ಶಿವಮೊಗ್ಗ, (ಆ.12): ಬೆಂಗಳೂರಿನಲ್ಲಿ ನಡೆದಿರುವ ಮತಾಂಧ ಮುಸಲ್ಮಾನರ ದಾಳಿ ಖಂಡನೀಯವಾಗಿದ್ದು, ಆದರೆ ಈ ಘಟನೆ ನಡೆದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು, ಈ ಘಟನೆಗೆ ಸಂಬಂಧಪಟ್ಟಂತೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.  

ಇಂದು (ಬುಧವಾರ) ಶಿವಮೊಗ್ಗದಲ್ಲಿ ಮಾದ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಘಟನೆಯನ್ನು ನೋಡಿದರೆ, ಇಂತಹ ಮತಾಂಧ ಮುಸಲ್ಮಾನರಿಗೆ ಡಿಕೆಶಿ ಬೆಂಬಲ ಇದೆ ಅನಿಸುತ್ತದೆ ಎಂದು ನೇರವಾಗಿ ಆರೋಪ ಮಾಡಿದರು. 

ಶಾಸಕ ಅಖಂಡ ಶ್ರೀನಿವಾಸ್ ರವರ ಮನೆ ಮೇಲಿನ ದಾಳಿ ಮತ್ತು ಬೆಂಗಳೂರಿನಲ್ಲಿ ನಡೆದ ದುಷ್ಕೃತ್ಯ ಖಂಡನೀಯವಾಗಿದೆ.ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.  ನಾನು ಎಲ್ಲಾ ಮುಸ್ಲಿಂರು ಕೆಟ್ಟವರು ಎಂದು ಹೇಳುತ್ತಿಲ್ಲ.  ಆದರೆ ಮತಾಂಧ ಮುಸಲ್ಮಾರು ಮಾತ್ರ ಇಂತಹ ದುಷ್ಕೃತ್ಯದಲ್ಲಿ ತೂಡಗಿಕೊಳ್ಳುತ್ತಾರೆ.  ಇಂತಹ ಮತಾಂಧ ಮುಸ್ಲಿಂರ ವಿರುದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲರೂ  ಖಂಡಿಸಬೇಕಾಗಿದೆ ಎಂದರು.

ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

ದುಷ್ಕೃತ್ಯದಲ್ಲಿ ಪೊಲೀಸರು, ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ.  ಉಗ್ರಗಾಮಿಗಳನ್ನು‌ ಸದೆಬಡಿದ ದೇಶ ನಮ್ಮ ಭಾರತ ದೇಶ. ಇಂತಹ ದುಷ್ಕೃತ್ಯಗಳಿಗೆ ಹೆದರುವ ಮಾತೇ ಇಲ್ಲ.  ಆದರೆ, ಈ ಘಟನೆ ಬಗ್ಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾಕೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದರು.  

ಡಿ.ಕೆ. ಶಿವಕುಮಾರ್ ಇಂತಹವರ ವಿರುದ್ದ ಹೇಳಿಕೆ ನೀಡಬೇಕಿತ್ತು.ಇಂತಹ ಮತಾಂಧ ಮುಸ್ಲಿಂರಿಗೆ ಡಿ.ಕೆ. ಶಿವಕುಮಾರ್ ಅವರ ಬೆಂಬಲವಿದೆ ಎನಿಸುತ್ತದೆ. ಹೀಗಾಗಿಯೇ ಈ ದುಷ್ಕೃತ್ಯ ನಡೆಸುತ್ತಿದ್ದಾರೆ‌. ಘಟನೆಯಲ್ಲಿ ಯಾರೇ ಇರಲಿ ಸರ್ಕಾರ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.  ಪಕ್ಷಬೇಧ ಮರೆತು ಎಲ್ಲಾ ದೇಶಭಕ್ತರು ಒಂದಾಗಿ ಖಂಡಿಸಬೇಕಿದೆ.  ಮತಾಂಧ ಮುಸ್ಲಿಂರಿಗೆ ಹಿಂದಿನ ಸರ್ಕಾರಗಳ ಬೆಂಬಲದಿಂದ ಈ ರೀತಿ ಬಲಿತಿದ್ದಾರೆ. ಮುಂದೆ ಈ ರೀತಿ ಆಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.