ್ತು ದೂರು!
ನಿತೀಶ್ ಕುಮಾರ್ ಹಿಂದೆಯೂ ಬಿಜೆಪಿ ಜೊತೆ ಎನ್‌ಡಿಎ ಮೈತ್ರಿಕೂಟದಲ್ಲಿದ್ದರು. 2022ರಲ್ಲಿ ಎನ್‌ಡಿಎ ತೊರೆದು ಆರ್‌ಜೆಡಿ ಜೊತೆ ಸೇರಿ ಸರ್ಕಾರ ರಚಿಸಿದರು. ಈಗ ಬಿಜೆಪಿ ವಿರುದ್ಧದ ‘ಇಂಡಿಯಾ’ ಮೈತ್ರಿಕೂಟ ಸೇರಿದ್ದಾರೆ. ಆದರೆ ಅವರಿಗೆ ಇಂಡಿಯಾ ಎಂಬ ಹೆಸರಿನ ಬಗ್ಗೆ ಅಸಮಾಧಾನ ಇರುವ ಕಾರಣ ಅವರು ಬೆಂಗಳೂರು ಸಭೆಯಿಂದ ಬೇಗ ಹೊರನಡೆದರು. ಹೀಗಾಗಿ ಹಿಂದೆ ಎನ್‌ಡಿಎ ಜೊತೆ ಇದ್ದ ಕಾರಣ, ನಿತೀಶ್ ಯಾವ ಸಮಯದಲ್ಲಾದರೂ ಮರಳಿ ಎನ್‌ಡಿಎಗೆ ಬರಬಹುದು’ ಎಂದು ಅಠವಾಳೆ ಹೇಳಿದ್ದಾರೆ.
ನಿತೀಶ್ ಕುಮಾರ್ ಎನ್‌ಡಿಗೆ ಮರಳಲಿದ್ದಾರೆ ಅನ್ನೋದು ರಾಮದಾಸ್ ಅಠವಾಳೆ ಅವರ ವೈಯುಕ್ತಿಕ ಅಭಿಪ್ರಾಯ. ಅವರು ಬಿಜೆಪಿ ವಕ್ತಾರ ಅಲ್ಲ, ಎನ್‌ಡಿಎ ವಕ್ತಾರನೂ ಅಲ್ಲ. ರಿಪಬ್ಲಿಕ್ ಪಾರ್ಟಿ ಮುಖ್ಯಸ್ಥರಾಗಿರುವ ಅಠವಾಳೆ, ಎನ್‌ಡಿಎ ಕೂಟದ ಸದಸ್ಯರಾಗಿದ್ದಾರೆ. ಜೊತೆಗೆ ಕೇಂದ್ರದ ಮಂತ್ರಿಯೂ ಆಗಿದ್ದಾರೆ. ಅವರ ಅಭಿಪ್ರಾಯ ಬಿಜೆಪಿಯ ಅಭಿಪ್ರಾಯವಲ್ಲ. ನಿತೀಶ್ ಕುಮಾರ್ ಬಿಜೆಪಿಗೆ ಬರಬೇಕು ಅಂದಕೊಂಡರೂ ಇಲ್ಲಿ ಬಾಗಿಲು ತೆರೆದಿಲ್ಲ. ಯಾವತ್ತೂ ಮುಚ್ಚಿದೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
2024ರಲ್ಲಿ ಮೋದಿಗೆ ಎದುರಾಗಲಿದ್ಯಾ ಅಸಲಿ ಅಗ್ನಿಪರೀಕ್ಷೆ..?: ಪ್ರಧಾನಿ ವಿರುದ್ಧ ದಶಾಶ್ವಮೇಧ.. ಏನಿದು ಯುದ್ಧವ್ಯೂಹ..?
ಇಂಡಿಯಾ ಹೆಸರು, ವಿಪಕ್ಷಗಳ ನಡೆಗೆ ಬೇಸಗೊಂಡಿದ್ದಾರೆ ಅನ್ನೋ ಸುದ್ದಿಯನ್ನು ಜೆಡಿಯು ನಾಯಕರು ತಳ್ಳಿ ಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಯು ಅಧ್ಯಕ್ಷ ಲಲನ್ ಸಿಂಗ್, ವಿಪಕ್ಷಗಳನ್ನು ಒಗ್ಗೂಡಿಸಲು ಸಾಕಷ್ಟುಶ್ರಮಿಸಿದ ನಿತೀಶ್ ಹೆಸರಿನ ವಿಷಯದಲ್ಲಿ ಬೇಸರಗೊಳ್ಳಲು ಸಾಧ್ಯವೇ ಇಲ್ಲ. ಇದೆಲ್ಲಾ ಬಿಜೆಪಿ ನೇತೃತ್ವದ ಎನ್‌ಡಿಎದ ಅಪಪ್ರಚಾರ ಎಂದು ಟೀಕಿಸಿದ್ದಾರೆ.
