ಒಂದೆಡೆ ವಿಪಕ್ಷಗಳ ಮೈತ್ರಿ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದಕ್ಕೆ ಸೆಡ್ಡು ಹೊಡೆದಿರುವ ಬಿಜೆಪಿ ನಾಳೆ ಎನ್‌ಡಿಎ ಮಿತ್ರ ಪಕ್ಷಗಳ ಸಭೆ ಕರೆದಿದೆ. ಬರೋಬ್ಬರಿ 38 ಪಕ್ಷಗಳು ಎನ್‌ಡಿಎ ಸಭೆಗೆ ಬೆಂಬಲ ವ್ಯಕ್ತಪಡಿಸಿದೆ.

ನವದೆಹಲಿ(ಜು.17) ಬೆಂಗಳೂರಿನಲ್ಲಿ ವಿಪಕ್ಷಗಳ ಮೈತ್ರಿ ಸಭೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಸೇರಿದ್ದಾರೆ. 28 ಪಕ್ಷದ ಪ್ರಮುಖ 80 ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಈ ಸಭೆ ನಡೆಯುತ್ತಿದೆ. ಇದೇ ವೇಳೆ ಮೈತ್ರಿಗೆ ಮತ್ತಷ್ಟು ಪಕ್ಷಗಳನ್ನು ಸೇರಿಸಿಕೊಳ್ಳಲು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿಪಕ್ಷ ಮೈತ್ರಿಗೆ ತಿರುಗೇಟು ನೀಡಲು ಬಿಜೆಪಿ ಎನ್‌ಡಿಎ ಮಿತ್ರ ಪಕ್ಷಗಳ ಸಭೆ ನಾಳೆ(ಜು.18)ಕ್ಕೆ ಆಯೋಜಿಸಿದೆ. ಎನ್‌ಡಿಎ ಸಭೆಗೆ ಬರೋಬ್ಬರಿ 38 ಪಕ್ಷಗಳು ಬೆಂಬಲ ಸೂಚಿಸಿದೆ. ನಾಳೆ ನವದೆಹಲಿಯಲ್ಲಿ ಅಶೋಕ ಹೊಟೆಲ್‌ನಲ್ಲಿ ಎನ್‌ಡಿಎ ಸಭೆ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ವಿಪಕ್ಷಗಳು ಮೈತ್ರಿ ಸಭೆ ಬಿಗಿಗೊಳಿಸುತ್ತಿರುವ ಬೆನ್ನಲ್ಲೇ ಇದೀಗ ಬಿಜೆಪಿ ಕೂಡ ಎನ್‌ಡಿಎ ಕೂಟ ಬಲಪಡಿಸಲು ಮುಂದಾಗಿದೆ. ಇದೀಗ ಜೆಡಿಎಸ್ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾ ಅನ್ನೋ ಪ್ರಶ್ನೆ ಹೆಚ್ಚಾಗಿದೆ. ಇತ್ತ ಕಾಂಗ್ರೆಸ್ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್‌ಗೆ, ವಿಪಕ್ಷಗಳ ಮೈತ್ರಿಕೂಟಕ್ಕೆ ಅಹ್ವಾನ ನೀಡಿಲ್ಲ. ಇದರ ಬೆನ್ನಲ್ಲೇ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಆಹ್ವಾನ ಬಂದರೆ ನೋಡುವುದಾಗಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ, ಮೈತ್ರಿ ಸಭೆಗೂ ಮುನ್ನವೇ ಶಾಕ್ ನೀಡಿದ ಕಾಂಗ್ರೆಸ್!

ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಕೈಜೋಡಿಸಿರು ಎಕನಾಥ್ ಶಿಂಧೆ ನೇೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳ ಮುಖಂಡರು ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಹಾರದ ಆರ್ ಎಲ್ ಜೆಪಿ ಮುಖಂಡ ರಾಮವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಜೊತೆ ಬಿಜೆಪಿ ಮಾತುಕತೆ ನಡೆಸಿದೆ. ಹಿಂದೂಸ್ನಾನ್ ಅವಾಮಿ ಮೋರ್ಚಾದ ದಲಿತ ನಾಯಕ ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ವಿಕಾಸ್ ಶೀಲ್ ಪಕ್ಷದ ಮುಕೇಶ್ ಸಾಹ್ನಿ, ಉಪೇಂದ್ರ ಸಿಂಗ್ ಖುಶ್ವಾಗೆ ಈಗಾಗಲೇ ಎನ್‌ಡಿಎ ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ.

ಉತ್ತರ ಪ್ರದೇಶದ ಒಬಿಸಿ ನಾಯಕ‌ ಓಂ ಪ್ರಕಾಶ್ ರಾಜ್ ಭರ್ ಈಗಾಗಲೇ ಎನ್ ಡಿ ಎ ಮರುಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.ಪಂಜಾಬಿನ ಅಕಾಲಿದಳ, ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷಗಳು ಎನ್ ಡಿ ಎ ಕೂಟ ಹಿಂದೆ ದೂರ ಉಳಿಯಲು ನಿರ್ಧರಿಸಿ ಎನ್ನಲಾಗುತ್ತಿದೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ ಜನಸೇನಾ ಜೊತೆ ಹಾಗು ಪಂಜಾಬ್ ಏಕಾಂಗಿಯಾಗಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ.

ದಿಲ್ಲಿ ಸುಗ್ರೀವಾಜ್ಞೆಗೆ ಬೆಂಬಲ ಇಲ್ಲ: ಕಾಂಗ್ರೆಸ್‌ ಘೋಷಣೆ; ವಿಪಕ್ಷ ಸಭೆ ಬೆನ್ನಲ್ಲೇ ಆಪ್‌-ಕಾಂಗ್ರೆಸ್‌ ಮುನಿಸು ಅಂತ್ಯ

ಎನ್ ಡಿ ಎ ಅಂಗ ಪಕ್ಷಗಳು
ಬಿಜೆಪಿ, ಎಐಎಡಿಎಂಕೆ, ಶಿವಸೇನಾ(ಏಕನಾಥ್ ಶಿಂಧೆ ಬಣ), ಎನ್ ಪಿ ಪಿ, ಎನ್ ಡಿ ಪಿ ಪಿ, ಎಸ್ ಕೆಎಮ್, ಜೆಜೆಪಿ, ಐಎಂಕೆಎಮ್ ಕೆ, ಎಜೆಎಸ್ ಯು, ಆರ್ ಪಿ ಐ, ಎಮ್ ಎನ್ ಎಫ್, ತಮಿಳ್ ಮನಿಲಾ ಕಾಂಗ್ರೆಸ್, ಐಪಿಎಫ್ ಟಿ, ಬಿಪಿಪಿ, ಪಿಎಂಕೆ, ಎಮ್ ಜಿ ಪಿ, ಅಪ್ನಾದಳ್, ಎಜಿಪಿ, ಆರ್ ಎಲ್ ಜೆಪಿ, ನಿಷಾದ್ ಪಾರ್ಟಿ, ಯುಪಿಪಿಎಲ್, ಎಐಆರ್ ಎನ್ ಸಿ, ಜನಸೇನಾ, ಎಚ್ ಎ ಎಮ್, ಎನ್ ಸಿಪಿ ಅಜಿತ್ ಪವಾರ್ ಬಣ, ಆರ್ ಎಲ್ ಎಸ್ ಪಿ, ವಿಐಪಿ, ಎಸ್ ಬಿ ಎಸ್ ಪಿ..ಮುಂತಾದವು