8ನೇ ಪತ್ರ ಬರೆದ ಸಭಾಪತಿ‌ ಬಸವರಾಜ ಹೊರಟ್ಟಿ: ಇದು ಲಾಸ್ಟ್‌ ಎಂದು ಗರಂ

* ಸರ್ಕಾರಿ ನಿವಾಸ ಹಂಚಿಕೆ ಮಾಡದ ವಿಚಾರ
* ಮತ್ತೆ ಸಭಾಪತಿ‌ ಬಸವರಾಜ ಹೊರಟ್ಟಿ ಗರಂ
* 8ನೇ ಪತ್ರ ಪತ್ರ ಬರೆದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

basavaraj horatti writes to cm bommai for govt house rbj

ಬೆಂಗಳೂರು, (ಸೆ.04): ಸರ್ಕಾರಿ ವಸತಿ ಗೃಹ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆಗಿದ್ದಾರೆ.

ಹೌದು...ಹಿಂದಿನ ಸಭಾಪತಿಗೆ ಹಂಚಿಕೆ ಮಾಡಿದ್ದ ವಸತಿ ಗೃಹವನ್ನು ಕೊಡಬೇಕು ಎಂದು ಹೊರಟ್ಟಿ ಈವರೆಗೆ 7 ಪತ್ರ ಬರೆದಿದ್ದಾರೆ. ಆದರೂ ಅದ್ಯಾವುದಕ್ಕೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇದರಿಂದ ಕೋಪಗೊಂಡಿರುವ ಬಸವರಾಜ ಹೊರಟ್ಟಿ ಇದೀಗ 8ನೇ ಪತ್ರ ಬರೆದಿದ್ದಾರೆ.

ನಂಗೊಂದು ಮನೆ ಕೊಡಿ.. 7ನೇ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ

ಇನ್ನು ಈ ಬಗ್ಗೆ ಇಂದು (ಸೆ.04) ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸಭಾಪತಿಗೆ ಹಂಚಿಕೆ ಮಾಡಿದ್ದ ವಸತಿ ಗೃಹವನ್ನು ಕೊಡಬೇಕು.ಇಲ್ಲದಿದ್ದರೆ ಬೇಡ, ಸರ್ಕಾರಿ‌ ವಸತಿಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಖಡಕ್ ಆಗಿ‌ ಹೇಳಿದರು.

 ಸಂಸದೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಗಳ ಪೈಕಿ ಸಭಾಪತಿ ಹಾಗೂ ವಿಧಾನಸಭಾಧ್ಯಕ್ಷರು ಸೇರಿದ್ದು, ಸಭಾಪತಿ ಮತ್ತು ಸಭಾಧ್ಯಕ್ಷರಿಗೆ ನಿರ್ದಿಷ್ಟ ವಸತಿ ಗೃಹ ಗೊತ್ತುಪಡಿಸಬೇಕು ಎಂದು ಮುಖ್ಯಮಂತ್ರಿಗೆ ಜಂಟಿಯಾಗಿ ಪತ್ರ ಬರೆದಿದ್ದೇವೆ. ಹಿಂದಿನ ಸಭಾಪತಿಗಳಿಗೆ ಹಂಚಿಕೆ ಮಾಡಿದ್ದ ವಸತಿ ಗೃಹ ಕಾಯಂ ಆಗಿ ಗೊತ್ತುಪಡಿಸಲು ತಿಳಿಸಲಾಗಿದೆ. 8ನೇ ಬಾರಿಗೆ ಬರೆದಿರುವ ಕೊನೆಯ ಪತ್ರವಿದು. ವಸತಿ ಗೃಹ ಹಂಚಿಕೆ ಮಾಡಿ ಎಂದು ಭಿಕ್ಷೆ ಬೇಡಲಾಗದು ಎಂದು ಎಂದು ಗರಂ ಆಗಿಯೇ ಮಾತನಾಡಿದರು.

ಲೋಕೋಪಯೋಗಿ ವಸತಿ, ಗೃಹ ಸಂಖ್ಯೆ 3ʼ ಅನ್ನು ತಮಗೆ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಯಡಿಯೂರಪ್ಪ ಅವರಿಗೆ 6 ಬಾರಿ ಪತ್ರ ಬರೆದಿದ್ದಾರೆ. ಅಲ್ಲದೇ ಬೊಮ್ಮಾಯಿ ಸಿಎಂ ಆದ ಬಳಿಕವೂ ಒಂದು ಪತ್ರ ಬರೆದಿದ್ದಾರೆ. ಅದ್ಯಾವುದಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಮತ್ತೆ ಪತ್ರ ಬರೆದಿದ್ದಾರೆ.

ಕುಮಾರಪಾರ್ಕ್‌ನ ಗಾಂಧಿ ಭವನ ಹಿಂಭಾಗದಲ್ಲಿರುವ ಸರ್ಕಾರಿ  ಮನೆಯನ್ನ  ಈ ಹಿಂದೆ ಸಭಾಪತಿಗಳಿಗೆ ನೀಡಲಾಗಿತ್ತು. ಈಗ ಹೊರಟ್ಟಿ ಸಹ ಆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಸಿ ಪಿ ಯೋಗೇಶ್ವರ್ ಆ ನಿವಾಸವನ್ನು ಇನ್ನೂ ಖಾಲಿ ಮಾಡಿಲ್ಲ. 

Latest Videos
Follow Us:
Download App:
  • android
  • ios