* ಒಬ್ಬ ಕಾರ್ಯಕರ್ತ 5ರಿಂದ10 ಮತ ಹಾಕಿದ್ರು* ಬಿಜೆಪಿ ಗೆಲುವಿನ ರಹಸ್ಯ ಬಿಟ್ಟಿಟ್ಟ ಬಿಜೆಪಿ ಮುಖಂಡ* ಬಿಜೆಪಿ ಮುಖಂಡ ಹೇಳಿಕೆ ವಿಡಿಯೋ ಫುಲ್ ವೈರಲ್
ಬೆಂಗಳೂರು, (ಮೇ.22): ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ 1998ರಲ್ಲಿ ಬಿಜೆಪಿ ಚುನಾವಣೆಗೆ ಗೆದ್ದ ರಹಸ್ಯವನ್ನು ಬಿಜೆಪಿ ಮುಖಂಡನೇ ಬಹಿರಂಗ ಪಡಿಸಿದ್ದಾರೆ.
ದಾಸರಹಳ್ಳಿ ಮಾಜಿ ಶಾಸಕ ಮುನಿರಾಜು ಕಾರ್ಯಕ್ರಮವೊಂದರಲ್ಲಿ ಬಹಿರಂಗ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
1998ರಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ..? ಉತ್ತರಹಳ್ಳಿಯಲ್ಲಿ ಅಶೋಕ್ ಸ್ಪರ್ಧಿಸಿದ್ದರು. ಆಗ ಯಲಹಂಕದಿಂದ 1,000 ಕಾರ್ಯಕರ್ತರು ಬಂದಿದ್ದರು. ಒಬ್ಬೊಬ್ಬರು 5ರಿಂದ10 ಮತ ಹಾಕಿದ್ದರು. ಹೀಗಾಗಿ ಅವತ್ತು ಅಶೋಕ್ ಗೆದ್ದರು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.
ವೋಟ್ ಹಾಕಿಲ್ಲವೆಂದು ಕಡೆಗಣನೆ, ಶಾಸಕ, ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೇ ವಿರೋಧ ಪಕ್ಷದ ಮುಖಂಡರು, ಕಾರ್ಯಕರ್ತರು ಈ ವಿಡಿಯೋ ಶೇರ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
20-5-2022 ರಂದು ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕರ ಬಾಯಲ್ಲಿ ಬಂದ ಸತ್ಯ ಇದು. ಕಾರ್ಯಕರ್ತರಿಗೆ ಕಳ್ಳ ಮತದಾನ ಮಾಡಲು ಪ್ರೇರೇಪಿಸುತ್ತಿದ್ದಾರೆ. ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟ್ಟರ್‌ನಲ್ಲಿ ಆಗ್ರಹಗಳು ವ್ಯಕ್ತವಾಗುತ್ತಿವೆ.
ಬಿಜೆಪಿ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಸಚಿವ @RAshokaBJP ರು ಮೊದಲ ಬಾರಿಗೆ ಗೆದ್ದಿದ್ದು ಕಳ್ಳ ಮತದಾನದಿಂದ ಎಂದು ಒಪ್ಪಿಕೊಂಡಿದ್ದಾರೆ. @nalinkateel ರೇ ಏನು ಹೇಳ್ತೀರಿ?Shame @BJP4India ಎಂದು ಲುಕ್ಮಾನ್ ಬಂಟ್ವಾಳ ಟ್ವೀಟ್ ಮಾಡಿದ್ದಾರೆ.
