ಬರೋಬ್ಬರಿ ಕಾಲು ಶತಮಾನದ ಬಳಿಕ ರಾಜಧಾನಿ ಬೆಂಗಳೂರಿನ ಸ್ಥಳೀಯ ಸಂಸ್ಥೆಗೆ (ಐದು ನಗರ ಪಾಲಿಕೆ)ಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.
ಬೆಂಗಳೂರು : ಬರೋಬ್ಬರಿ ಕಾಲು ಶತಮಾನದ ಬಳಿಕ ರಾಜಧಾನಿ ಬೆಂಗಳೂರಿನ ಸ್ಥಳೀಯ ಸಂಸ್ಥೆಗೆ (ಐದು ನಗರ ಪಾಲಿಕೆ)ಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.
2001ರ ಬೆಂಗಳೂರು ಮಹಾನಗರ ಪಾಲಿಕೆಯ 100 ವಾರ್ಡ್‌ಗಳಿಗೆ ಕೊನೆಯ ಬಾರಿಗೆ ಮತಪತ್ರದ ಮೂಲಕ ಚುನಾವಣೆ ನಡೆಸಲಾಯಿತು. 2007ರಲ್ಲಿ ಬಿಬಿಎಂಪಿಗೆ ಅಸ್ತಿತ್ವಕ್ಕೆ ಬಂದಿದ್ದು, 2010ರಲ್ಲಿ 198 ವಾರ್ಡ್‌ಗಳಿಗೆ ಮೊದಲ ಬಾರಿಗೆ ಮತ ಯಂತ್ರದ ಮೂಲಕ (ಇವಿಎಂ) ಮೂಲಕ ಚುನಾವಣೆ ನಡೆಸಲಾಯಿತು.
2015ರಲ್ಲಿಯೂ ಇವಿಎಂ ಮೂಲಕ ಚುನಾವಣೆ ನಡೆಸಲಾಯಿತು. ಇದೀಗ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಯ 369 ವಾರ್ಡ್‌ಗಳಿಗೆ ಮತಪತ್ರದ ಮೂಲಕ ಚುನಾವಣೆ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದು, ಸೋಮವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ಐದು ನಗರ ಪಾಲಿಕೆಯ 369 ವಾರ್ಡ್‌ಗಳ ಕರಡು ಮತದಾರ ಪಟ್ಟಿ ಬಿಡುಗಡೆ ಮಾಡಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ಅವಕಾಶ ನೀಡಲಾಗಿದ್ದು, ಈ ಅವಕಾಶ ಬಳಸಿಕೊಂಡು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ಇವಿಎಂ ಮೂಲಕ ಚುನಾವಣೆ ನಡೆಸುತ್ತಿದೆ. ಅದೇ ರೀತಿ ರಾಜ್ಯ ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ಮತಪತ್ರದ ಮೂಲಕ ಚುನಾವಣೆ ನಡೆಸಲಿದೆ ಎಂದರು.
ಬೆಂಗಳೂರಿನ ಐದು ನಗರ ಪಾಲಿಕೆಯ ಚುನಾವಣೆಯು ರಾಜ್ಯದ ಅತ್ಯಂತ ದೊಡ್ಡ ಸ್ಥಳೀಯ ಸಂಸ್ಥೆಯ ಚುನಾವಣೆಯಾಗಿದ್ದು, ಯಶಸ್ವಿಯಾಗಿ ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
89 ಲಕ್ಷ ಮತದಾರರು:
ಐದು ನಗರ ಪಾಲಿಕೆಯ ವಾರ್ಡ್ ವಾರು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿರುವ ರಾಜ್ಯ ಚುನಾವಣಾ ಆಯೋಗವು 369 ವಾರ್ಡ್‌ನಲ್ಲಿ 88.91 ಲಕ್ಷ ಮತದಾರಿದ್ದಾರೆ. ಈ ಕುರಿತು ಆಕ್ಷೇಪಣೆಗಳಿದ್ದರೆ, ಫೆ.2ರ ಒಳಗೆ ಸಲ್ಲಿಕೆ ಮಾಡಬಹುದಾಗಿದೆ. ಮಾ.16ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ತಿಳಿಸಿದರು.
ಜ.20 ರಿಂದ ಫೆ.3ರ ವರೆಗೆ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ 18 ವರ್ಷ ತುಂಬಿದವರು ಮತದಾರ ಪಟ್ಟಿ ಸೇಪರ್ಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಸ್ಥಳ ಬದಲಾವಣೆ, ಹೆಸರು, ವಿಳಾಸ ಸೇರಿದಂತೆ ಮೊದಲಾದ ಲೋಪ ದೋಷ ಸರಿಪಡಿಸಿಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾ.16ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು. ಆದಾದ ಬಳಿಕವೂ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕದವರೆಗೂ ಮತದಾರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
2025ರ ಅ.1ರ ಆಧಾರವಾಗಿ ತೆಗೆದುಕೊಂಡು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರಿದ್ದಾರೆ. ಈ ಪೈಕಿ 45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು ಇದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಾರ್ಡ್ ಅತಿ ಹೆಚ್ಚು 49,530 ಮತದಾರರಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೊತ್ತೂರು ವಾರ್ಡ್ ನಲ್ಲಿ ಅತಿ ಕಡಿಮೆ 10,926 ಮತದಾರರಿದ್ದಾರೆ. ಒಟ್ಟಾರೆ 369 ವಾರ್ಡ್‌ಗಳಿಗೆ 8,044 ಮತಗಟ್ಟೆ ಇರಲಿವೆ ಎಂದು ಮಾಹಿತಿ ನೀಡಿದರು.
ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಸೆಲ್ವಮಣಿ, ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್, ಡಾ. ರಾಜೇಂದ್ರ ಉಪಸ್ಥಿತರಿದ್ದರು.
ಪಾಲಿಕೆವಾರು ಮತದಾರರ ಸಹಾಯವಾಣಿ
ಮತದಾರ ಪಟ್ಟಿಯಲ್ಲಿ ಲೋಪ ದೋಷ, ಹೆಸರು ಸೇರ್ಪಡೆ ಸೇರಿದಂತೆ ಮೊದಲಾದವುಗಳಿಗೆ ನಗರ ಪಾಲಿಕೆ ವಾರು ಸಹಾಯವಾಣಿ ಆರಂಭಿಸಲಾಗಿದ್ದು, ಬೆಂಗಳೂರು ಕೇಂದ್ರ (080-22975803) ಬೆಂಗಳೂರು ಉತ್ತರ (080-22975936), ಬೆಂಗಳೂರು ದಕ್ಷಿಣ (9480685704), ಬೆಂಗಳೂರು ಪೂರ್ವ (9480685706) ಹಾಗೂ ಬೆಂಗಳೂರು ಪಶ್ಚಿಮ (9480685703) ಕರೆ ಮಾಡಬಹುದಾಗಿದೆ.
2022ರಲ್ಲಿ 79.19 ಲಕ್ಷ ಮತದಾರರು
2022ರಲ್ಲಿ 243 ವಾರ್ಡ್‌ಗಳಿಗೆ ರಾಜ್ಯ ಚುನಾವಣಾ ಆಯೋಗ ಅಂತಿಮ ಮತದಾರ ಪಟ್ಟಿ ಪ್ರಕಟಿಸಿತ್ತು. ಆ ವೇಳೆ 243 ವಾರ್ಡ್‌ನಲ್ಲಿ ಒಟ್ಟು 79,19,563 ಮಂದಿ ಮತದಾರರಿದ್ದರು, ಈ ಪೈಕಿ 41,14,383 ಪುರಷರು, 38,03,747 ಮಹಿಳೆ ಹಾಗೂ 1,433 ಇತರೆ ಮತದಾರರಿದ್ದರು. ಇದೀಗ 9,71,848 ಮತದಾರರು ಸೇರ್ಪಡೆಗೊಂಡಿದ್ದಾರೆ.
ನಗರ ಪಾಲಿಕೆಯ ವಾರ್ಡ್‌ವಾರು ಮತದಾರ ಪಟ್ಟಿ ವಿವರ
ನಗರ ಪಾಲಿಕೆ - ವಾರ್ಡ್ - ಮತಗಟ್ಟೆ - ಪುರುಷ - ಮಹಿಳೆ -ಇತರೆಒಟ್ಟು ಮತದಾರರು
ಬೆಂ.ಕೇಂದ್ರ 6313057,26,3526,98,28930314,25,483
ಬೆಂ.ಉತ್ತರ721,7169,94,3109,59,5153,8119,54,206
ಬೆಂ.ದಕ್ಷಿಣ721,6149,03,1828,40,86322517,44,270
ಬೆಂ.ಪೂರ್ವ509165,49,3134,92,16725810,41,738
ಬೆಂ.ಪಶ್ಚಿಮ1122,49313,96,03613,29,21046827,25,714
ಒಟ್ಟು3698,04445,69,19343,20,5831,63588,91,441


