ಬೆಳಗಾವಿ: ಯಮಕನಮರಡಿಯಲ್ಲಿ ಪ್ರಚಾರ ಆರಂಭಿಸಿದ ಬಸವರಾಜ ಹುಂದ್ರಿ..!
ಕಾಂಗ್ರೆಸ್ ಭದ್ರ ಕೋಟೆ ಆಗಿರುವ ಯಮಕನಮರಡಿ ಕ್ಷೇತ್ರದ ಮೇಲೆ ಈ ಬಾರಿಯಾದರೂ ಬಿಜೆಪಿ ಗೆಲ್ಲುತ್ತಾ ಕಾದು ನೋಡಬೇಕು.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕೋಡಿ
ಚಿಕ್ಕೋಡಿ(ಏ.05): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೆ ದಿನಗಳು ಬಾಕಿ ಉಳಿದುಕೊಂಡಿದ್ದು ಕಾಂಗ್ರೆಸ್ ಮಾತ್ರ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಮಾತ್ರ ಇನ್ನೂವರೆಗೆ ಟಿಕೆಟ್ ಘೋಷಣೆ ಮಾಡಿಲ್ಲ ಆದ್ರು ಕಾಂಗ್ರೆಸ್ ಭದ್ರ ಕೋಟೆ ಆಗಿರುವ ಯಮಕನಮರಡಿಯಲ್ಲಿ ಟಿಕೆಟ್‌ಗಾಗಿ ಬಸವರಾಜ್ ಹಂದ್ರಿ ಹಾಗೂ ಮಾರುತಿ ಅಷ್ಟಿಗಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಇಬ್ಬರ ಹೆಸರನ್ನು ಕೇಂದ ಸಂಸದೀಯ ಮಂಡಳಿಗೆ ಬಿಜೆಪಿ ವರಿಷ್ಠರು ರವಾನಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಘೋಷಣೆಗೂ ಮುನ್ನ ಬಸವರಾಜ ಹುಂದ್ರಿ ಫುಲ್ ಆಕ್ಟಿವ್ ಆಗಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ.
ಹೌದು, ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಯಮಕನಮರಡಿ ಕ್ಷೇತ್ರದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಟಿಕೆಟ್ ಯಾರಿಗೂ ಹೈಕಮಾಂಡ್ ನೀಡಿದ್ರು ಒಗ್ಗಟ್ಟಿನ ಜಪ ಮಾಡುತ್ತಿರುವ ಬಸವರಾಜ ಹುಂದ್ರಿ ಹಾಗೂ ಮಾರುತಿ ಅಷ್ಠಗಿ ಅವರು ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ. ಆದ್ರೆ ಮಾರುತಿ ಅಷ್ಠಗಿಕ್ಕಿಂತ ಒಂದು ಕೈ ಮೇಲುಗೈ ಸಾಧಿಸಿರುವ ಬಸವರಾಜ ಹುಂದ್ರಿಗೆ ಟಿಕೆಟ್ ಸಿಗುವ ಸುಳಿವು ಸಿಕ್ಕಂತ್ತಾಗಿದೆ. ಹೀಗಾಗಿಯೇ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸಿದ್ದಾರೆ.
ಬೆಳಗಾವಿ ಡಿಫೆರೆಂಟ್ ಪಾಲಿಟಿಕ್ಸ್: ಬಿಜೆಪಿ ಸೈಲೆಂಟ್ - ಕಾಂಗ್ರೆಸ್ ವೈಲೆಂಟ್
ಮನೆ ಮನೆಗೆ ತೆರಳಿ ಕರ ಪತ್ರ ಹಂಚುತ್ತಿರುವ ಬಸವರಾಜ ಹುಂದ್ರಿ ಅವರು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಭದ್ರ ಕೋಟೆ ಆಗಿರುವ ಯಮಕನಮರಡಿ ಕ್ಷೇತ್ರದ ಮೇಲೆ ಈ ಬಾರಿಯಾದರೂ ಬಿಜೆಪಿ ಗೆಲ್ಲುತ್ತಾ ಕಾದು ನೋಡಬೇಕು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.