Asianet Suvarna News Asianet Suvarna News

2023ರ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಎಚ್ಚರಿಕೆ ಗಂಟೆ, ಹಾಲಿ 15-17 ಶಾಸರಿಗೆ ಸೋಲು

* 2023ರ ವಿಧಾನಸಭೆ ಚುನಾವಣೆ- ಬಿಜೆಪಿಗೆ ಎಚ್ಚರಿಕೆ ಗಂಟೆ
* ಹಾಲಿ 15-17 ಶಾಸಕರು ಸೋಲ್ತಾರೆ ಎನ್ನುತ್ತಿವೆ ಸಮೀಕ್ಷೆ
* ಯಾವ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಬಹುದು? ಎಲ್ಲೆಲ್ಲಿ 50-50 ಇದೆ.?
* ಸಮೀಕ್ಷಾ ವರದಿ ಆಧರಿಸಿ ರಣತಂತ್ರ ಹೆಣೆಯುತ್ತಿರೋ ಬಿಜೆಪಿ

BJP Constancy survey For Upcoming Karnataka Assembly Elections 2023 rbj
Author
Bengaluru, First Published Jun 25, 2022, 3:11 PM IST

ವರದಿ - ರವಿ ಶಿವರಾಮ್

ಬೆಂಗಳೂರು, (ಜೂನ್.25): 2
023ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಬಿರುಸಿನ ತಯಾರಿ ಆರಂಭಿಸಿವೆ. ಎಲ್ಲಾ ಪಕ್ಷಗಳು ಗೆಲುವಿಗೆ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದೆ. ಬಿಜೆಪಿ ಟಾರ್ಗೆಟ್ 150.! ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ತೇವೆ ಎಂದು ಭಾಷಣ ಮಾಡ್ತಾರೆ. ಮಾಧ್ಯಮದ ಮುಂದೆ ಬಂದಾಗಲೆಲ್ಲಾ ತಮ್ಮ ಟಾರ್ಗೆಟ್ ಬಗ್ಗೆ ಜೋರು ದನಿಯಲ್ಲಿ ಹೇಳಿಕೆ ನೀಡ್ತಾರೆ. ಆದ್ರೆ ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಹೊರಬಂದಿದೆ. ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಬಹುಮತ ಕಷ್ಟ. ಮಾತ್ರವಲ್ಲ ಹಾಲಿ ಇರುವ ಶಾಸಕರಿಗೆ ಸೋಲಿನಿ ಭೀತಿ ಇದೆ.

ಹಾಲಿ 15-17 ಶಾಸಕರು ಸೋಲ್ತಾರೆ ಎನ್ನುತ್ತಿವೆ ಸಮೀಕ್ಷೆ
ಹೌದು, ಬಿಜೆಪಿ ಟಾರ್ಗೆಟ್ ಏನೊ ದೊಡ್ಡದಿದೆ ನಿಜ. ಆದರೆ ಬಿಜೆಪಿಗೆ ಆತಂಕದ ವಿಚಾರ ಅಂದ್ರೆ ಹಾಲಿ ಶಾಸಕರಲ್ಲಿ ಸುಮಾರು 15- 17 ಶಾಸಕರು ಸೋಲುವ ಸಾಧ್ಯತೆ ಇದೆ. ಹೀಗಾಗಿ ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆ. ಹಾಲಿ ಶಾಸಕರ ಮೇಲೆ ಆಡಳಿತ ವಿರೋಧಿ ಅಲೆ ಇದೆ. ಇದ್ರಿಂದ ಅಂತ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲು ಪಕ್ಷ ಚಿಂತನೆ ನಡೆಸಿದೆ. 

Karnataka Politics: ಬಿಜೆಪಿ ಹಾಲಿ 120 ಶಾಸಕರ ಪೈಕಿ 15 ಶಾಸಕರಿಗೆ ಸೋಲಿನ ಭೀತಿ

ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ?
ಹಳೆ ಮೈಸೂರು ಭಾಗಗಳಾದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿಯ ಸಂಘಟನೆ ಇನ್ನೂ ಚುರುಕು ಪಡೆದಿಲ್ಲ. ಹೀಗಾಗಿ ಬಿಜೆಪಿಗೆ ಈ ಭಾಗದಲ್ಲಿ ಗೆಲುವು ಸುಲಭದ ಮಾತಲ್ಲ. ಈ ಭಾಗದಲ್ಲಿ ಪಕ್ಷ ಗಟ್ಟಿಯಾಗಬೇಕಿದೆ. ವರದಿ ಆಧರಿಸಿ ಈಗಾಗಲೇ ಕೆಲಸ ಆರಂಭ ಮಾಡಿರುವ ಬಿಜೆಪಿ ಪಕ್ಷ ವೀಕ್ ಇರುವ ಕಡೆ ಅನ್ಯ ಪಕ್ಷದ ಶಾಸಕರನ್ನು, ಸ್ಥಳಿಯ ಲೀಡರ್ಸ್ ಗಳನ್ನು ಸೆಳೆದು ಸಂಘಟನೆ ಮಾಡಲು ಕಸರತ್ತು ಆರಂಭಿಸಿದೆ. 

ಶಾಸಕರ ಸೋಲಿಗೆ ಕಾರಣ ಏನು?
ಸಮೀಕ್ಷೆಯ ಮಾಹಿತಿ ಪ್ರಕಾರ ಹದಿನೈದಕ್ಕೂ ಹೆಚ್ಚು ಶಾಸಕರು ಸೋಲುತ್ತಾರೆ ಎನ್ನಲಾಗಿದ್ದು, ಅದಕ್ಕೆ ಕಾರಣ ಅವರ ಕಾರ್ಯವೈಖರಿ ಒಂದು ಕಡೆಯಾದರೆ, ಕಾರ್ಯಕರ್ತರಿಗೆ ಸ್ಪಂದಿಸದೇ ಇರೋದು, ಪಕ್ಷದ ಚಿನ್ಹೆಯಡಿ ಗೆಲ್ತೇವ ಎನ್ನುವ ಭ್ರಮೆಯಲ್ಲಿ ಸಾಗುತ್ತಿರೋದು, ಬೇರೆ ಪಕ್ಷದಿಂದ ಬಂದು ಮೂಲ ಕಾರ್ಯಕರ್ತರ ಜೊತೆ ಉತ್ತಮ ಸಂಬಂಧ ಬೆಳಸಿಕೊಳ್ಳದೆ ತನ್ನದೆ ಆದ ಒಂದಷ್ಟು ಜನರ ಟೀಮ್ ಕಟ್ಟಿಕೊಂಡಿರೋದು, ವಿರೋಧಿ ಪಡೆ ನಾಯಕರು ಪ್ರಭಲ ಆಗಿರೋದು ಸೇರಿ ಇನ್ನು ಅನೇಕ ಕಾರಣಗಳಿಂದ ಕೆಲವು ಹಾಲಿ ಶಾಸಕರ ಮೇಲೆ ತೂಗತ್ತಿ ನೇತಾಡುತ್ತಿದೆ. ಹೀಗಾಗಿ ಅಂತಹ ಕಡೆಗಳಲ್ಲಿ ಪಾರ್ಟಿ ಹೊಸ ಮುಖ ತಲಾಶ್ ಮಾಡಲು ಆರಂಭಿಸಿದೆ ಎನ್ನುತ್ತಿವೆ ಮೂಲಗಳು...

105 ಕ್ಷೇತ್ರದಲ್ಲಿ ಬಿಜೆಪಿ ಬೇಸ್ ಗಟ್ಟಿಯಿದೆ
ಹಾಲಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ಸೋತರು, ಇನ್ನು ಸುಮಾರು ಹತ್ತು ಕಡೆಗಳಲ್ಲಿ ತನ್ನ ಸಾಮರ್ಥ್ಯ ವೃದ್ದಿ ಮಾಡಿಕೊಂಡಿದೆಯಂತೆ. ಎಲ್ಲಾ ಸೇರಿದರೆ ಸುಮಾರು 105 ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಪ್ರಭಲವಾಗಿದ್ದು ಚುನಾವಣೆ ಕಣಣದಲ್ಲಿ ಪ್ರಭಲ ಪೈಪೋಟಿ ನೀಡಬಹುದು ಎನ್ನುತ್ತಿವೆ ವರದಿ. ಹಾಗಂತ 105 ಕ್ಷೇತ್ರದಲ್ಲಿ ಬಿಜೆಪಿ ಗೆದ್ದೆ ಬಿಡತ್ತೆ ಎನ್ನೋ ಅರ್ಥವಲ್ಲ. ೧೦೫ ಕ್ಷೇತ್ರದಲ್ಲಿ ಪ್ರಭಲ ಪೈಪೋಟಿ ನೀಡಲಿದ್ದು ಅದಕ್ಕೆ ಬೇಕಾದ ಸಂಘಟನೆ, ನಾಯಕತ್ವ ಇದೆ ಎನ್ನೋದು ಲೆಕ್ಕಾಚಾರ..

ಯಾವ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಬಹುದು? ಎಲ್ಲೆಲ್ಲಿ 50-50 ಇದೆ.?
ವಿಧಾನಸಭಾ ಚುನಾವಣೆಗೆ ಇನ್ನೂ 9 ತಿಂಗಳು ಬಾಕಿ ಇದ್ದು ಚುನಾವಣೆಗೆ ಸಿದ್ಧವಾಗಿ ಎನ್ನುವ ಸೂಚನೆಯನ್ನು ರಾಜ್ಯ ಬಿಜೆಪಿಗೆ ವರಿಷ್ಠರು ನೀಡಿದ್ದಾರೆ. ಮಾಹಿತಿ ಪ್ರಕಾರ ಬಿಜೆಪಿ ಈ ಬಾರಿ ಸುಮಾರು 7 ಕ್ಷೇತ್ರಗಳಲ್ಲಿ ಹೊಸದಾಗಿ ಖಾತೆ ತೆರೆಯುವ ಅವಕಾಶ ಇದೆಯಂತೆ. ಮೊದಲನೆಯದಾಗಿ ಬ್ಯಾಟರಾಯನಪುರ. ಮಾಜಿ ಸಚಿವ ಹಾಲಿ ಶಾಸಕ ಕೃಷ್ಣಾ ಬೈರೆಗೌಡರು ಪ್ರತಿನಿಧಿಸುವ ಕ್ಷೇತ್ರ. ಕಳೆದ ಬಾರಿ ಬಿಜೆಪಿಯ ಎ ರವಿ ಸುಮಾರು ಐದು ಸಾವಿರ ಮತಗಳ ಅಂತರದಲ್ಲಿ ಪರಾಜಿತರಾಗಿದ್ರು. ಅದೇ ರೀತಿ 2018 ರ ಚುನಾವಣೆಯಲ್ಲಿ ಬಿಜೆಪಿ ಸುಮಾರು ಅರವತ್ತು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿದೆ. ಆ ಲೆಕ್ಕಾಚಾರ ಆಧಾರ ಮತ್ತು ಕಳೆದ ಬಾರಿ ಸೋತಿದ್ದ ಕಡಿಮೆ ಅಂತರದಲ್ಲಿ ಸೋತಿದ್ದ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಗಟ್ಟಿ ಮಾಡಿದೆ‌. ಅದರಂತೆ, ಸಕಲೇಶಪುರ, ಅಫ್ಜಲ್ ಪುರ, ಚಳ್ಳಕೆರೆ, ಹುಮ್ನಾಬಾದ್, ಕುಣಿಗಲ್, ಗುಬ್ಬಿ ಈ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹೊಸದಾಗಿ ಖಾತೆ ತೆರೆಯುವ ಅವಕಾಶ ಸದ್ಯಕ್ಕೆ ಬಿಜೆಪಿಗೆ ಹೆಚ್ಚಿದೆ ಎನ್ನುತ್ತಿವೆ ವರದಿ...
ಅದೇ ರೀತಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ ಬಾದಾಮಿ, ಶೃಂಗೇರಿ, ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರ, ಮಂಡ್ಯನಗರ, 
ಹೀಗೆ ಇನ್ನು ಕೆಲವು ಕ್ಷೇತ್ರದಲ್ಲಿ ಬಿಜೆಪಿ ಗೆಲುವು 50-50 ಎನ್ನುವಂತಿದೆ ಎಂಬ ಮಾಹಿತಿ ಸಮೀಕ್ಷೆಯಿಂದ ತಿಳಿದು ಬಂದಿದೆ.

ಸಮೀಕ್ಷಾ ವರದಿ ಆಧರಿಸಿ ರಣತಂತ್ರ ಹೆಣೆಯುತ್ತಿರೋ ಬಿಜೆಪಿ
ಬಿಜೆಪಿಯ ಪ್ಲಸ್ ಮತ್ತು ಮೈನಸ್ ಲೆಕ್ಕಾಚಾರದ ಮೇಲೆ ಬಿಜೆಪಿ ತನ್ನ ಕಾರ್ಯತಂತ್ರ ವಿಸ್ತರಿಸಿದೆ. ಅನ್ಯ ಪಕ್ಷದ ಪ್ರಮುಖ ಶಾಸಕರು, ಮಾಜಿ ಶಾಸಕರು, ಜಾತಿವಾರು ಲೆಕ್ಕಾಚಾರದ ಆಧಾರದ ಮೇಲೆ ಹಳೆ ಮೈಸೂರು ಸೇರಿದಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅನ್ಯ ಪಕ್ಷದ ಪ್ರಮುಖ ಲೀಡರ್ ಗಳನ್ನು ಬಿಜೆಪಿ ಸಂಪರ್ಕ ಮಾಡಿದೆ ಎನ್ನುತ್ತಿವೆ ಮೂಲಗಳು. ಜನಪ್ರಿಯತೆ ಇರುವ , ತನ್ನ ಕ್ಷೇತ್ರದ ಹಲರತಾಗಿ ಅಕ್ಕ ಪಕ್ಕದ ಕ್ಷೇತ್ರದ ಮೇಲೆ ಪ್ರಭಾವ ಬೀರುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಕೇಸರಿ ನಾಯಕರು ಈಗಾಗಲೇ ಕಾರ್ಯಾಚರಣೆ ಆರಂಭ ಮಾಡಿದ್ದಾರೆ ಎನ್ನಲಾಗಿದೆ. 

ಬಿಗ್ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಆ ಟಾರ್ಗೆಟ್ ರೀಚ್ ಆಗೋದು ಸದ್ಯದ ಮಟ್ಟಿಗೆ ಕಷ್ಟ ಸಾಧ್ಯ. ಆದ್ರೆ ಕೊನೆ ಪಕ್ಷ ನೂರರ ಗಡಿ ತಲುಪುವ ಸಲುವಾಗಿಯಾದರ್ರೂ ಇನ್ನು ಹೆಚ್ಚಿನ ಬೆವರು ಸುರಿಸಬೇಕಿದೆ.

Follow Us:
Download App:
  • android
  • ios