ಚಿಂಚೋಳಿ ಮತಕ್ಷೇತ್ರದ ಚಂದನಕೆರಾ ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ, ಶಾಸಕ ಅವಿನಾಶ ಜಾಧವ್ ಅವರು ಪ್ರಚಾರಕ್ಕೆ ತೆರಳಿದ್ದ ವೇಳೆ ಅವಿನಾಶ ಅವರ ವಾಹನ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆದಿದೆ.
ಚಿಂಚೋಳಿ (ಏ.16): ಚಿಂಚೋಳಿ ಮತಕ್ಷೇತ್ರದ ಚಂದನಕೆರಾ ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ, ಶಾಸಕ ಅವಿನಾಶ ಜಾಧವ್ ಅವರು ಪ್ರಚಾರಕ್ಕೆ ತೆರಳಿದ್ದ ವೇಳೆ ಅವಿನಾಶ ಅವರ ವಾಹನ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆದಿದೆ. ಚಂದನಕೇರಾ ಗ್ರಾಮದ ಎಸ್‌ಸಿ ಓಣಿಯಲ್ಲಿ ಪ್ರಚಾರ ನಡೆಸಿ ತೆರಳುವಾಗ ಈ ಘಟನೆ ನಡೆದಿದ್ದು, ಅವಿನಾಶ ಕಾರು ಸೇರಿದಂತೆ ಆರು ಕಾರುಗಳು ಜಖಂ ಗೊಂಡಿವೆಯಲ್ಲದೆ ಅವಿನಾಶ್ ಬೆಂಗಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲ್ಲು ತೂರಾಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಇದು ಕಾಂಗ್ರೆಸ್ಸಿಗರ ಕೈವಾಡವಾಗಿದೆ ಎಂದು ಶಾಸಕ ಅವಿನಾಶ್ ಜಾಧವ್ ಆರೋಪಿಸಿದ್ದಾರೆ.
ಅವಿನಾಶ ಜಾಧವ್ ಮತಯಾಚನೆ: ಚೇಂಗಟಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅನೇಕ ತಾಂಡಾ/ಗ್ರಾಮಗಳಲ್ಲಿ ಐತಿಹಾಸಿಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಶಾಸಕ ಡಾ.ಅವಿನಾಶ ಜಾಧವ್ ಮತಯಾಚಿಸಿದರು. ಚೆಂಗಟಾ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅವರು, ಸೋಮೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ!
ಚೆಂಗಟಾ ಗ್ರಾಮದಲ್ಲಿ ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕಾಗಿ 9 ಕೋಟಿ ಅಡಕಿಮೋಕ ತಾಂಡಾದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ಕಮ ಬ್ಯಾರೇಜ್ ನಿರ್ಮಿಸಿ ಗ್ರಾಮ/ತಾಂಡಾಗಳಲ್ಲಿದ್ದ ಕುಡಿವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಹೊನ್ನಭಟ್ಟತಾಂಡಾ, ಕಲದೊಡ್ಡಿ ತಾಂಡಾ, ಸಜ್ಜನಕೊಳ್ಳ ತಾಂಡಾ, ಮಳ್ಳಿಕೊಳ್ಳ ತಾಂಡಾ, ದುತ್ತರಗಾ ಹಳ್ಳಿಯಲ್ಲಿ ಜಲಜೀವನ ಮಿಷನ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ನೀರು ಒದಗಿಸಲಾಗಿದೆ. ತಾಲೂಕಿನಲ್ಲಿ ಬಿಜೆಪಿ ಸರ್ಕಾರದಿಂದ ಹಲವು ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. 2023ರ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಬೆಂಬಲಿಸಿರಿ ಎಂದು ಶಾಸಕ ಡಾ. ಅವಿನಾಶ ಜಾಧವ್ ಮತಯಾಚನೆ ಮಾಡಿದರು.
ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ
ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ರಮೇಶ ದುತ್ತರಗಿ ಮಹೇಂದ್ರ ಪ್ರಜಾರಿ, ಅಶೋಕ ಜಾಜೀ, ಭವಾನಿ ಫತ್ತೆಪೂರ, ರವಿ ಪೂಜಾರಿ, ಶಿವಕುಮಾರ ಪೋಚಾಲಿ ಇನ್ನಿತರರು ಮಾತನಾಡಿ ಮತಯಾಚಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
