ಎತ್ತಿನಹೊಳೆ ಯೋಜನೆಯಿಂದ ಅನುಕೂಲ: ಸಿಎಂ ಬದಲಾವಣೆ ಹೈಕಮಾಂಡ್ ಬಿಟ್ಟ ವಿಚಾರ ಎಂದ ಶಾಸಕ ಬಾಲಕೃಷ್ಣ

ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಚ್‌ ಸಿ ಬಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. 

Benefit from Yettinahole project and CM change is a matter left to the High Command says MLA Balakrishna gvd

ಮಾಗಡಿ (ಸೆ.09): ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಚ್‌ ಸಿ ಬಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈಗ ಅವರ ಅವಧಿಯಲ್ಲಿ ಗೌರಿ ಹಬ್ಬದ ದಿನದಂದು ಲೋಕಾರ್ಪಣೆ ಮಾಡಿದ್ದು ಮಾಗಡಿ ತಾಲೂಕಿನ ತಿಪ್ಪನಹಳ್ಳಿ ಜಲಾಶಯಕ್ಕೆ ಒಂದುವರೆ ಟಿಎಂಸಿ ನೀರು ಬರುತ್ತಿದೆ. 

ನಾವು ಹೆಚ್ಚುವರಿಯಾಗಿ ಮಂಚನಬೆಲೆ ಜಲಾಶಯಕ್ಕೆ ಮುಕ್ಕಾಲು ಟಿಎಂಸಿ ನೀರು ಕೊಡುವ ಕೆಲಸ ಮಾಡಲಾಗಿದ್ದು ಮೊದಲು ನಾಲೆಯಲ್ಲಿ ನೀರು ಬರುತ್ತದೆ ಎಂಬ ಯೋಜನೆ ಇತ್ತು ಬಿಜೆಪಿ ಸರ್ಕಾರ ಬಂದ ಮೇಲೆ ಪೈಪ್ ಮೂಲಕ ಕಾಮಗಾರಿ ಮಾಡಿರುವುದರಿಂದ ನಮ್ಮ ತಾಲೂಕಿನ ಕುದೂರಿನ ಮಾರ್ಗವಾಗಿ ಎತ್ತಿನಹೊಳೆ ಯೋಜನೆ ಹಾದು ಹೋಗುತ್ತಿತ್ತು ಈಗ ಪೈಪ್ ಲೈನ್ ನಲ್ಲಿ ಹೋಗುವುದರಿಂದ ತಮ್ಮೇನಹಳ್ಳಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ಮುಖ್ಯಮಂತ್ರಿಗಳನ್ನು ನಿರ್ಧಾರ ಮಾಡುವುದು ಹೈಕಮಾಂಡ್ ಬಿಟ್ಟ ವಿಚಾರವಾಗಿದ್ದು ಈಗ ಮುಖ್ಯಮಂತ್ರಿಗಳ ಹುದ್ದೆ ಖಾಲಿ ಇಲ್ಲ ಸತೀಶ್ ಜಾರಕಿಹೊಳಿ ರವರು ಹೈಕಮಾಂಡ್ ರವರನ್ನು ಭೇಟಿಯಾಗಿರುವುದು ಅವರ ವೈಯಕ್ತಿಕ ವಿಚಾರ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ ಮಾಧ್ಯಮದವರು ಈ ರೀತಿ ಗೊಂದಲ ಮಾಡುತ್ತಿದ್ದು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬರುವುದಿಲ್ಲ ತಮ್ಮ ಅಭಿಪ್ರಾಯವನ್ನು ಕೆಲಸವರು ಸಚಿವರು ಹೇಳುತ್ತಿದ್ದಾರೆ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.

ಮುದ್ದು ಮಗನ ಆಸೆಯಂತೆ ಗಣೇಶ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ: 5 ದಿ‌ನ ಮಾಂಸ ತಿನ್ನದೆ ಆರಾಧನೆ!

ನರಸಿಂಹಮೂರ್ತಿ ಮಾತನಾಡಿ, ಪಟ್ಟಣದ ಹೊಸಪೇಟೆ ವೃತ್ತದ ಬಳಿ 6 ಕೋಟಿ ವೆಚ್ಚದಲ್ಲಿ ನೂತನ ಬಮುಲ್ ಶಿಬಿರ ಕಚೇರಿ ನಿರ್ಮಾಣ ಮಾಡಿದ್ದು ರೈತರಿಗೆ ಅನುಕೂಲವಾಗುವ ಎಲ್ಲಾ ರೀತಿಯ ವ್ಯವಸ್ಥೆಯನ್ನು ಈ ಕಚೇರಿಯಲ್ಲಿ ಮಾಡಿಕೊಳ್ಳಲಾಗಿದ್ದು ರೈತರಿಗಾಗಿಯೇ ಕಚೇರಿ ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ ಮಾಗಡಿ ಪೊಲೀಸ್ ಇನ್ಸ್ಪೆಕ್ಟರ್ ಗಿರಿರಾಜ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios