ಕಾನೂನಾ ತ್ಮಕವಾಗಿ ಸೈಟ್ ತಗೊಂಡ್ರ ಕಷ್ಟ, ವಾಪಸ್ ಕೊಟ್ಟರೂ ಕಷ್ಟ. ಈ ವಿಚಾರದಲ್ಲಿ ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ನಾವು ತಲೆಕೆಡಿಸಿಕೊಳ್ಳಲ್ಲ. ಈ ಬಗ್ಗೆ ರಾಜ್ಯಪಾಲರ ಬದಲು ಪ್ರಧಾನಿ, ರಾಷ್ಟ್ರಪತಿಗೇ ಬೇಕಿದ್ದರೂ ಬಿಜೆಪಿಯವರು ದೂರು ನೀಡಲಿ ಎಂದ ಸಚಿವ ಪ್ರಿಯಾಂಕ್ ಖರ್ಗೆ 

ನವದೆಹಲಿ(ಅ.15): ಭೂ ವ್ಯವಹಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನ ಸಂಪೂರ್ಣ ಉನ್ನತ ನಾಯಕತ್ವ (ಖರ್ಗೆ) ಭಾಗಿಯಾಗಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ ಹಾಗೂ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರು, ತಮ್ಮ ಕುಟುಂಬದ ಟ್ರಸ್ಟ್‌ಗೆ ಹಂಚಿಕೆ ಆಗಿದ್ದ ಭೂಮಿಯನ್ನು ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಮರಳಿಸಲು 2 ದಿನದ ಹಿಂದೆ ನಿರ್ಧರಿಸಿದರು. ಈ ಬಗ್ಗೆ ಸೋಮವಾರ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, 'ಕಾನೂನಿನ ಕುಣಿಕೆ ಯಿಂದ ತಪ್ಪಿಸಿಕೊಳ್ಳಲು ಖರ್ಗೆ ಕುಟುಂಬದ ಟ್ರಸ್‌ಗೆ ಪಡೆದಿದ್ದ ಭೂಮಿ ವಾಪಸು ಮಾಡಲಾಗಿದೆ. ಆದರೆ ಇದರಿಂದ ಭೂ ಅಕ್ರಮ ನಡೆದಿದೆ ಎಂಬುದು ಸಾಬೀತಾಗಿದೆ.

ತಪ್ಪು ಮಾಡಿಲ್ಲ ಎಂದರೆ ನಿವೇಶನ ವಾಪಸ್ ಕೊಟ್ಟಿದ್ದು ಯಾಕೆ? ಸಿದ್ದರಾಮಯ್ಯ, ಖರ್ಗೆಗೆ ಯತ್ನಾಳ್ ಪ್ರಶ್ನೆ

ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿ ಮತ್ತು ವಿನೋಬಾ ಭಾವೆಯವರ 'ಭೂದಾನ' ಚಳವಳಿ ಜತೆ ಸಂಬಂಧ ಹೊಂದಿದ್ದ ಪಕ್ಷವು ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಪ್ರೇರಣೆಯಿಂದ 'ಭೂಕಬಳಿಕೆ' ಪಕ್ಷವಾಗಿ ಮಾರ್ಪಟ್ಟಿದೆ' ಎಂದರು. 

'ನ್ಯಾಷನಲ್ ಹೆರಾಲ್ಡ್ ಪರಭಾರೆ ಕೇಸಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಆರೋಪಿಗಳು. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹೋಟ್, ಕಮಲ್ ನಾಥ್ ಮತ್ತು ಭೂಪೇಶ್ ಬಾಘಲ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದವೂ ಭೂ ಅಕ್ರಮ ಆರೋಪವಿದೆ. ಹೀಗೆ ಇಡೀ ಕಾಂಗ್ರೆಸ್‌ನ ಸಂಪೂರ್ಣ ಉನ್ನತ ನಾಯಕತ್ವವು ಭೂಕ ಬಳಿಕೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದು ಸಾಬೀತಾಗಿದೆ. ಕದ್ದ ಆಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದರೆ ಕಳ್ಳನನ್ನು ಬಿಡುವುದಿಲ್ಲ. ಹೀಗಾಗಿ ಭೂಮಿ ವಾಪಸ್ ನೀಡಿದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಲ್ಲವೇ' ಎಂದು ಪ್ರಶ್ನಿಸಿದರು.

ರೈತ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ಸಾಬೀತು: ಬಿಜೆಪಿ 

ನವದೆಹಲಿ: 'ಹರ್ಯಾಣದಲ್ಲಿ ರೈತರು ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ದ ಹೋರಾಡಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದರು' ಎಂದು ರೈತ ಸಂಘದ ನಾಯಕ ಗುರ್ನಾಮ್ ಸಿಂಗ್ ಚರುನಿ ಅವರ ಹೇಳಿಕೆ ಉಲ್ಲೇಖಿ ಸಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, 'ರೈತ ಹೋರಾಟವು ಕಾಂಗ್ರೆಸ್ ಪ್ರಾಯೋಜಿತ ಎಂಬುದು ಈಗ ಸ್ಪಷ್ಟವಾಗಿದೆ' ಎಂದರು.

ಭೂಮಿ ವಾಪಸ್‌ ಮಾಡಿ ಮಲ್ಲಿಕಾರ್ಜುನ ಖರ್ಗೆ ತಪ್ಪೊಪ್ಪಿಗೆ: ರಾಜೀವ್ ಚಂದ್ರಶೇಖರ್

ಬಿಜೆಪಿಯವರು ಬಟ್ಟೆ ಹರಕೊಂಡೂ ನಾವು ತಲೆಕೆಡಿಸಿಕೊಳ್ಳಲ್ಲ 

ಕಾನೂನಾತ್ಮಕವಾಗಿ ಸೈಟ್ ತಗೊಂಡ್ರ ಕಷ್ಟ, ವಾಪಸ್ ಕೊಟ್ಟರೂ ಕಷ್ಟ. ಈ ವಿಚಾರದಲ್ಲಿ ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ನಾವು ತಲೆಕೆಡಿಸಿಕೊಳ್ಳಲ್ಲ. ಈ ಬಗ್ಗೆ ರಾಜ್ಯಪಾಲರ ಬದಲು ಪ್ರಧಾನಿ, ರಾಷ್ಟ್ರಪತಿಗೇ ಬೇಕಿದ್ದರೂ ಬಿಜೆಪಿಯವರು ದೂರು ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.