ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿ ಭೋವಿ ಸಮಾಜದಿಂದ ಸಮಾವೇಶ

ಚುನಾವಣೆ ಸಂದರ್ಭದಲ್ಲಿ ಭೋವಿ ಸಮುದಾಯದ ಮೇಲೆ ಬರುವ ಆರೋಪವನ್ನು ದೂರವಾಗಿಸುವ ನಿಟ್ಟಿನಲ್ಲಿ ಮತದಾರರು ಆಸೆ, ಆಮಿಷಗಳಿಗೆ ಒಳಗಾಗದೆ ಜೆಡಿಎಸ್ ಪಕ್ಷದ ಗೆಲುವಿಗಾಗಿ ಒಗ್ಗಟ್ಟು ಪ್ರದರ್ಶಿಸಲು ಕರೆ ನೀಡಲಾಗಿದೆ. 

Bhovi Samaja support JDS candidate in Kolara gow

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ 

ಕೋಲಾರ (ಫೆ.28): ಚುನಾವಣೆ ಸಂದರ್ಭದಲ್ಲಿ ಭೋವಿ ಸಮುದಾಯದ ಮೇಲೆ ಬರುವ ಆರೋಪವನ್ನು ದೂರವಾಗಿಸುವ ನಿಟ್ಟಿನಲ್ಲಿ ಮತದಾರರು ಆಸೆ, ಆಮಿಷಗಳಿಗೆ ಒಳಗಾಗದೆ ಜೆಡಿಎಸ್ ಪಕ್ಷದ ಗೆಲುವಿಗಾಗಿ ಒಗ್ಗಟ್ಟು ಪ್ರದರ್ಶಿಸಿ ಹೊಸ ಸಂದೇಶ ನೀಡಬೇಕೆಂದು ಭೋವಿ ಸಮಾಜದ ಹಿರಿಯ ಮುಖಂಡೆ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಕರೆ ನೀಡಿದರು. ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‍ರನ್ನು ಬೆಂಬಲಿಸಿ ನಡೆದ, ಭೋವಿ ಸಮಾಜದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಜೆಡಿಎಸ್  ವರಿಷ್ಠ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರು ಭೋವಿ ಸಮಾಜಕ್ಕೆ ಸದಾಕಾಲ ಅವಕಾಶಗಳನ್ನು ನೀಡುತ್ತಾ ಬಂದಿದ್ದಾರೆ. ಹಾಗಾಗಿ ಈ ಭಾರಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ನಮ್ಮ ಸಮುದಾಯವು ಬೆನ್ನೆಲುಬಾಗಿ ನಿಂತು, ಗೆಲ್ಲಿಸಿಕೊಂಡರೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, 2023 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಪರ್ವ ಪ್ರಾರಂಭವಾಗಲಿದ್ದು,ಕೋಲಾರ ಜಿಲ್ಲೆಯ ಎಲ್ಲಾ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ಶಥ ಸಿದ್ದರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ಭೋವಿ ಜನಾಂಗವನ್ನು ಕಡೆಗಣಿಸಿದ್ದು ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟಿಲ್ಲ, ನಿಮ್ಮ ಸಮುದಾಯದ ಬೆಂಬಲಕ್ಕೆ ಜೆಡಿಎಸ್ ಪಕ್ಷ ಮಾತ್ರ ನಿಂತಿದೆ. ಕುಮಾರಸ್ವಾಮಿಯವರ ಕೈ ಬಲಪಡಿಸಲು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಚುನಾವಣೆ ಸಂಧರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಅನೇಕ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಚುನಾವಣೆ ನಂತರ ಹೊರಗಿನಿಂದ ಬಂದವರು ನಿಮ್ಮ ಕೈಗೆ ಸಿಗುವುದಿಲ್ಲ. ಹಾಗೂ ಉಡಾಫೆ ಮನೋಭಾವದಿಂದ ನೋಡುತ್ತಾರೆ ನಿಮಗೆಲ್ಲ ಎಲ್ಲಿಂದಲೋ ಬಂದವರು ಬೇಕೋ ಸದಾ ತಮ್ಮ ಜತೆಯಲ್ಲಿರುವ ಸಿಎಂಆರ್ ಶ್ರೀನಾಥ್ ಬೇಕೋ ನಿರ್ಧರಿಸಿ ಎಂದರು.

ಪಕ್ಷದ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಭೋವಿ ಸಮಾಜ ಸದಾಕಾಲ ಶ್ರಮಜೀವಿಗಳಾಗಿದ್ದು ಉತ್ತಮ ಸಮಾಜ ಕಟ್ಟಲು ಭೋವಿ ಸಮಾಜದ ಸೇವೆಯೂ ಅಪಾರವಾಗಿದೆ. ನಿಮ್ಮ ಬೆಂಬಲದಿಂದ ಮುಂದೆ ಶಾಸಕರಾಗುವ ಸಿಎಂಆರ್ ಶ್ರೀನಾಥ್ ನಿಮ್ಮಗಳ ಸೇವೆಗೆ ಸದಾ
ಸಿದ್ದರಿದ್ದು, ಸರಕಾರದಿಂದ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಡಲು ಶ್ರಮಿಸಲಿದ್ದಾರೆಂದರು.

ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಗಟ್ಟಿದರು: ಇವರಿಗೆ ನಾನ್ಯಾವ ಲೆಕ್ಕ ಎಂದ ರಾಮಸ್ವಾಮಿ

ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಸಮುದಾಯ ಒಡೆದು ರಾಜಕೀಯ ನಡೆಸುತ್ತಿವೆ. ಆದರೆ,ಸಮುದಾಯ ಸಮಸ್ಯೆ ಆಲಿಸುತ್ತಿಲ್ಲ ನನ್ನನ್ನು ಆಯ್ಕೆ ಮಾಡಿದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಲು
ಮುಂದಾಗುತ್ತೇನೆ.ನಿಮ್ಮದೇ ಸರಕಾರವಿರುತ್ತದೆ. ನಿಮ್ಮ ಆಶಯಗಳಂತೆಯೇ ನಡೆಯುತ್ತೇನೆ. ಪ್ರಣಾಳಿಕೆ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ದೇವೇಗೌಡರನ್ನು ಕಸದಂತೆ ಬೀಸಾಡಿ, ನೋವು ಕೊಟ್ಟರು: ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ: ಎಟಿ ರಾಮಸ್ವಾಮಿ

ಸಮಾವೇಶಕ್ಕೂ ಮುನ್ನ ಎಪಿಎಂಸಿ ಮಾರುಕಟ್ಟೆ ಸಮೀಪದ ನರಸಿಂಹಸ್ವಾಮಿ ದೇಗುಲದಿಂದ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ವಕ್ಕಲೇರಿ ರಾಮು, ನಗರಸಭೆ ಸದಸ್ಯರಾದ ಮಂಜುನಾಥ್, ರಾಕೇಶ್, ರಫೀಕ್, ಭೋವಿ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ನಿವೃತ್ತ ಫ್ರೋ ಗೋವಿಂದಪ್ಪ, ಕುರುಬರ ಸಂಘದ ಅಶೋಕ್, ಬಲಿಜಿಗರ ಸಂಘದ ಅಶೋಕ್, ಮುಖಂಡರಾದ ಆರ್.ಎ.ಪಿ. ನಾರಾಯಣಸ್ವಾಮಿ, ಖಾಜಿಕಲ್ಲಹಳ್ಳಿ ಹರೀಶ್, ಬೈಚೇಗೌಡ, ತಿರುಮಲೇಶ್, ಡಾಬಾ ಶಂಕರ್ ಅರಾಭಿ ಕೊತ್ತನೂರು ನಂಜುಂಡಗೌಡ, ಮುದುವಾಡಿ ಮಂಜುನಾಥ್, ದಿಂಬ ನಾಗರಾಜಗೌಡ, ಚಂಬೆ ರಾಜೇಶ್ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios