Asianet Suvarna News Asianet Suvarna News

Karnataka Politics: ಮಲ್ಕಾಪುರೆ ಪ್ರಭಾರ ಸಭಾಪತಿ: ಹೊರಟ್ಟಿ ತ್ಯಾಗಪತ್ರ ಅಂಗೀಕಾರ

*   ತೊಡಕು ನಿವಾರಣೆ: ಇಂದು/ನಾಳೆ ಹೊರಟ್ಟಿ ಬಿಜೆಪಿಗೆ?
*  ಸೇರ್ಪಡೆ ಬಳಿಕ ಬಿಜೆಪಿ ಟಿಕೆಟ್‌ ಘೋಷಣೆ
*  ಕಾನೂನಾತ್ಮಕವಾಗಿ ಹೊರಟ್ಟಿ ರಾಜೀನಾಮೆ ಅಂಗೀಕಾರ 
 

Basavaraj Horatti Resignation Acceptance grg
Author
Bengaluru, First Published May 18, 2022, 4:28 AM IST

ಬೆಂಗಳೂರು(ಮೇ.18): ತಾಂತ್ರಿಕ ಕಾರಣದಿಂದಾಗಿ ಬಸವರಾಜ ಹೊರಟ್ಟಿ(Basavaraj Horatti) ಅವರು ವಿಧಾನಪ ರಿಷತ್‌ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರವಾಗಲು ಇದ್ದ ತಡೆ ನಿವಾರಣೆಯಾಗಿದ್ದು, ನೂತನ ಹಂಗಾಮಿ ಸಭಾಪತಿಯಾಗಿ ರಘುನಾಥ್‌ ಮಲ್ಕಾಪುರೆ(Raghunath Malkapure) ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಅದರ ಬೆನ್ನಲ್ಲೇ ಅವರು ಹೊರಟ್ಟಿ ಮೇಲ್ಮನೆ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌(Thawar Chand Gehlot) ಅವರು ಪರಿಷತ್‌ನ ಹಿರಿಯ ಸದಸ್ಯ ರಘುನಾಥ್‌ ಮಲ್ಕಾಪುರೆ ಅವರನ್ನು ಹಂಗಾಮಿ ಸಭಾಪತಿಯಾಗಿ(Speaker) ನೇಮಕ ಮಾಡಿ ಆದೇಶ ಹೊರಡಿಸಿದರು. ಶಾಶ್ವತ ಸಭಾಪತಿ ನೇಮಕವಾಗುವವರೆಗೆ ಪರಿಷತ್‌ನ ಕಾರ್ಯಗಳನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ರಘುನಾಥ್‌ ಮಲ್ಕಾಪುರೆ ಅವರು ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರು(Governor) ಆದೇಶ ಹೊರಡಿಸಿದ ಬಳಿಕ ಮಲ್ಕಾಪುರೆ ಅವರು ವಿಧಾನಸೌಧದ ಸಭಾಪತಿ ಕೊಠಡಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ವಿಧಾನಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೇ ಮತ್ತು ಅಧಿಕಾರಿಗಳು ಹೂಗುಚ್ಛ ನೀಡಿ ನೂತನ ಹಂಗಾಮಿ ಸಭಾಪತಿಗಳನ್ನು ಸ್ವಾಗತಿಸಿದರು. ತಾಂತ್ರಿಕ ಕಾರಣದಿಂದಾಗಿ ತಮ್ಮ ಮೇಲ್ಮನೆ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆಗೆ ತಡೆ ಉಂಟಾದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ಮಂಗಳವಾರ ನೂತನ ಹಂಗಾಮಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ತದನಂತರ ಕಾನೂನಾತ್ಮಕವಾಗಿ ಹೊರಟ್ಟಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು. ರಾಜೀನಾಮೆ ಪಡೆದ ಹಂಗಾಮಿ ಸಭಾಪತಿಗಳು ಅದನ್ನು ರಾಜ್ಯಪಾಲರಿಗೆ ಕಳುಹಿಸುವ ಪ್ರಕ್ರಿಯೆ ನಡೆಸಿದರು.

Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?

ಇದೀಗ ತಾಂತ್ರಿಕ ಅಡಚಣೆ ನಿವಾರಣೆಯಾಗಿರುವುದರಿಂದ ಬುಧವಾರ ಅಥವಾ ಗುರುವಾರ ಹೊರಟ್ಟಿ ಅವರು ಬಿಜೆಪಿಗೆ(BJP) ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಬಳಿಕ ಅವರಿಗೆ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಲಾಗುತ್ತದೆ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಹೊರಟ್ಟಿ ರಾಜೀನಾಮೆ ಅಂಗೀಕಾರಕ್ಕೆ ತೊಡಕು ಇದ್ದು, ಇದರ ನಿವಾರಣೆಗೆ ಹಂಗಾಮಿ ಸಭಾಪತಿ ನೇಮಕ ಮಾಡಲಾಗುತ್ತದೆ ಎಂದು ‘ಕನ್ನಡಪ್ರಭ’ ನಿನ್ನೆಯೇ ವರದಿ ಮಾಡಿತ್ತು.
 

Follow Us:
Download App:
  • android
  • ios