Asianet Suvarna News Asianet Suvarna News

Karnataka Politics: ರಾಜೀನಾಮೆ ನೀಡಲು ಮುಂದಾದ ಸ್ಪೀಕರ್‌ ಹೊರಟ್ಟಿ

*   ಸಿಎಂ ಬಸವರಾಜ ಬೊಮ್ಮಾಯಿ ಮನವೊಲಿಕೆ
*   ಮೇಲ್ಮನೆಯಲ್ಲಿ ಹೈಡ್ರಾಮಾ
*   ಎಸ್ಸಾರ್‌ ಪಾಟೀಲ್‌ ಸೇರಿ ಕಾಂಗ್ರೆಸಿಗರ ಮಾತಿಗೆ ಬೇಸರ
 

Basavaraj Horatti Thinking to Resignation to Speaker Post grg
Author
Bengaluru, First Published Dec 25, 2021, 6:02 AM IST
  • Facebook
  • Twitter
  • Whatsapp

ಬೆಳಗಾವಿ(ಡಿ.25): ಕಲಾಪ ನಿರ್ವಹಣೆ ಕುರಿತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್(SR Patil) ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್‌(Congress) ನಾಯಕರು ಆಡಿದ ಮಾತಿನಿಂದ ತೀವ್ರ ನೊಂದು ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಅಧಿವೇಶನದ ಕೊನೆಯ ದಿನ ನಡೆಯಿತು. ನಂತರ ಎಸ್‌.ಆರ್‌. ಪಾಟೀಲ್‌ ಮತ್ತಿತರರು ವಿಷಾದ ವ್ಯಕ್ತಪಡಿಸಿದ್ದರಿಂದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಹಿರಿಯ ನಾಯಕರು ಮನವೊಲಿಸಿದ ಹಿನ್ನೆಲೆಯಲ್ಲಿ ಹೊರಟ್ಟಿ ಅವರು ರಾಜೀನಾಮೆ(Resignation) ನಿರ್ಧಾರದಿಂದ ಹಿಂದೆ ಸರಿದರು.

ಆಗಿದ್ದೇನು?:

ಭೋಜನ ವಿರಾಮದ ನಂತರ ತುಂಬಾ ಹೊತ್ತಾದರೂ ಕಲಾಪ(Session) ಆರಂಭವಾಗದೇ ಇದ್ದಾಗ, ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಮತ್ತಿತರರು ಸಭಾಪತಿ ಹೊರಟ್ಟಿ ಅವರ ಕಚೇರಿಗೆ ತೆರಳಿ ಕಲಾಪ ಆರಂಭಿಸದ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದರು. ಇದಕ್ಕೆ ಹೊರಟ್ಟಿ ಅವರು ಕೋರಂ ಇಲ್ಲ. ಆಡಳಿತ ಪಕ್ಷದ ಅನೇಕ ಸದಸ್ಯರು ತಮ್ಮ ಊರಿಗೆ ಹೋಗುತ್ತಿದ್ದಾರೆ. ಹಾಗಾಗಿ ಅವರಿಗೆ ವಾಪಸ್‌ ಬರುವಂತೆ ಸೂಚನೆ ನೀಡಲಾಗಿದೆ. ಹಾಗಾಗಿ ಕಲಾಪ ಆರಂಭ ತಡವಾಗಿದೆ ಎಂದು ಹೇಳಿದರು. ಇದಕ್ಕೆ ಎಸ್‌.ಆರ್‌. ಪಾಟೀಲ್‌, ತಮ್ಮ ಪಕ್ಷದ ಸದಸ್ಯರೂ ವಾಪಸ್‌ ಬರಲು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿ ತುಸು ಕಟುವಾಗಿಯೇ ಮಾತನಾಡಿದರು ಎಂದು ಹೇಳಲಾಗಿದೆ.

ಅಧಿವೇಶನ ಮುಕ್ತಾಯ, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ

ಇದಾದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಎಸ್‌.ಆರ್‌. ಪಾಟೀಲ್‌ ಅವರು ಸರ್ಕಾರ(Government of Karnataka) ಹೇಳಿದ ಹಾಗೆ ಸಭಾಪತಿಗಳು ನಡೆದುಕೊಳ್ಳಬಾರದು ಎಂದೆಲ್ಲಾ ಹೇಳಿದರು. ಈ ಮಧ್ಯೆ ದಿಢೀರನೇ ಹೊರಟ್ಟಿ ಅವರು ಸದನವನ್ನು 5 ನಿಮಿಷ ಮುಂದೂಡಿ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ಜೊತೆ ಚರ್ಚಿಸಲು ಬರುವಂತೆ ಕೋರಿದರು. ಅಲ್ಲಿ 42 ವರ್ಷಗಳ ಪರಿಷತ್‌(Vidhan Parishat) ಸದಸ್ಯನಾಗಿರುವ ಅವಧಿಯಲ್ಲಿ ಪ್ರಜಾಪ್ರಭುತ್ವದ(Democracy) ರೀತಿ ಕಾರ್ಯನಿರ್ವಹಿಸಿದ್ದೇನೆ. ಹೀಗಿರುವಾಗಿ ತಾವು ಆಡಿರುವ ಮಾತಿನಿಂದ ಬೇಸರವಾಗಿದೆ. ಹೀಗಾಗಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ಸಭಾಪತಿಗಳ ಮಾತಿನಿಂದ ಕೊಂಚ ಅಧೀರರಾದ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಸಮಾಧಾನ ಪಡಿಸಿದರು. ಎಸ್‌.ಆರ್‌. ಪಾಟೀಲ್‌ ಸಹ ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ ಮನವೊಲಿಸಿದ ನಂತರ ಹೊರಟ್ಟಿಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದರು.

ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಸಭಾಪತಿ

ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅನುದಾನಿತ ಶಿಕ್ಷಕರ ಹುದ್ದೆಗಳ(Teachers Recruitment) ಭರ್ತಿಗೆ ಕ್ರಮ ಕೈಗೊಳ್ಳುವ ಬಗ್ಗೆ ಗುರುವಾರದೊಳಗೆ ತೀರ್ಮಾನಿಸಬೇಕೆಂದು ವಿಧಾನಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ  ಸರ್ಕಾರಕ್ಕೆ ಸೂಚಿಸಿದ್ದರು. 

Belagavi Session: ಬೆಳಗಾವಿ ಅಧಿವೇಶನ ತೆರೆ, ಮುಂದಿನ ಅಧಿವೇಶನದ ಬಗ್ಗೆ ತಿಳಿಸಿದ ಬೊಮ್ಮಾಯಿ

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮತ್ತಿತರರು ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (Dr CN Ashwath Narayan) ಉತ್ತರಿಸುವಾಗ ಮಧ್ಯಪ್ರವೇಶಿಸಿದ ಸಭಾಪತಿ ಗುರುವಾರದೊಳಗೆ ಆರ್ಥಿಕ, ಶಿಕ್ಷಣ ಇಲಾಖೆ ಸಚಿವರು, ಶಿಕ್ಷಣ(Education) ಕ್ಷೇತ್ರದ ಪ್ರತಿನಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತಿರ್ಮಾನಕ್ಕೆ ಬನ್ನಿ ಎಂದು ಗಡವು ನೀಡಿದ್ದರು. 

ಅಲ್ಲಿಯವರೆಗೆ ನೇಮಕಾತಿಗೆ (Recruitment) ಸಂಬಂಧಿಸಿದ ಪ್ರಶ್ನೋತ್ತರವನ್ನು ತಡೆ ಹಿಡಿದಿರುವುದಾಗಿ ಪ್ರಕಟಿಸಿದರು. ಇದಕ್ಕೂ ಮುನ್ನ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು, 2015ರವರೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಕೆಲವರು ಭರ್ತಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಸರಿಯಾದ ನಿಯಮ ಪಾಲನೆ ಮಾಡುತ್ತಿಲ್ಲ. ಹಾಗಾಗಿ ನೇಮಕಾತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾಗಿದ್ದು ಸರಿಪಡಿಸುತ್ತೇವೆ ಎಂದು ತಿಳಿಸಿದ್ದರು. 
 

Follow Us:
Download App:
  • android
  • ios