Asianet Suvarna News Asianet Suvarna News

ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿ: ಶೆಟ್ಟರ್‌

ಬಿಜೆಪಿ ಹೈಕಮಾಂಡ್‌ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವವರೆಗೆ ಸಭಾಪತಿ ಅವರು ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು. 

Jagadish Shettar Talks About BJP Opposition Leader Selection gvd
Author
First Published Jul 15, 2023, 8:04 AM IST

ವಿಧಾನ ಪರಿಷತ್‌ (ಜು.15): ಬಿಜೆಪಿ ಹೈಕಮಾಂಡ್‌ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವವರೆಗೆ ಸಭಾಪತಿ ಅವರು ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ನಮ್ಮನ್ನು ಸಾಕಿ ಬೆಳೆಸಿದ ಜಗದೀಶ್‌ ಶೆಟ್ಟರ್‌ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದರು. 

ಇದಕ್ಕೆ ಸಚಿವ ಕೆ.ಎನ್‌.ರಾಜಣ್ಣ ನಿಮ್ಮ ಒಳಿತಿಗೆ ಅವರು ಸಲಹೆ ನೀಡುತ್ತಿದ್ದಾರೆ, ಸ್ವೀಕರಿಸಿ ಎಂದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ. ವಿಧಾನಸಭೆಯಲ್ಲೂ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ, ವಿಧಾನ ಪರಿಷತ್‌ನಲ್ಲೂ ಆಯ್ಕೆ ಮಾಡಿಲ್ಲ. ಅದು ಸಂವಿಧಾನಿಕ ಹುದ್ದೆ. ಆ ಹುದ್ದೆಗಳು ಖಾಲಿ ಇವೆಯಲ್ಲಾ ಎಂಬುದೇ ನಮ್ಮ ವ್ಯಥೆ ಎಂದರು.

ಡಿಕೆಶಿ ಮೇಲಿನ ಖಾಸಗಿ ದೂರು ವಜಾಗೊಳಿಸಿದ ಹೈಕೋರ್ಟ್‌

ವಿಪಕ್ಷ ನಾಯಕನ ಸ್ಥಾನ ಸೇಲಿಗಿದೆಯೇ: ಮುಖ್ಯಮಂತ್ರಿ ಸ್ಥಾನವನ್ನು ಸೇಲ್‌ಗಿಟ್ಟರೀತಿ ಬಿಜೆಪಿಯವರು ಪ್ರತಿಪಕ್ಷ ನಾಯಕನ ಸ್ಥಾನ ಮಾರಾಟಕ್ಕಿದ್ದಾರೆಯೇ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಲೇವಡಿ ಮಾಡಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೂ ನೂರಾರು ಕೋಟಿ ನಿಗದಿ ಮಾಡಿದ್ದಾರೋ ಏನೋ ಎಂದೂ ಅವರು ಪ್ರಶ್ನಿಸಿದ್ದಾರೆ. 

ಇದೇ ವೇಳೆ ನಮ್ಮ ಸರ್ಕಾರದಲ್ಲಿ ಭಾಗ್ಯಗಳನ್ನು ನಾವು ಶ್ರೀಮಂತರಿಗೆ ನೀಡುತ್ತಿಲ್ಲ ಎಂದು ಹೇಳಿದ ಅವರು, ಅನ್ನಭಾಗ್ಯ, ಬಸ್‌ಪಾಸ್‌, 200 ಯುನಿಟ್‌ ವಿದ್ಯುತ್‌, ಯುವನಿಧಿ ಎಲ್ಲವನ್ನೂ ಬಡವರಿಗಷ್ಟೇ ನೀಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಅದಕ್ಕಾಗಿಯೇ ಬಡವರಿಗಾಗಿ ರೂಪಿಸಿದ ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಿದ್ದಾರೆ. ಬಡವರ ಬಗ್ಗೆ ಜೋಶಿಯವರಿಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ವಿಪಕ್ಷ ನಾಯಕ ಆಯ್ಕೆ ವಿಳಂಬದಿಂದ ಮುಜುಗರವಾಗಿದೆ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿನ ವಿಳಂಬದಿಂದಾಗಿ ಪಕ್ಷಕ್ಕೆ ಮುಜುಗರವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬ ಆಗಿದೆ ನಿಜ. ಇಷ್ಟೊತ್ತಿಗಾಗಲೇ ಪ್ರತಿಪಕ್ಷ ನಾಯಕನ ಆಯ್ಕೆ ಆಗಬೇಕಿತ್ತು. 

ಆದರೆ, ಕಾರಣಾಂತರಗಳಿಂದ ಆಯ್ಕೆಯಾಗಿಲ್ಲ. ಶೀಘ್ರದಲ್ಲಿಯೇ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ನಾಯಕನನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವಲ್ಲಿ ನಮ್ಮ ಪಕ್ಷ ಹಿಂದೆ ಸರಿದಿಲ್ಲ. ಸರ್ಕಾರದ ವಿರುದ್ಧ ಸದನದೊಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದ್ದೇವೆ. ಬಜೆಟ್‌ನಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈ ಬಿಡುವ ಮೂಲಕ ಬಡವರ ವಿರೋಧಿ ಸರ್ಕಾರ ಎಂಬುದನ್ನು ಕಾಂಗ್ರೆಸ್‌ ಸಾಬೀತುಪಡಿಸಿದೆ. 

ಮಹಿಳೆ ಘನತೆಗೆ ಚ್ಯುತಿ ಪ್ರಕರಣ: 2 ವರ್ಷ ಜೈಲು ಶಿಕ್ಷೆ ಆದೇಶ ರದ್ದು

ನಾವು ಬಡವರ ಪರ ಮಾಡಿದ ಕೆಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಬಿಟ್ಟು ಅನ್ಯಾಯ ಮಾಡಿದೆ. ಬಜೆಟ್‌ ಮಂಡನೆ ವೇಳೆ ದ್ವೇಷದ ರಾಜಕಾರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಟೀಕಿಸಿದರು. ಜೈನಮುನಿಯ ಹತ್ಯೆ ಖಂಡನೀಯ. ಭಾನುವಾರ ಬಿಜೆಪಿಯ ಮುಖಂಡರು ಅಲ್ಲಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ರಾಜ್ಯದ ಯಾವುದೇ ಸಮಾಜದ ಜನರ ಸುರಕ್ಷತೆಯ ಪರ ಇದ್ದು, ಯಾವಾಗಲೂ ಅವರ ಪರ ನಿಲ್ಲಲಿದೆ ಎಂದರು.

Follow Us:
Download App:
  • android
  • ios