ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?

) ಬೆಳಗಾವಿ ರಾಜಕಾರಣದಲ್ಲಿನ ಬಿಕ್ಕಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದು, ಅಥಣಿ ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ನಡೆಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಅವರು ಹುಬ್ಬಳ್ಳಿಯಲ್ಲೂ ಕೆಲಕಾಲ ಸಭೆ ನಡೆಸಿ ಸಮಾಧಾನ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Belgaum politics shift to Hubli: What happened in the secret meeting rav

ಹುಬ್ಬಳ್ಳಿ (ಏ.4) ಬೆಳಗಾವಿ ರಾಜಕಾರಣದಲ್ಲಿನ ಬಿಕ್ಕಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದು, ಅಥಣಿ ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಬೆಳಗಾವಿಯಲ್ಲಿ ಸಭೆ ನಡೆಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಅವರು ಹುಬ್ಬಳ್ಳಿಯಲ್ಲೂ ಕೆಲಕಾಲ ಸಭೆ ನಡೆಸಿ ಸಮಾಧಾನ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಯಲ್ಲಿ ಸಭೆ ನಡೆಸಿ ಅಲ್ಲಿಂದ ಸಚಿವ ಜೋಶಿ ಹುಬ್ಬಳ್ಳಿ(Hubballi)ಗೆ ಆಗಮಿಸಿದರು. ಅವರೊಂದಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh jarkiholi) ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman savadi) ಕೂಡ ಆಗಮಿಸಿದ್ದರು. ಇದೇವೇಳೆ, ಏ. 6ರಂದು ಹುಬ್ಬಳ್ಳಿಯಲ್ಲಿ ಎಸ್ಸಿ-ಎಸ್ಟಿಒಕ್ಕೂಟ ಆಯೋಜಿಸಿರುವ ಅಭಿನಂದನಾ ಸಮಾರಂಭ ಕುರಿತಂತೆ ಕೇಂದ್ರ ಸಚಿವ ನಾರಾಯಣ ಸ್ವಾಮಿ(Narayanaswami) ಹಾಗೂ ಸಚಿವ ಗೋವಿಂದ ಕಾರಜೋಳ(Govind karjol) ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಮೂವರು ಪಾಲ್ಗೊಂಡರು.

ಬಿಜೆಪಿ ಟಿಕೆಟ್‌ಗಾಗಿ ರಮೇಶ್ ಜಾರಕಿಹೊಳಿ-ಲಕ್ಷ್ಮಣ್ ಸವದಿ ಪೈಪೋಟಿ: ಅಥಣಿ ಧಣಿ ಯಾರು?

ಸಭೆ ಮುಗಿದ ಬಳಿಕ ಕೆಲಕಾಲ ಮೂವರು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸುಮಾರು ಹದಿನೈದು ನಿಮಿಷಗಳ ಕಾಲ ಸಭೆ ನಡೆದಿದೆ. ಈ ವೇಳೆ ಅಥಣಿ ಟಿಕೆಟ್‌(Athani assembly ticket) ವಿಷಯವಾಗಿಯೂ ಚರ್ಚೆ ನಡೆದಿದೆ. ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಅಲ್ಲಿ ವರೆಗೂ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸಚಿವ ಜೋಶಿ ಅವರು ಇಬ್ಬರಿಗೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಜೋಶಿ ಅವರೊಂದಿಗೆ ಸವದಿ ಹಾಗೂ ಜಾರಕಿಹೊಳಿ ಇಬ್ಬರು ಬೆಂಗಳೂರಿಗೆ ತೆರಳಿದರು. ನಾಳೆ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Ticket fight: ಕಮಲ ಪಾಳಯದಲ್ಲಿ ತಾರಕಕ್ಕೇರಿದ ಬಣ ರಾಜಕೀಯ!

ಅಥಣಿ ಟಿಕೆಟ್‌ ಮಹಾಂತೇಶ ಕುಮಟಳ್ಳಿ ಅವರಿಗೆ ಕೊಡದಿದ್ದರೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಮೇಶ ಜಾರಕಿಹೊಳಿ ಬಹಿರಂಗವಾಗಿ ತಿಳಿಸಿದ್ದರು. ಇದು ಲಕ್ಷಣ ಸವದಿ ಹಾಗೂ ಜಾರಕಿಹೊಳಿ ನಡುವೆ ಬಿಕ್ಕಟ್ಟಿಗೆ ಕಾರಣವಾಗಿತ್ತು. ಬೆಳಗಾವಿಯಲ್ಲಿ ಸಭೆ ನಡೆಸಿ ಹುಬ್ಬಳ್ಳಿಯಲ್ಲೂ ಕೆಲಕಾಲ ಗೌಪ್ಯ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಸಂಧಾನ ಆಗಿದೆಯೋ ಇಲ್ಲವೋ ಎಂಬುದು ಖಚಿತವಾಗಿಲ್ಲ.
 

Latest Videos
Follow Us:
Download App:
  • android
  • ios