'BSY ಇಳಿಸಿದ್ದು ಬೇಸರವಾಗಿದೆ : ಆದರೆ ಬೊಮ್ಮಾಯಿ ಅಲ್ಲಾಡಿಸಲು ಯಾರಿಂದಲೂ ಆಗಲ್ಲ'

  •  ಬೊಮ್ಮಾಯಿ ಸರ್ಕಾರವನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ
  • ಬೊಮ್ಮಾಯಿ   ಅಪಸ್ವರ ಎತ್ತುವವರಿಗೆ ಹದ ಹಾಕುತ್ತಾರೆ
  •  ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ
Basavaraj Bommai Govt  is Safe, says Gopalkrishna Belur snr

ಶಿವಮೊಗ್ಗ (ಆ.10): ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಬೊಮ್ಮಾಯಿ ಅವರು ಮೃದು ಸ್ವಭಾವದವರಾಗಿರಬಹುದು. ಆದರೆ, ಅಪಸ್ವರ ಎತ್ತುವವರಿಗೆ ಹದ ಹಾಕುತ್ತಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಿವಮೊಗ್ಗದಲ್ಲಿಂದು ಮಾತನಾಡಿದ  ಬೇಳೂರು ಗೋಪಾಲಕೃಷ್ಣ, ಬೊಮ್ಮಾಯಿ ಅವರು ದೇವೇಗೌಡ ಹಾಗೂ ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿರುವ ಉದ್ದೇಶವೇ ಭಿನ್ನಮತಿಯರನ್ನು ಮಟ್ಟ ಹಾಕಲು.  ಬೊಮ್ಮಾಯಿ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಜೆಡಿಎಸ್ ನವರು ನಿಮ್ಮ ಜೊತೆ ನಾವಿದ್ದೇವೆ ಎನ್ನುತ್ತಾರೆ. ಕ್ಯಾಬಿನೆಟ್, ಖಾತೆ ಅಪಸ್ವರ ಎತ್ತುವವರು ಏನು ಮಾಡೋಕೆ ಆಗಲ್ಲಾ ಎಂದರು. 

ಶಮನವಾಗದ ಭಿನ್ನಮತ, ಅತೃಪ್ತರ ದೆಹಲಿ ಟೂರ್, ಸಿಎಂಗೆ ಎದುರಾಗಿದೆ ಸವಾಲ್..!

ಯಡಿಯೂರಪ್ಪ ಅವರಿಂದ ಶಿವಮೊಗ್ಗ ಜಿಲ್ಲೆಗೆ ಕೆಲಸವಾಗುತ್ತಿತ್ತು. ಆದರೆ ಕೆಲವೊಬ್ಬ ಮುಟ್ಠಾಳರು ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ನನಗೆ ಬೇಸರ ತಂದಿದೆ.  ಯಡಿಯೂರಪ್ಪ ಅವರನ್ನು ಏಕೆ‌ ಕೆಳಗಿಳಿಸಿದರು ಎಂಬುದು ನನಗೆ ತಿಳಿದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.  

 ಮಾಜಿ ಸಚಿವ ಜಮೀರ್ ಅಹ್ಮದ್ ಮನೆ ಮೇಲಿನ ದಾಳಿ : ಇದರ ಹಿಂದೆ ಆರ್ ಎಸ್ ಎಸ್ , ಇತರರ ಕೈವಾಡ ಇದೆ. ಕೇಂದ್ರ ಸರ್ಕಾರ ಯಾವುದೇ ಕಾಂಗ್ರೆಸ್ ವ್ಯಕ್ತಿ ಬಿಡುವುದಿಲ್ಲ.  ಆರ್ ಎಸ್ ಎಸ್ ನ ಮುಖಂಡ ಕಲ್ಲಡಕ ಪ್ರಭಾಕರ್ ಭಟ್ಟರ ಮೇಲೆ ದಾಳಿ ಮಾಡಿ ಸಾವಿರ ಕೋಟಿ ರೂಪಾಯಿ ಸಿಗುತ್ತದೆ.  ಇಂತಹವರ ಬಿಟ್ಟು ಕಾಂಗ್ರೆಸ್ಸಿಗರ ಮೇಲಿನ ದಾಳಿ ಖಂಡನೀಯ ಎಂದರು. 

ವ್ಯಾಪಾರ ಮಾಡಿ ಜಮೀರ್  ಮನೆ ಕಟ್ಟಿದ್ದು ತಪ್ಪಾ?  ಸಂಸದ ರಾಘವೇಂದ್ರ ತಂದೆ ಡಿಸಿಎಂ ಆಗಿದ್ದಾಗ ಎಷ್ಟು ಅಸ್ತಿ ಇತ್ತು. ಇವತ್ತು 70 ಕೋಟಿ ರೂ. ಗೆ ಬಂದಿದ್ದಾರೆ.  ರಾಘವೇಂದ್ರ ಜಮೀನಲ್ಲಿ‌ ಭತ್ತ ಬೆಳೆದರಾ? ಶುಂಠಿ ಬೆಳೆದರಾ? ಏನು ನಿಂಬೆಹಣ್ಣು ಮಾರಿದರಾ? ಏನು ಇಲ್ಲ. ಮತ್ತೆ ಅದು ಹೇಗೆ ಬಂತು.  ರಾಘವೇಂದ್ರ ರದ್ದೆ 70 ಕೋಟಿ ರೂ. ಆದರೆ ವಿಜಯೇಂದ್ರ , ಬಿಎಸ್ ವೈ, ಅವರ ಅಕ್ಕ ತಂಗಿಯರ ಆಸ್ತಿ ಎಷ್ಟಿರಬಹುದು ಎಂದು ಪ್ರಶ್ನೆ ಮಾಡಿದರು.

ಈಶ್ವರಪ್ಪ ನವರಿಗೆ ನಿಮಗೆ ಗೌರವ ಕೊಡುತ್ತೇನೆ. ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ. ಆರ್ ಎಸ್ ಎಸ್ ನವರು ಹಣಕಾಸಿನ ಶಕ್ತಿ ಕೊಟ್ಟಿದ್ದಕ್ಕೆ ನೀವು ಹೀಗೆ ಮಾತನಾಡುತ್ತೀರಿ. ವಿಪಕ್ಷಗಳಿಗೂ ಶಕ್ತಿ ಇದೆ ಇಂತಹ ಮಾತಾಡಬೇಡಿ ಎಂದರು. 

ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ, ಪ್ರತೀಕಾರದ ಕಿಚ್ಚು ಹೊತ್ತಿಸಿದ ಈಶ್ವರಪ್ಪ

ಡಿಸಿ ವಿರುದ್ಧ ಗರಂ : ಶಿವಮೊಗ್ಗ ಡಿಸಿ ಶಿವಕುಮಾರ್ ಅನ್ ಲಾಯಕ್ ಯಡಿಯೂರಪ್ಪ ನವರ ಏಜೆಂಟ್ ಆಗಿದ್ದರು. ಈಗ ಸಂಸದ ರಾಘವೇಂದ್ರ ಏಜೆಂಟ್ ಆಗಿದ್ದಾರೆ.  ಜನರ ಪರವಾಗಿ ಇಲ್ಲದ ಈ ಡಿಸಿ ಫಸ್ಟ್ ಕಿತ್ತು ಹಾಕಬೇಕು.  ಜನರ ಜಮೀನು ಹುಡುಕಿ  ಬಿಎಸ್ ವೈ ಹಾಗೂ ಬಿ ವೈ ಆರ್ ಗೆ ಕೊಡುತ್ತಾ ಇದ್ದಾರೆ.  ಡಿಸಿಯವರಿಗೆ ಮುಂದೆ ನಿಮಗೆ ಹಬ್ಬ ಇದೆ . ಯಾರಿಗೆ ಎಷ್ಟು ಅಸ್ತಿ ಮಾಡಿದ್ದೀರಾ ಎಂದು ದಾಖಲೆ ಹುಡುಕುತ್ತಿದ್ದೇನೆ ಎಂದು ಗರಂ ಆದರು. 

 ಖಾಸಗಿ ಆಸ್ಪತ್ರೆಯಲ್ಲಿ ವಾಕ್ಸಿನ್ ಸಿಗುತ್ತೆ , ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವುದಿಲ್ಲ.ಇದೆಂಥಾ ವ್ಯವಸ್ಥೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ಮಾಜಿ ಸಿಎಂ ಬಂಗಾರಪ್ಪ ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು.  ರಾಜ್ಯ ಮತ್ತು ಕೇಂದ್ರ ಸರ್ಕಾರ ವಿದ್ಯುತ್ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆ  ಇದು ಸರಿಯಲ್ಲವೆಂದು ಗೋಪಾಲಕೃಷ್ಣ ಹೇಳಿದರು.

Latest Videos
Follow Us:
Download App:
  • android
  • ios