"

ಬೆಂಗಳೂರು (ನ.14): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 15 ರಲ್ಲಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಇನ್ನುಳಿದ ಎರಡು ಕ್ಷೇತ್ರಗಳಿಗೆ ಪೆಡ್ಡಿಂಗ್ ಇಟ್ಟಿದೆ.

ರಾಣೇಬೆನ್ನೂರು ಹಾಗೂ ಬೆಂಗಳೂರಿನ ಶಿವಾಜಿನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ. 13 ಅನರ್ಹ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ಕರ್ನಾಟಕ ಉಪ ಚುನಾವಣೆ : 11 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

 ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ಕೈತಪ್ಪಿದ್ದು, ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಸವದಿಗೆ ಬೈ ಎಲೆಕ್ಷನ್ ಟಿಕೆಟ್‌ ಇಲ್ಲದಿರುವುದು ಉಪಮುಖ್ಯಮಂತ್ರಿ ಹುದ್ದೆಗೂ ಕಂಟಕ ಎದುರಾಗಿದೆ.

1. ಮಹಾಲಕ್ಷ್ಮೀ ಲೇಔಟ್ - ಕೆ.ಗೋಪಾಲಯ್ಯ
2. ಹೊಸಕೋಟೆ - ಎಂ.ಟಿ.ಬಿ.ನಾಗರಾಜ್
3. ಯಶವಂತಪುರ - S.T.ಸೋಮಶೇಖರ್
4. ಕೆ.ಆರ್.ಪೇಟೆ - ಕೆ.ಸಿ.ನಾರಾಯಣಗೌಡ
5. ಗೋಕಾಕ್ - ರಮೇಶ್ ಜಾರಕಿಹೊಳಿ
6. ಅಥಣಿ - ಮಹೇಶ್ ಕುಮಟಳ್ಳಿ
7. ಯಲ್ಲಾಪುರ - ಶಿವರಾಂ ಹೆಬ್ಬಾರ್
8. ಕಾಗವಾಡ - ಶ್ರೀಮಂತ್ ಪಾಟೀಲ್
9. ಹಿರೇಕೆರೂರು - ಬಿ.ಸಿ.ಪಾಟೀಲ್
10. ಹೊಸಪೇಟೆ - ಆನಂದ್ ಸಿಂಗ್
11. ಚಿಕ್ಕಬಳ್ಳಾಪುರ - ಡಾ.ಕೆ.ಸುಧಾಕರ್
12. ಹುಣಸೂರು - ಎಚ್.ವಿಶ್ವನಾಥ್
13. ಕೆ.ಆರ್.ಪುರಂ - ಬೈರತಿ ಬಸವರಾಜ್ 

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.