Asianet Suvarna News Asianet Suvarna News

ಮೋದಿ, ಅಮಿತ್ ಶಾ ಮಾತಿಗೆ ತಲೆ ಅಲ್ಲಾಡಿಸುವ ಸಂಸದರು ಬೇಡ; ಸೌಮ್ಯರೆಡ್ಡಿಗೆ ವೋಟ್ ಮಾಡಿ: ಸಿಎಂ ಮನವಿ

ನಾವು ಸುಮ್ ಸುಮ್ನೆ ಮತ ಕೇಳೊಲ್ಲ. ನುಡಿದಂತೆ ನಡೆದಿದ್ದೇವೆ. ಬಡವರಿಗೆ ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಬಿಜೆಪಿಯವರು ಯಾವ ಭರವಸೆ ನೀಡಿಲ್ಲ, ಬೆಂಗಳೂರು ನಗರಕ್ಕೆ ಯಾವ ಕಾರ್ಯಕ್ರಮವೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

Bengaluru south Lok sabha Karnataka cm siddaramaiah campaining at hoskerahalli padmanabhanagar rav
Author
First Published Apr 7, 2024, 11:34 PM IST

ಬೆಂಗಳೂರು (ಏ.7): ನಾವು ಸುಮ್ ಸುಮ್ನೆ ಮತ ಕೇಳೊಲ್ಲ. ನುಡಿದಂತೆ ನಡೆದಿದ್ದೇವೆ. ಬಡವರಿಗೆ ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಬಿಜೆಪಿಯವರು ಯಾವ ಭರವಸೆ ನೀಡಿಲ್ಲ, ಬೆಂಗಳೂರು ನಗರಕ್ಕೆ ಯಾವ ಕಾರ್ಯಕ್ರಮವೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮತಯಾಚನೆ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಸೌಮ್ಯ ರೆಡ್ಡಿ ಅವ್ರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದಾರೆ.  ಈ ನಗರದ ಬಡವರು, ದಲಿತರು, ಕೋಳಗೇರಿ ಸಮಾಜ, ಕಾರ್ಮಿಕ ಸಮಾಜದ ಕಾಳಜಿ ವಹಿಸಿ ಕೆಲಸ ಮಾಡ್ತಾ ಇದ್ದಾರೆ. ರಾಮಲಿಂಗ ರೆಡ್ಡಿ ಒಬ್ಬ ಅಜಾತ ಶತ್ರು, ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಗಳು ಜಯನಗರದಲ್ಲಿ ಶಾಸಕರಗಿದ್ರು. 2 ನೇ ಬಾರಿ ಗೆಲ್ಲಬೇಕಿತ್ತು, ಮೋಸ ಮಾಡಿ ಸೋಲಿಸಿದ್ದಾರೆ. ಈಗಾಗಲೇ ಕೋರ್ಟ್‌ನಲ್ಲಿ ಕೇಸ್ ಕೂಡ ನಡೆತಿದೆ. ಅವರು ಮನೆಯಲ್ಲಿ ಕೂಡೋದು ಬೇಡ ಅಂತಾ ಅವರನ್ನ ಲೋಕಸಭಾ ಎಲೆಕ್ಷನ್ ಗೆ ಅಭ್ಯರ್ಥಿಯನ್ನ ಮಾಡಿದ್ದೇವೆ. ಅವ್ರು ಕ್ರಿಯಾಶೀಲವಾಗಿ ಕೆಲಸ ಮಾಡ್ತಾರೆ, ಮುಂದು ಮಾಡ್ತಾರೆ. ಅವರೆಲ್ಲ ಕೆಲಸಗಳನ್ನ ಮೆಚ್ಚಿ ನಾವು ಟಿಕೇಟ್ ನೀಡಿದ್ದೇವೆ. ಅವರ ಕೆಲಸಗಳನ್ನ ನೋಡಿ ನೀವು ಅವರಿಗೆ ವೋಟ್ ಮಾಡಿ  ಎಂದು ಮನವಿ ಮಾಡಿದರು.

ಬೆಂಗಳೂರಿನ ವಿಜಯ ಸಂಕಲ್ಪ ಸಮಾವೇಶ: ಗೆಲುವಿನ ರಣತಂತ್ರ ಬಿಚ್ಚಿಟ್ಟ ಪಂಚ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

ಗ್ಯಾರಂಟಿ ಎಲ್ಲಾ ಜಾರಿಯಾಗಿದೆ ಅಲ್ವಾ? ದುಡ್ಡು,ಕರೆಂಟ್ ಅಲಾ ಸಿಕ್ತಿದೆ ಅಲ್ವಾ? ಇದೆಲ್ಲಾ ನಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಮಾಡಿದ್ದೇವೆ. ನಾವು 168ರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೇವೆ. 5 ಗ್ಯಾರಂಟಿ ಗಳನ್ನ ಮನೆ ಮನೆಗೆ ತಲುಪಿಸಿದ್ದೇವೆ. ನಾನು ಡಿಕೆಶಿ ಹಗಲಿರುಳು ಚಿಂತನೆ ಮಾಡಿದ್ದೀವಿ  ನಮ್ಮ ಗ್ಯಾರಂಟಿ ಜಾರಿ ಆದ ನಂತರ ಜನರಿಗೆ ತುಂಬಾ ಅನುಕೂಲವಾಗಿದೆ. ನರೇಂದ್ರ ಮೋದಿ 15 ಲಕ್ಷ ಕೊಡ್ತೀನಿ ಅಂತಾ ಹೇಳಿ ಕೊಡ್ಲಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ, ರೈತರ ಸಹಾಯಕ್ಕೆ ಬಂದಿಲ್ಲ  ಮೋದಿ ಅವರ ಅಚ್ಚೆ ದಿನ ಇನ್ನೂ ಬಂದಿಲ್ಲ, ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

10 ವರ್ಷದ ಅಭಿವೃದ್ಧಿಯಿಂದ ಮತ್ತೆ ಬರಲಿದೆ ಮೋದಿ ಸರ್ಕಾರ: ತೇಜಸ್ವಿ ಸೂರ್ಯ

ಬಿಜೆಪಿ 10 ವರ್ಷಗಳಿಂದ ಏನು ಕೆಲಸ ಮಾಡಿಲ್ಲ. ಬರೀ ಸುಳ್ಳು ಆಶ್ವಾಸನೆ ನೀಡಿದೆ. ಯಾವ ಭರವಸೆನೂ ಈಡೇರಿಸಿಲ್ಲ. ಕೆಲಸ ಮಾಡಿಲ್ಲ. ಬಿಜೆಪಿ ಸಂಸದ ಸೂರ್ಯನಿಗೆ ನಾವು ಅಮಾವಾಸ್ಯೆ ಅಂತ ಕರೆಯುತ್ತೇವೆ. ಒಂದು ದಿನವೂ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಆಗಲಿ, ಹೊರಗಡೆಯಾಗಲಿ ಮಾತಾಡಿಲ್ಲ. ಕುಡಿಯುವ ನೀರು,ಚರಂಡಿ,ರಸ್ತೆ ಅಭಿವೃದ್ಧಿ ಯಾವುದನ್ನೂ ಮಾಡಿಲ್ಲ. ಇಲ್ಲಿನ ಜನರ ಕಷ್ಟಕ್ಕೆ ಯಾವತ್ತೂ ಆಗಿಲ್ಲ. ಅದಕ್ಕಾಗಿ ಸೌಮ್ಯ ರೆಡ್ಡಿ ಅವರನ್ನ ಗೆಲ್ಲಿಸಿ. ಮೋದಿ ಅಮಿತ್ ಷಾ ಹೇಳಿದ ಮಾತಿಗೆ ತಲೆ ಅಲ್ಲಾಡಸುವ ಸಂಸದರು ನಮ್ಮ ಕರ್ನಾಟಕದಲ್ಲಿ ಇದ್ದಾರೆ. ಇಂಥವರು ನಮಗೆ ಬೇಕಾಗಿಲ್ಲ. ಕರ್ನಾಟಕದ 7 ಕೋಟಿ ಜನರ ಕೆಲಸ ಸೌಮ್ಯ ಮಾಡ್ತಾರೆ. ನನ್ನ ಬಗ್ಗೆ, ರಾಮಲಿಂಗಾ ರೆಡ್ಡಿಯವರ ಬಗ್ಗೆ ಗೌರವವಿದ್ರೆ, ದಯಮಾಡಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ. ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios