Asianet Suvarna News Asianet Suvarna News

ಕಾಂಗ್ರೆಸ್‌ ಸೇರೋಕೆ ರೆಡಿಯಾದ್ರಾ ಮತ್ತೊಬ್ಬ ಬಿಜೆಪಿ ಲೀಡರ್‌?

ನನಗೆ ಟಿಕೆಟ್‌ ಕೈತಪ್ಪುತ್ತದೆ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ. ಇನ್ನೂ ಸಾಕಷ್ಟು ಸಮಯವಿದೆ. ನಾನು ಟಿಕೆಟ್‌ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಟಿಕೆಟ್‌ ವಿಚಾರವಾಗಿ ನನ್ನ ಜತೆಗೆ ಯಾವ ನಾಯಕರೂ ಚರ್ಚಿಸಿಲ್ಲ. ನಾನು ಹಾಲಿ ಸಂಸದೆಯಾಗಿರುವುದರಿಂದ ಸಹಜವಾಗಿಯೇ ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ. ಪಕ್ಷದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕು: ಸಂಸದೆ ಮಂಗಲ ಅಂಗಡಿ 

Belagavi BJP Mangala Angadi React to Join Congress grg
Author
First Published Sep 15, 2023, 7:34 AM IST

ಬೆಳಗಾವಿ(ಸೆ.15):  ಮುಂಬರುವ ಲೋಕಸಭಾ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಬಿಜೆಪಿ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಟಿಕೆಟ್‌ ಕೈತಪ್ಪುತ್ತದೆ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ. ಇನ್ನೂ ಸಾಕಷ್ಟು ಸಮಯವಿದೆ. ನಾನು ಟಿಕೆಟ್‌ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಟಿಕೆಟ್‌ ವಿಚಾರವಾಗಿ ನನ್ನ ಜತೆಗೆ ಯಾವ ನಾಯಕರೂ ಚರ್ಚಿಸಿಲ್ಲ. ನಾನು ಹಾಲಿ ಸಂಸದೆಯಾಗಿರುವುದರಿಂದ ಸಹಜವಾಗಿಯೇ ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ. ಪಕ್ಷದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕು ಎಂದು ಹೇಳಿದರು.

ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಬಾಲಚಂದ್ರ ಜಾರಕಿಹೊಳಿ

ನಾನು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಪ್ರಶ್ನೆಯೇ ಬರುವುದಿಲ್ಲ. ಟಿಕೆಟ್‌ ಸಿಗಲಿ, ಬಿಡಲಿ ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪುತ್ರಿಯರಿಗೆ ಟಿಕೆಟ್‌ ಕೊಡುವಂತೆ ನಾನು ಪಕ್ಷದ ನಾಯಕರಿಗೆ ಕೇಳಿಲ್ಲ. ಮುಂದೆ ಅಂಥ ಪ್ರಸಂಗ ಬಂದರೆ ನೋಡೋಣ. ಹಿಂದೆ ಪುತ್ರಿಗೆ ಟಿಕೆಟ್‌ ಕೇಳಿದ್ದೆ. ಅಂಗಡಿ ಕುಟುಂಬಕ್ಕೆ ಟಿಕೆಟ್‌ ಬದಲಾವಣೆ ಸಂಬಂಧ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಬಹಳಷ್ಟು ಜನ ಇರುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios