ಬೆಂಗಳೂರು, (ಜೂನ್.08): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ CD ಪ್ರಕರಣದ ಶಂಕಿತ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

 ಆರೋಪಿಗಳಾದ ನರೇಶ್​​ ಗೌಡ ಹಾಗೂ ಶ್ರವಣ್​ ಅವರಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಇಂದು (ಮಂಗಳವಾರ) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸೀಡಿ ಕೇಸ್‌ : ಆರೋಪಿಗಳ ಜಾಮೀನಿಗೆ ಆಕ್ಷೇಪ ಸಲ್ಲಿಸಲು ಎಸ್‌ಐಟಿ ಸಿದ್ಧತೆ

ಎರಡು ಕಡೆಯ ವಾದ-ಪ್ರತಿವಾದವನ್ನ ದಾಖಲಿಸಿಕೊಂಡಿದ್ದ ನ್ಯಾಯಾಧೀಶ ಲಕ್ಷ್ಮಿನಾರಾಯಣ್‌ ಭಟ್‌ ನೇತೃತ್ವದ ಪೀಠ ಜಾಮೀನು ನೀಡಿದೆ. ಆರೋಪಿಗಳಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿರುವ 91ನೇ ಸಿಸಿಹೆಚ್ ಕೋರ್ಟ್,  ಬೆಂಗಳೂರು ಬಿಟ್ಟು ಹೋಗುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದೆ. ಅಲ್ಲದೇ ಇಬ್ಬರಿಗೂ ಶ್ಯೂರಿಟಿ ನೀಡಲು ಸೂಚನೆ ನೀಡಿದೆ.

ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್‌ಮೇಲ್ ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಎರಡೂ ಕಡೆ ವಾದ-ಪ್ರತಿವಾದ ಆಲಿಸಿತ್ತು. ಜೂನ್ 2 ರಂದು ವಾದ-ಪ್ರತಿವಾದವನ್ನ ಅಂತಿಮಗೊಳಿಸಿದ್ದ ನ್ಯಾಯಾಲಯವು ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.

ರಮೇಶ್ ಜಾರಕಿಹೊಳಿ ಯುವತಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿತ್ತು. ಬಳಿಕ ಇದೊಂದು ಬ್ಲ್ಯಾಕ್‌ಮೇಲ್ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕಟಣವನ್ನು ತನಿಖೆ ವೇಳೆ ಪೊಲೀಸರು ನರೇಶ್​​ ಗೌಡ ಹಾಗೂ ಶ್ರವಣ್​ ಅವರನ್ನ ಬಂಧಿಸಿದ್ದರು.