ಬೆಂಗಳೂರು, (ಆ.14): ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಯಲ್ಲಿ ತಮ್ಮ ಮನೆ ಸುಟ್ಟಿರುವುದರಿಂದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕೊನೆಗೂ ದೂರು ದಾಖಲಿಸಿದ್ದಾರೆ.

ಆ.11ರಂದು ಗಲಭೆಕೋರರು ಕಾವಲ್ ಭೈರಸಂದ್ರದಲ್ಲಿರುವ ನಮ್ಮ ಮನೆಗೆ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ. ಕಾರು ಮತ್ತು ದಾಖೆಗಳನ್ನು ನಾಶ ಮಾಡಿದ್ದಾರೆ. ಅಲ್ಲದೇ  ಮನೆಯಲ್ಲಿದ್ದ ಹಣ, ಚಿನ್ನಾಭರಣ ಕದ್ದಿದ್ದಾರೆ. ಇದರಿಂದ 3 ಕೋಟಿ ರೂಪಾಯಿ ನಷ್ಟವಾಗಿದ್ದು, ಆರೋಪಿಗಳನ್ನ ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. 

ಬೆಂಗ್ಳೂರು ಗಲಭೆ: ಮನೆ ಹೊತ್ತಿ ಉರಿದ್ರು ದೂರು ನೀಡಲು ಹಿಂಜರಿಯುತ್ತಿದ್ದಾರಾ ಶಾಸಕ ಅಖಂಡ..?

ದೂರಿನಲ್ಲಿ ಆರೋಪಿತರ ಹೆಸರನ್ನು ಉಲ್ಲೇಖಿಸಿಲ್ಲ. ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಅಪರಿಚಿತ ಗುಂಪು ಎಂದಷ್ಟೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಷ್ಟೇ ಆಲ್ಲದೇ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರನ್ನು ಭೇಟಿ ಮಾಡಿ ತನ್ನ ಕುಟುಂಬಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ತಂಗಿ ಮಗ (ಅಳಿಯ) ನವೀನ್ ಎನ್ನುವಾತ ಫೇಸ್‌ಬಕ್‌ನಲ್ಲಿ ಪೈಗಂಬರ್ ವಿರುದ್ಧ ಅವಹೇಳನ ಪೋಸ್ಟ್ ಮಾಡಿದ್ದಾನೆಂದು  ಆ.11ರ ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಉದ್ರಿಕ್ತ ಗುಂಪು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಹೊಡೆದು ಹಾಕಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ.