ವಿಧಾನಸಭಾ ಚುನಾವಣಾ ಮತ ಎಣಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಮೇ 11): ಕರ್ನಾಟಕ ವಿಧಾನ ಚುನಾವಣೆಯ ಫಲಿತಾಂಶ ಮೇ 13 (ಶನಿವಾರ) ದಂದು ಪ್ರಕಟವಾಗುವ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಯಾವುದೇ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೂ ಸಂಭ್ರಮಾಚಣೆ ಮಾಡುವಂತಿಲ್ಲ. ಈಗಾಗಲೇ ನಿಗದಿಗೊಂಡಿರುವ ಮದುವೆ ಹಾಗೂ ಆಕಸ್ಮಿಕವಾಗಿ ನಡೆಯುವ ಸಾವಿನ ಅಂತ್ಯಸಂಸ್ಕಾರಕ್ಕೆ ಮಾತ್ರ 5ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶ ನೀಡಲಾಗುತ್ತದೆ.
ರಾಜ್ಯ ರಾಜಧಾನಿಯಲ್ಲಿ ಮತ ಎಣಿಕೆ ಸಮಯದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ಮಾಡುವ ಸಾಧ್ಯತೆ ಹಿನ್ನಲೆಯಿದೆ. ಮತ ಎಣಿಕೆ ಕೇಂದ್ರಗಳನ್ನೊಳಗೊಂಡಂತೆ ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗುಪ್ತವಾರ್ತೆ ಮಾಹಿತಿ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಬಿಗಿ ಭದ್ರತಾ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಾದ್ಯಂತ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು ನಿಷೇಧ ಮಾಡಲಾಗಿದೆ.
SHIVAMOGGA: ಖಾಸಗಿ ಬಸ್‌ಗಳ ನಡುವೆ ಭೀಕರ ಅಪಘಾತ: 10ಕ್ಕೂ ಅಧಿಕ ಸಾವು, 70 ಮಂದಿಗೆ ಗಾಯ!
5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ: ಇನ್ನು ಈ ಮೊದಲೇ ನಿಗದಿ ಆಗಿರುವ ಮದುವೆಗಳು ಹಾಗೂ ಆಕಸ್ಮಿಕವಾಗಿ ಸಂಭವಿಸುವ ಮೃತರ ಅಂತ್ಯಕ್ರಿಯೆ ನಡೆಸಲು 5ಕ್ಕಿಂತ ಹೆಚ್ಚಿನ ಜನರು ಸೇರಲು ಮಾತ್ರ ಅವಕಾಶ ನೀಡಲಾಗಿದೆ. ಮದುವೆ ಹಾಗು ಶವಸಂಸ್ಕಾರವನ್ನ ಹೊರತುಪಡಿಸಿ ಉಳಿದೆಲ್ಲದಕ್ಕು ಪ್ರತಿಬಂದಕಾಜ್ಞೆ ಅನ್ವಯವಾಗಲಿದೆ. ಇನ್ನು ಯಾವುದೇ ಕಾರ್ಯಕ್ರಮ ಅಥವಾ ಸಾಮಾನ್ಯ ಸಂಚಾರದ ವೇಳೆ ಯಾವುದೇ ಮಾರಾಕಾಸ್ತ್ರಗಳನ್ನ ಒಯ್ಯುವುದು ನಿಷೇಧ ಮಾಡಲಾಗಿದೆ. ಪಟಾಕಿಯಂತಹ ಸ್ಪೋಟಕ ವಸ್ತುಗಳ ಸಾಗಾಟ ಹಾಗೂ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ.
ಘೋಷಣೆ, ಪ್ರತಿಭಟನೆಗೂ ನಿಷೇಧ: ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು, ಬಿತ್ತಿ ಪತ್ರ ಪ್ರದರ್ಶನವನ್ನು ಕೂಡ ನಿಷೇಧ ಮಾಡಲಾಗಿದೆ. ಬೆಂಗಳೂರಿನಾದ್ಯಂತ ಮೇ 13ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರ ವರೆಗೂ ಆದೇಶ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
Bengaluru Accident: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್: ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಮಹಿಳೆ
ಮತ ಎಣಿಕೆ ನಡೆಯುವ ಸ್ಥಳಗಳು: ಬೆಂಗಳೂರಿನ ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ (BMS WOMENS COLLEGE, BASAVANAGUDI), ಬಿಬಿಎಂಪಿ ಉತ್ತರ ಜಿಲ್ಲೆಯಲ್ಲಿ ಮೌಂಟ್ ಕಾರ್ಮೆಟಕ್ ಪಿಯು ಕಾಲೇಜು (MOUNT CARMEL PU COLLEGE), ಬಿಬಿಎಂಪಿ ದಕ್ಷಿಣ ಜಿಲ್ಲೆಯ ಜಯನಗರ 4ನೇ ಟಿ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು (SSMRV PU COLLEGE) ಹಾಗೂ ಬೆಂಗಳೂರು ನಗರ ಜಿಲ್ಲೆಯ ಮತದಾನ ಫಲಿತಾಂಶವನ್ನು ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜು ( ST.JOSEPH'S INDIAN HIGH SCHOOL & CMPOSITE PU COLLEGE)ನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
