Karnataka Assembly Elections 2023: ಬಿಜೆಪಿ-ಕಾಂಗ್ರೆಸ್‌ ‘ಲಿಂಗಾಯತ ಡ್ಯಾಂ’ ಫೈಟ್‌..!

ರಾಜ್ಯದಲ್ಲಿ ಬದಲಾವಣೆ ಸಮಯ ಬಂದಿದೆ. ಅಣೆಕಟ್ಟು ಒಡೆದು ಹೊರ ಬಂದ ನೀರು ಮತ್ತೆ ಅಣೆಕಟ್ಟು ಸೇರಲು ಸಾಧ್ಯವಿಲ್ಲ. ಎಲ್ಲ ನೀರು ಕಾಂಗ್ರೆಸ್‌ ಎಂಬ ಸಮುದ್ರ ಸೇರುತ್ತಿದ್ದು, ಬಿಜೆಪಿಯ ಭ್ರಷ್ಟಆಡಳಿತ ಬಡಿದೋಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದ ಡಿ.ಕೆ. ಶಿವಕುಮಾರ್‌. 

BJP Congress Lingayat Dam Fight During Karnataka Assembly Elections 2023 grg

ಬೆಂಗಳೂರು(ಏ.23): ‘ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ್‌ ಪಾಟೀಲ್‌ ಹೆಬ್ಬಾಳ, ಕಲ್ಯಾಣ ಕರ್ನಾಟಕ ಬಿಜೆಪಿ ನಾಯಕರಾದ ಶಿವಾನಂದ ಪಾಟೀಲ್‌, ಅರವಿಂದ ಚೌಹಾಣ್‌ ಅವರು ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯ ಲಿಂಗಾಯತ ಅಣೆಕಟ್ಟು ಒಡೆದು ನೀರು ಹರಿದು ಬರುತ್ತಿರುವುದಕ್ಕೆ 3 ಬಾರಿ ಶಾಸಕರಾಗಿದ್ದ ವಿಶ್ವನಾಥ್‌ ಬಿಜೆಪಿ ತೊರೆದಿರುವುದೇ ಸಾಕ್ಷಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಬದಲಾವಣೆ ಸಮಯ ಬಂದಿದೆ. ಅಣೆಕಟ್ಟು ಒಡೆದು ಹೊರ ಬಂದ ನೀರು ಮತ್ತೆ ಅಣೆಕಟ್ಟು ಸೇರಲು ಸಾಧ್ಯವಿಲ್ಲ. ಎಲ್ಲ ನೀರು ಕಾಂಗ್ರೆಸ್‌ ಎಂಬ ಸಮುದ್ರ ಸೇರುತ್ತಿದ್ದು, ಬಿಜೆಪಿಯ ಭ್ರಷ್ಟಆಡಳಿತ ಬಡಿದೋಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

ಸಿಎಂ ಸ್ಥಾನಕ್ಕೆ ನಾನೂ ಸಮರ್ಥ, ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್‌ ಹಾಕಿದ್ರಾ ಲಿಂಗಾಯತ ನಾಯಕ ಎಂಬಿಪಾ?

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಸಮ್ಮುಖದಲ್ಲಿ ವಿಶ್ವನಾಥ್‌ ಪಾಟೀಲ್‌ ಹೆಬ್ಬಾಳ, ಶಿವಾನಂದ ಪಾಟೀಲ್‌, ಅರವಿಂದ ಚೌಹಾಣ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಕಾಂಗ್ರೆಸ್‌ ತತ್ವ, ಸಿದ್ಧಾಂತ ಒಪ್ಪಿ ಕಾಂಗ್ರೆಸ್‌ ಸೇರಲು ಬಯಸಿದ್ದಾರೆ. ಹೀಗಾಗಿ ನಾನು ವಿವಿಧ ಮೂಲೆಯ ಜಿಲ್ಲಾ ಮತ್ತು ಬ್ಲಾಕ್‌ ಘಟಕಗಳಿಂದ ಸ್ಥಳೀಯ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಅನುಮತಿ ನೀಡಿದ್ದೇನೆ. ರಾಜ್ಯದಲ್ಲಿ ಈಗ ಬದಲಾವಣೆಯ ಕಾಲ ಬರುತ್ತಿದ್ದು, ಇದು ನಿಮ್ಮ ಕಾಲ. ಭ್ರಷ್ಟಾಚಾರ ಬಡಿದೋಡಿಸುವ ಬದಲಾವಣೆ ಸಮಯದಲ್ಲಿ ಎಲ್ಲರೂ ನಮ್ಮ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.

ಚಿತ್ತಾಪುರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ ಪಾಟೀಲ ಬಿಜೆಪಿ ತೊರೆದಿದ್ದಾರೆ. ಇವರ ಜತೆಗೆ ಜಿಲ್ಲಾ ಪಂಚಾಯ್ತಿಯಲ್ಲಿ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿದ್ದ ಅರವಿಂದ್‌ ಚೌಹಾಣ್‌ ಸೇರಿದಂತೆ ಹಲವರು ನಾಯಕರು ಪಕ್ಷ ಸೇರ್ಪಡೆಯಾಗಿದ್ದಾರೆ. ತನ್ಮೂಲಕ ಈ ಭಾಗದಲ್ಲಿ ಪಕ್ಷದ ಶಕ್ತಿ ಹೆಚ್ಚಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios