ಕಾಂಗ್ರೆಸ್‌ ನಾಯಕನ ಪುತ್ರನಿಗೆ 881 ಕೋಟಿ ಸಾಲ ಕೊಟ್ಟ ಬ್ಯಾಂಕ್‌ಗಳು: ಮತ್ತೊಬ್ಬ ಮಲ್ಯ ಎನ್ನಬೇಡಿ!

ಕಾಂಗ್ರೆಸ್‌ನ ಪ್ರಭಾವಿ ನಾಯಕರ ಪುತ್ರ ವಿವಿಧ ಬ್ಯಾಂಕ್‌ಗಳು ಹಾಗೂ ವ್ಯಕ್ತಿಗಳಿಂದ 881 ಕೋಟಿ ರೂ. ಸಾಲ ಪಡೆದುಕೊಂಡಿರುವುದು ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡ ಆಸ್ತಿ ಮೌಲ್ಯದಿಂದ ಬೆಳಕಿಗೆ ಬಂದಿದೆ.

Banks have given 881 crore loan to Congress leader son Do not said another Vijaymalya sat

ಬೆಂಗಳೂರು (ಏ.18): ಬೆಂಗಳೂರಿನ ಕ್ಷೇತ್ರವೊಂದಕ್ಕೆ ಆಸ್ತಿ ಘೋಷಣೆ ಮಾಡಿಕೊಂಡ ಕಾಂಗ್ರೆಸ್‌ನ ಪ್ರಭಾವಿ ನಾಯಕರ ಪುತ್ರ ವಿವಿಧ ಬ್ಯಾಂಕ್‌ಗಳು ಹಾಗೂ ವ್ಯಕ್ತಿಗಳಿಂದ 881 ಕೋಟಿ ರೂ. ಸಾಲ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ನೂರು ಕೋಟಿ ಆಸ್ತಿ ಹೊಂದಿದವರೇ ಇಲ್ಲದಿರುವಾಗ ಇಷ್ಟೊಂದು ಮೊತ್ತದ ಸಾಲವನ್ನು ನೋಡಿ ಜನಸಾಮಾನ್ಯರಿಗೆ ಆಶ್ಚಯ್ಯ ಆಗುವುದಂತೂ ಗ್ಯಾರಂಟಿ ಆಗಿದೆ. 

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆ ಮಾಡುವ ಎಲ್ಲ ಜನಪ್ರತಿನಿಧಿಗಳೂ ಕೂಡ ತಮ್ಮ ಆಸ್ತಿಗಳ ಮೌಲ್ಯವನ್ನು ಘೋಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಹೊರಡಿಸಿದೆ. ಅದರಂತೆ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಎಲ್ಲ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಘೋಷಣೆ ಮಾಡಿಕೊಳ್ಳುವ ಅಫಿಡವಿಟ್‌ ಅನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಈಗ ಬೆಂಗಳೂರಿನ ಗೋವಿಂದರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಅವರು 881 ಕೋಟಿ ರೂ. ಸಾಲ ಹೊಂದಿರುವುದು ಬೆಳಕಿಗೆ ಬಂದಿದೆ. 

ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ ಚುನಾವಣಾಧಿಕಾರಿ, ಶವಾಗಾರದಲ್ಲಿ ಎದ್ದುಕೂತ!

ಮತ್ತೊಬ್ಬ ವಿಜಯ್‌ ಮಲ್ಯ ಎನ್ನಬೇಡಿ: ಕಾಂಗ್ರೆಸ್‌ನ ನಾಯಕ ಎಂ.ಕೃಷ್ಣಪ್ಪ ಅವರ ಪುತ್ರ ಆಗರ್ಭ ಶ್ರೀಮಂತನಾಗಿದ್ದರೂ ಬರೋಬ್ಬರಿ 881 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕ್‌ಗಳು ಹಾಗೂ ವ್ಯಕ್ತಿಗಳಿಂದ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇವರ ಆಸ್ತಿಯ ಮೌಲ್ಯದಲ್ಲಿ ಶೇ.70 ಸಾಲದ ಹಣವನ್ನೇ ಹೊಂದಿದ್ದಾರೆ. ಈಗಾಗಲೇ ಬೆಂಗಳೂರಿನ ಮೂಲದ ಉದ್ಯಮಿ ವಿಜಯ್‌ ಮಲ್ಯ ಅವರು ವಿವಿಧ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಸಾಲವನ್ನು ಮಾಡಿ ಅದನ್ನು ತೀರಿಸದೇ ದೇಶವನ್ನು ಬಿಟ್ಟು ಲಂಡನ್‌ಗೆ ಓಡಿ ಹೋಗಿದ್ದಾರೆ. ಈ ಕುರಿತ ಪ್ರಕರಣದಲ್ಲಿ ಮಲ್ಯನ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವರನ್ನೂ ಕೂಡ ಜನಸಾಮಾನ್ಯರು ವಿಜಯ್‌ ಮಲ್ಯನಿಗೆ ಹೋಲಿಕೆ ಮಾಡಿ ನೋಡಬೇಡಿ.

ಆಗರ್ಭ ಶ್ರೀಮಂತ ಪ್ರಿಯಾಕೃಷ್ಣ: ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಶಾಸಕ (ಮಾಜಿ ಸಚಿವ) ಎಂ. ಕೃಷ್ಣಪ್ಪ (ಲೇಔಟ್‌ ಕೃಷ್ಣಪ್ಪ) ಅವರ ಪುತ್ರನಾದ ಪ್ರಿಯಾಕೃಷ್ಣ ಆಗರ್ಭ ಶ್ರೀಮಂತ ಎಂದರೂ ತಪ್ಪಾಗಲಾರದು. ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ಎಂದು ಇಂಥವರಿಗೇ ಹೇಳುತ್ತಾರೆ ಎನ್ನಿಸುತ್ತದೆ. ಇನ್ನು ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ವಿ. ಸೋಮಣ್ಣನ ವಿರುದ್ಧ ಗೋವಿಂದರಾನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪ್ರಿಯಾ ಕೃಷ್ಣ 1,024 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದರು. ಈ ವರ್ಷ 1,156 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

935 ಕೋಟಿ ರೂ. ಚರಾಸ್ತಿ: ಒಟ್ಟಾರೆ ಪ್ರಿಯಾಕೃಷ್ಣ ಆಸ್ತಿಯ ಮೌಲ್ಯ 1,156.83 ಕೋಟಿ ರೂ. ಆಗಿದ್ದು, ಅದರಲ್ಲಿ 935 ಕೋಟಿ ರೂ. ಚರಾಸ್ತಿ ಹಾಗೂ 221 ಕೊಟಿ 83 ಲಕ್ಷ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ಘೋಷಣೆ ಮಾಡಿಕೊಂಡ ಆಸ್ತಿಗಿಂತ ಈ ಬಾರಿ 120 ಕೋಟಿ ರೂ. ಹೆಚ್ಚಿನ ಆಸ್ತಿಯನ್ನು ಗಳಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅವರ ಸಾಲದ ಪ್ರಮಾಣವೂ ಹೆಚ್ಚಾಗಿದ್ದು, ಅವರ ಒಟ್ಟಾರೆ ಆಸ್ತಿ ಮೌಲ್ಯದ ಶೇ.70ಕ್ಕೂ ಅಧಿಕ ಹಣವನ್ನು ಸಾಲದ ರೂಪದಲ್ಲಿ ಪಡೆದಿರುವುದು ಬಹಿರಂಗವಾಗಿದೆ. 

ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸೊಲ್ಲ: ಸವಾಲಿಗೆ ಮುನ್ನವೇ ಹೆದರಿದರೇ ಕುಮಾರಣ್ಣ!

ತಮ್ಮನಿಂದ 55 ಕೋಟಿ ರೂ. ಸಾಲ: ಇನ್ನು ಪ್ರಿಯಾಕೃಷ್ಣ ಅವರು ಸಾಲ ಮಾಡಿರುವುದರ ಕುರಿತು ನೀಡಿರುವ ದಾಖಲೆಗಳಲ್ಲಿ ಅವರ ಸಹೋದರ ಪ್ರದೀಪ್‌ ಕೃಷ್ಣ ಅವರಿಂದ ಬರೋಬ್ಬರಿ 55 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದಾರೆ. ಅವರ ತಂದೆ ಎಂ. ಕೃಷ್ಣಪ್ಪ ಅವರಿಂದ 4 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದಾರೆ. ಜನತಾ ಸೇವಾ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ 6.30 ಕೋಟಿ ರೂ. ಹಾಗೂ ಎ.ಎನ್. ಕನ್ಸಲ್ಟಂಟ್ಸ್‌ನಿಂದ 25 ಕೋಟಿ ರೂ. ಸಾಲವನ್ನು ಮಾಡಿದ್ದಾರೆ. ಉಳಿದಂತೆ 780 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕ್‌ ಮತ್ತು ವ್ಯಕ್ತಿಗಳಿಂದ ಪಡೆಯಲಾಗಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios