MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಬೆಂಗಳೂರಿನ ವಿಜಯ ಸಂಕಲ್ಪ ಸಮಾವೇಶ: ಗೆಲುವಿನ ರಣತಂತ್ರ ಬಿಚ್ಚಿಟ್ಟ ಪಂಚ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

ಬೆಂಗಳೂರಿನ ವಿಜಯ ಸಂಕಲ್ಪ ಸಮಾವೇಶ: ಗೆಲುವಿನ ರಣತಂತ್ರ ಬಿಚ್ಚಿಟ್ಟ ಪಂಚ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

ಬೆಂಗಳೂರು (ಏ.02): ದಕ್ಷಿಣ ಕರ್ನಾಟಕದ ಪಂಚ ಕ್ಷೇತ್ರಗಳ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಬೆಂಗಳೂರು ಕೇಂದ್ರ ಅಭ್ಯರ್ಥಿ ಪಿ.ಸಿ ಮೋಹನ್, ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಕೆ. ಸುಧಾಕರ್ ಸೇರಿ ಐವರು ತಮ್ಮ ಗೆಲುವಿನ ತಂತ್ರಗಳನ್ನು ಬಿಚ್ಚಿಟ್ಟರು.

5 Min read
Sathish Kumar KH
Published : Apr 02 2024, 06:41 PM IST
Share this Photo Gallery
  • FB
  • TW
  • Linkdin
  • Whatsapp
18

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ಗೆಲುವಿಗೆ ಎಲ್ಲಾ ಸಾಕ್ಷಿಯಾಗಬೇಕು. ನಾವು ಎರಡು ಭಾರತ ನೀಡುತ್ತೇವೆ. ಆಕಾಶದಿಂದ ನೋಡಿದ್ರೆ ಒಂದು ಭಾರತ ಕಾಣುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಿದ್ರೆ ಇನ್ನೊಂದು ಭಾರತ ಕಾಣುತ್ತದೆ. ಬಡತನ ಎಲ್ಲವೂ ರೈಲಿನಲ್ಲಿ ಹೋದಾಗ ಕಾಣುತ್ತದೆ. ಈ ಸಮಸ್ಯೆ ಸುಧಾರಣೆಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ಉಜ್ವಲಾ ಯೋಜನೆ, ಟರ್ಮಿನಲ್ 2 ಸೇರಿ ಹಲವು ಸಾಧನೆ ಮಾಡಿದ್ದೇವೆ. ಅನುದಾನದ ಜೊತೆ ಅನುಷ್ಠಾನ ಆಗ್ತಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಸೀಟು ಕೊಡಬೇಕು ಎಂದು ಮೋದಿ ಕರೆ‌ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಕುಳಿತ 5 ಜನರೂ 400 ಪಟ್ಟಿಯಲ್ಲಿ ಇರುತ್ತಾರೆ. ನಾನು ಬೆಂಗಳೂರುಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಮತ ಕ್ಷೇತ್ರದಲ್ಲಿ  ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ನಾನು ಗ್ರಾಮಾಂತರದಲ್ಲಿ ಗೆಲುವನ್ನು ಸಾಧಿಸುತ್ತೆನೆ. ಹೃದಯಾಘಾತ ಶ್ರೀಮಂತ ಕಾಯಿಲೆಯಲ್ಲ. ಇದು ಬಡವರಲ್ಲೂ ಹೆಚ್ಚಾಗುತ್ತಿದೆ. ಹೃದ್ರೋಗಕ್ಕೆ ಅಳವಡಿಸುವ ಸ್ಟಂಟ್ ಬೆಲೆಯನ್ನು ಪ್ರಧಾನಿ ಮೋದಿ ಪ್ರಧಾನಿ ಆದ ಮೇಲೆ ಕಡಿಮೆ ಮಾಡಲಾಗಿದೆ. ಚಿಕಿತ್ಸೆ ಮೊದಲು ಹಣಪಾವತಿ ನಂತರ ಅಂತ ಮೊದಲು ಹೇಳುತ್ತಿದ್ದೆವು. ಇದೀಗ ಮತ ಮೊದಲು ಸೇವೆ ನಿರಂತರ ಅನ್ನುತ್ತಿದ್ದೆನೆ ಎಂದು ಹೇಳಿದರು.
 

28

ಬೆಂಗಳೂರು ಕೇಂದ್ರ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಮಾತನಾಡಿ, ನನಗೆ 4 ನೇ ಬಾರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದಕ್ಕೆ  ಧನ್ಯವಾದಗಳು. ಮನವೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರದ ಪುಸ್ತಕವನ್ನು ದೆಹಲಿಗೆ ತಗೆದುಕೊಂಡು ಹೋಗಿದ್ದೇವೆ. ಆದ್ರೆ ಇದೀಗ ಮೋದಿಯ ಸಾದನೆ ಪುಸ್ತಕವನ್ನು ಜನರಿಗೆ ಸಿಗುತ್ತಿದೆ. ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಪಾರ್ಕಿಂಗ್ ಸೌಲಭ್ಯ ಸೇರಿ ಎಲ್ಲವನ್ನೂ ಹೆಚ್ಚಿಸಲಾಗಿದೆ. ಹಾಗೇ ಸಬ್ ಅರ್ಬನ್ ರೈಲು ಸೇರಿ ಹಲವು ಅಭಿವೃದ್ಧಿಯಾಗಿದೆ. ಜನರಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮೋದಿಗೆ ಜನ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
 

38

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ಇಡೀ ಬೆಂಗಳೂರು, ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪರವಾದ ಬೆಂಬಲದ ಗಾಳಿ ಇದೆ. 2014, 2019ಕ್ಕೆ ಹೋಲಿಸಿದರೆ ಮತ್ತಷ್ಟು ಗಟ್ಟಿಯಾಗಿದೆ. ಮೋದಿ ಅವರ ಸುನಾಮಿ ಇದೆ ಅಂದ್ರೆ ತಪ್ಪಾಗಲ್ಲ. ಮರು ಚುನಾವಣೆಗೆ ಹೋಗುವ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ತಗ್ಗಿರುತ್ತದೆ. ಆದ್ರೆ ಮೋದಿ ಅವರ ವಿಚಾರದಲ್ಲಿ ಬೇರೆ ಇದೆ. ಕ್ಯಾಂಪೇನ್ ಹೋದಾಗ ನೂರಾರು ಜಾರಣ ಜನರೇ ಕೊಡ್ತಿದ್ದಾರೆ. ನಮಗೆ ಮೋದಿ ಬೇಕು ಅಂತ ಎಲ್ಲಾ ವರ್ಗದ ಜನ ಮಾತಾಡ್ತಿದ್ದಾರೆ. ಹಿಂದುಳಿದವರಿಗೆ ಸರ್ಕಾರ ಮೇಲೆತ್ತುವ ರೀತಿ ದಿನನಿತ್ಯ ಕೆಲಸ ಮಾಡಿದೆ. 10 ವರ್ಷಗಳ ಹಿಂದೆ ಈ ದೇಶ ಹೇಗಿತ್ತು ಅಂದರೆ, ಮನಮೋಹನ್ ಸಿಂಗ್ ನೇತೃತ್ವ, ಸೋನಿಯಾ ಗಾಂಧಿ ರಿಪೋರ್ಟ್‌. ಪ್ರತೀದಿನ ಪೇಪರ್ ತೆಗೆದ್ರೆ ಬರೀ ಹಗರಣದ ಸುದ್ದಿ ಬರ್ತಿತ್ತು. ಇದರಿಂದ ಜನ ರೋಸಿ‌ ಹೋಗಿದ್ರು. ಬಾಬಾ ರಾಮ್ ದೇವ್, ಅಣ್ಣ ಹಜಾರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನನ್ನಂತ ಅನೇಕ ಯುವಕರು ಹೋರಾಟದಲ್ಲಿ ಭಾಗಿಯಾಗಿದ್ದೆವು. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಮಾಡಲಾಗಿಲ್ಲ. ಪಾರದರ್ಶಕ ಆಡಳಿತ ನಡೆದಿದೆ. ಎರಡು ಲಕ್ಷ ಕೋಟಿ ಹಾಳು ಮಾಡ್ತಿದ್ದ ಸರ್ಕಾರ ಎಲ್ಲಿ.? ಪ್ರತೀ ವರ್ಷ 3 ಟ್ರಿಲಿಯನ್ ಡಾಲರ್ ಪ್ರತೀ ವರ್ಷ ಉಳಿಸೋ ಸರ್ಕಾರ ಎಲ್ಲಿ.!

ದೇಶದಲ್ಲಿ ಟೆರರಿಸ್ಟ್ ಅಟ್ಯಾಕ್ ನಡೆಯುತ್ತಿತ್ತು. ಸಾಮಾನ್ಯ ಜನರು ಓಡಾಡೋದು ಹೇಗೆ ಅನ್ನುವಂತಾಗಿದೆ.ಕಳೆದ 10 ವರ್ಷಗಳಲ್ಲಿ ಬಿಜೆಪಿ ಧ್ವಜ ಹಾಕಲು, ಬಿಜೆಪಿ ಕಾರ್ಯಕರ್ತ ಅಂತ‌ ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ. ಅದಕ್ಕೆ ಕಾರಣ ಮೋದಿ ಸರ್ಕಾರ. ಜಮ್ಮು ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಲ್ಲಿ ಸಿಂಗಲ್ ಅಟ್ಯಾಕ್ ಆಗಿಲ್ಲ. ಹಿಂದೆ ಟೆರರಿಸ್ಟ್ ಅಟ್ಯಾಕ್ ಆದ್ರೆ, ರಿಟರ್ನ್ ಉತ್ತರ ಕೊಡಲು ಹೆದರುತ್ತಿದ್ದರು. ಆದ್ರೆ ಈಗ ನುಗ್ಗಿ ಹೊಡೆಯುವ ಕೆಪಾಸಿಟಿ ಇದೆ. ವಿಶ್ವದ ಆರ್ಥಿಕ ಪ್ರಗತಿ ಸಾಧಿಸಿದ ದೇಶ ನಮ್ಮದು. ಸ್ವಾತಂತ್ರ್ಯ ಬರೋ ಮೊದಲು, ಮೋದಿ ಪ್ರಧಾನಿ ಆಗೋ ಮೊದಲು. ಬಡವರ ಬಳಿ ಅಕೌಂಟ್ ಇರಲಿಲ್ಲ. ಈಗ 52 ಕೋಟಿ ಅಕೌಂಟ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

48

ಬೆಂಗಳೂರು ಉತ್ತರ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಮೊದಲ ಹಂತದ ಚುನಾವಣೆ ಏ.19ರಂದು ನಡೆಯಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿರೋ ತಪ್ಪು, ಭ್ರಷ್ಟಾಚಾರ ಹೊಂಡ ತುಂಬಲು 10  ವರ್ಷ ಬೇಕು.ಬಳಿಕ ಹತ್ತು ವರ್ಷ ಅಭಿವೃದ್ಧಿಗೆ ಕೊಡಿ ಅಂತ ಕೇಳಿದ್ದರು. ವಿದೇಶದಲ್ಲಿ ಭಾರತ ಅಂದ್ರೆ ಬಿಕ್ಷುಕ ದೇಶ ಆಗಿತ್ತು. ಆದ್ರೆ ಈಗ ಕೆಂಪು ನೆಲಹಾಸು ಹಾಕಿ ಸ್ವಾಗತ ಮಾಡ್ತಾರೆ. ಜನರ ಬಾಳು ಹಸನು ಮಾಡುವ ಕೆಲಸ ಮಾಡ್ತಿದ್ದಾರೆ. ಮೋದಿ ಅವರು ಕೊಟ್ಟ ಭರವಸೆ ಈಡೇರಿಸೋ ಕೆಲಸ ಮಾಡ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಭಾರತದ ರೈಲ್ವೇ ಅಂದ್ರೆ ಜಿರಳೆ ಅಂತಿದ್ದರು. ಅದನ್ನ ಉನ್ನತೀಕರಿಸೋ ಕೆಲಸ ಮೋದಿ ಮಾಡಿದ್ದಾರೆ. 2047ರ ಭಾರತ ಅಮೃತ ಮಹೋತ್ಸವ ಆಚರಿಸೋ ಸಂಧರ್ಭದಲ್ಲಿ, ಭಾರತ ನಂಬರ್ ಒನ್ ಆಗಬೇಕು. ಅದಕ್ಕೆ ಬಲ ತುಂಬುವುದಕ್ಕೆ ಈ ಚುನಾವಣೆ ನಡೆಯುತ್ತಿದೆ. ಇಷ್ಟು ದಿನ ದೇವೇಗೌಡರು ನಮ್ಮ ಜೊತೆ ಬಂದಿರಲಿಲ್ಲ. ಕುಮಾರಣ್ಣ ಮಾತ್ರ ಬಂದಿದ್ದರು. ಈಗ ದೇವೇಗೌಡರು ದೆಹಲಿಯಲ್ಲಿ ನಿಂತು ಹೇಳಿದ್ದಾರೆ. ಮೋದಿ ಅಂತಹ ಪ್ರಧಾನಿ ಬೇಕು, ನಾನು ಬೆಂಬಲ ನೀಡ್ತೀನಿ ಅಂತ. ಬಿಜೆಪಿ-ಜೆಡಿಎಸ್ ಪರಸ್ಪರ ಒಟ್ಟಿಗೆ ಕೆಲಸ ಮಾಡಿದ್ರೆ ನೂರಕ್ಕೆ ನೂರು 28 ಕ್ಷೇತ್ರ ಗೆಲ್ತೀವಿ ಎಂದು ಹೇಳಿದರು.
 

58

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ.ಕೆ. ಸುಧಾಕರ್ ಮಾತನಾಡಿ, ಮೋದಿ ವಿಶ್ವ ನಾಯಕರು, ಆಡಳಿತ ಪರವಾದ ಅಲೆ ಇದೆ. ದಿನೇ ದಿನೆ ಮೋದಿಯವರ ಜನಪ್ರಿಯತೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವ ರೀತಿ ಅಧಿಕಾರ ಬಂದಿದೆ ಅಂತ ನಿಮಗೆ ಗೊತ್ತಿದೆ. ಗ್ಯಾರಂಟಿಗಳ ಮೇಲೆ ಚುನಾವಣೆ ಮಾಡ್ತಿದ್ದಾರೆ. ಗ್ಯಾರಂಟಿಗಳಿಂದ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯಾನಾ.? ಮೋದಿ ಕೊಡುವ ಸರ್ಕಾರ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಸರ್ಕಾರ. ರಾಜ್ಯದಲ್ಲಿ ಹಲವಾರು ಯೋಜನೆಗಳನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ.. ಮಾತ್ ಎತ್ತಿದ್ರೆ ದೀನಾ ದಲಿತ ಬಗ್ಗೆ ಮಾತನಾಡುತ್ತಾರೆ. ಆದ್ರೆ ಎಸ್.ಸಿ ಮತ್ತು ಎಸ್.ಟಿ‌‌ ಹಣವನ್ನ ಕಿತ್ತುಕೊಂಡಿದ್ದಾರೆ. ಹಿಂದುಳಿದ ವರ್ಗದ ನಾಯಕರು ಅಂತ ಹೇಳಿಕೊಳ್ತಾರೆ, ಆದ್ರೆ ಅತ್ಯಂತ ಹಿಂದುಳಿದ ನಾಯಕರು ಯಾರಾದ್ರೂ ಇದ್ರೆ ಅದು ಮೋದಿಯವರು. ಕೇಂದ್ರ ಸರ್ಕಾರದ ಯೋಜನೆಗಳನ್ನ‌ ಮನೆ-ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
 

68

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್. ಆಶೋಕ್ ಮಾತನಾಡಿ, ಕೇಂದ್ರದ ನಾಯಕರು ನಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ. ನರೇಂದ್ರ ಮೋದಿ ನಮ್ಮ ಅಭ್ಯರ್ಥಿ ಎಂದು ನಾವು ಕೆಲಸ ಮಾಡಬೇಕು. ಹಾಗಿದಲ್ಲಿ ನಾವು 28 ಕ್ಷೇತ್ರಗಳಲ್ಲಿ ಗೆಲ್ತೀವಿ. ಕರ್ನಾಟಕದಲ್ಲಿ ಭ್ರಷ್ಟ ಕಾಂಗ್ರೆಸ್  ಭ್ರಷ್ಟ ಡಿಕೆಶಿ ಭ್ರಷ್ಟ ಸಿದ್ದರಾಮಯ್ಯರನ್ನ ತೊಲಗಿಸಬೇಕಿದೆ. ಬಂದ 10 ತಿಂಗಳಲ್ಲಿ 10 ಭ್ರಷ್ಟಾಚಾರ ಮಾಡಿದೆ. ರಾಜ್ಯದಲ್ಲಿ ನೀರಿಗೆ ಅಹಾಕರ ಬಂದಿದೆ. ಏನಿಲ್ಲ ಏನಿಲ್ಲ ಅಂದ್ರೆ ಬೆಂಗಳೂರಲ್ಲಿ ಕುಡಿಯುವ ನೀರಿಲ್ಲ ಅಂತಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗೆಲ್ಲ ಬರಗಾಲ ಬಂದೇ ಇಲ್ಲ. ಅದೇನೋ ಕಾಂಗ್ರೆಸ್ ಸಿದ್ದರಾಮಯ್ಯನವರಿಗೆ ಬರಗಾಲ ನಂಟು. ಹಿಂದೆಯೂ ಬರಗಾಲ ಇತ್ತು ಈಗ ಮತ್ತೆ ಬರಗಾಲ ಬಂದಿದೆ. ಬೆಂಗಳೂರಿಗೆ ಕಾಂಗ್ರೆಸ್ ಏನ್ ಮಾಡಿದೆ? ಕಾವೇರಿ 4 ನೇ ಹಂತ, ಮೆಟ್ರೋ, ವಿಮಾನ ನಿಲ್ದಾಣ ಎಲ್ಲಾವು ಬಂದಿದ್ದು ಕೇಂದ್ರ ಸರ್ಕಾರದಿಂದ. ಮೋದಿಗೆ ವೋಟು ಯಾಕೆ ಹಾಕಬೇಕು ಎಂದ್ರೆ ಬೆಂಗಳೂರಿಗೆ ಮೋದಿ ಕೊಟ್ಟಿರುವ ಕೊಡಗಿಗೆ ನಾವು ವೋಟು ಹಾಕಬೇಕು ಎಂದು ಹೇಳಿದರು.
 

78

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಭಾರತವನ್ನ ಮುಂದಿನ‌ 2047ರಷ್ಟರಲ್ಲಿ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಮೋದಿ ಕನಸು ಕಂಡಿದ್ದಾರೆ. ಮೋದಿಯವರು ಹೇಳಿದಂತೆ ಪ್ರಧಾನ ಮಂತ್ರಿ ಅಲ್ಲ ಪ್ರಧಾನ ಸೇವಕನಾಗಿ ಕೆಲಸ ಮಾಡ್ತಿದ್ದಾರೆ. ಹಗಲ ರಾತ್ತಿ ಎನ್ನದೇ ದೇಶಕ್ಕಾಗಿ ಮೋದಿ ಕೆಲಸ ಮಾಡ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಇದುವರೆಗೂ ಒಂದೇ ಒಂದು ಭ್ರಷ್ಟಾಚಾರ ಇಲ್ಲ. ಆರ್ಥಿಕವಾಗಿ 12 ನೇ ಸ್ಥಾನದಲ್ಲಿದ್ದ ಭಾರತ ಈಗ ೫ ನೇ ಸ್ಥಾನಕ್ಕೆ ಬಂದು ತಲುಪಿದ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ದೇಶದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಯೋಜನೆಗಳು ಸಿಗಬೇಕು ಎಂದು ಮೋದಿ ಒಡಾಡುತ್ತಿದ್ದಾರೆ. ರಾಜ್ಯಸಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರದವಿದೆ. ಮತದಾರು ಇವತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಪ ಹಾಕ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಪ್ರಜ್ಞಾವಂತ ಮತದಾರರು ನಿರ್ಣಯ ಮಾಡಿದ್ದಾರೆ ಮತ್ತೆ ಮೋದಿಯನ್ನ  ಪ್ರಧಾನಿ ಮಾಡಬೇಕು. ಬೂತ್ ಮಟ್ಟದಲ್ಲಿ ನಮ್ಮ ಯೋಜನೆಗಳನ್ನ ತಲುಪಿಸಿ, ಮತಗಳನ್ನು ಹೆಚ್ಚಿಸಬೇಕು. ಬಿಜೆಪಿ - ಜೆಡಿಎಸ್ ಮೈತ್ರಿ ನಂತರ ಕಾಂಗ್ರೆಸ್ ಪಕ್ಷ ತತ್ತರಿಸಿ ಹೋಗದೆ. ಕಾಂಗ್ರೆಸ್ ಸಚಿವರು  ಚುನಾವಣೆ ನಿಲ್ಲಬೇಕು ಅಂದ್ರು ಆಗಲಿಲ್ಲ ಯಾಕೆ ಅವರೆಲ್ಲ ವಿಚಲಿತರಾಗಿದ್ದಾರೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಮೋದಿ ಪರವಾಗಿದೆ ಎಂದು ಹೇಳಿದರು.
 

88

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಗೆ ನಾನು ಪ್ರಶ್ನೆ ಮಾಡ್ತೀನಿ. ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು.? ಹೇಳ್ತೀರಾ ಇದಕ್ಕೆ ತಾಕತ್ತು ಇದ್ಯಾ.? ಬರಿ ಹಣ  ಹೆಂಡದ ಅಮೀಷ ನೀಡಿ ಆಡಳಿತ ನೀಡ್ತಿದ್ದೀರಾ. ಬರೀ ತುಘಲಕ್ ದರ್ಬಾರ್ ಮಾಡ್ತಿದ್ದೀರಾ. ನಾನು ಹೇಳ್ತಿದ್ದೇನೆ 28 ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಗೆಲ್ತೀವಿ. ಮೋದಿ ಅಮಿತ್ ಶಾ ಗೆ ಹೇಳ್ತಿದ್ದೇನೆ‌ 28 ಲೋಕಸಭಾ ಕ್ಷೇತ್ರದ ಸಂಸದರನ್ನ ಕರೆದುಕೊಂಡು ದೆಹಲಿಗೆ ಬರ್ತಿನಿ. ನನಗೆ 82 ತುಂಬಿ 83 ಆದ್ರೂ ನಾನು ಮನೆಯಲ್ಲಿ ಕೂರುವನಲ್ಲ. ಇಡೀ ರಾಜ್ಯ ಸತ್ತುತ್ತೇನೆ‌ ಸಂಚಾರ ಮಾಡ್ತೀನಿ. ಇಡೀ ಜಗತ್ತು ಈ ಲೋಕಸಭಾ ಚುನಾವಣೆ ನೋಡುತ್ತಿದೆ‌. ಈ ಸಂದರ್ಭದಲ್ಲಿ ನಾವು ಮೋದಿ ಅಮಿತ್ ಶಾ ಬಲ ಪಡಿಸಬೇಕು. ರೈತರಿಗೆ ನಾವು ಕೊಡುತ್ತಿದ್ದ 4 ಸಾವಿರ ಯಾಕೆ ನಿಲ್ಲಿಸಿದ್ದೀರಿ? ಭಾಗ್ಯ ಲಕ್ಷ್ಮಿ ಯೋಜನೆ ಯಾಕೆ ಸ್ಥಗಿತ ಮಾಡಿದ್ದೀರಿ? ಕಾಂಗ್ರೆಸ್ ದಿವಾಳಿ ಆಗಿದೆ ಕಾಂಗ್ರೆಸ್ ಪಾಪರ್ ಆಗಿದೆ. ಕಾಂಗ್ರೆಸ್ ನಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕೆ ಮಾಡಿದರು.
 

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಅಮಿತ್ ಶಾ
ಕರ್ನಾಟಕ ರಾಜಕೀಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved