ಬಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಹೊರಡಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಪ್ರಣಾಳಿಕೆಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.
ಮಂಗಳೂರು (ಮೇ 2): ಭಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಹಿಂದೂ ಮುಖಂಡರು ಕೆಂಡ ಕಾರಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಸೋಲಿಸಲು ಫೀಲ್ಡಿಗಿಳಿಯಲು ಭಜರಂಗದಳ ಕರೆ ನೀಡಿದೆ. ಇನ್ನು ಮಂಗಳೂರು ನಗರದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.
ಭಜರಂಗದಳ ನಿಷೇಧ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ವಿಚಾರವಾಗಿ, ಮಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಭಜರಂಗದಳ ಪ್ರತಿಭಟನೆ ಮಾಡಲಾಗಿದೆ.
ಮಂಗಳೂರು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಭಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಚುನಾವಣೆ ಯಲ್ಲಿನೇರ ಹೋರಾಟಕ್ಕಿಳಿಯುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮನೆ ಮನೆ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಧಮ್ ಇದ್ದರೆ ಭಜರಂಗದಳ ವನ್ನು ನಿಷೇಧ ಮಾಡಲಿ. ಭಜರಂಗದಳ ದ ಕಾರ್ಯ ಚಟುವಟಿಕೆಯನ್ನು ನಿಷೇಧದ ಅಂಕುಶ ಹಾಕಿ ನಿಲ್ಲಿಸೋಕೆ ಸಾಧ್ಯವಿಲ್ಲ. ಪ್ರತಿಭಟನೆಯಲ್ಲಿ ಭಜರಂಗದಳ ಮುಖಂಡರಿಂದ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದೆ.
ನಮ್ಮದು ಬಜರಂಗದಳ ಮನೆ: ಕಾಂಗ್ರೆಸ್‌ನವರು ಓಟ್ ಕೇಳೋಕೆ ಬಂದ್ರೆ 'ನಾಯಿ ಬಿಡ್ತೀವಿ'
ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಕರೆ ನೀಡಿದ್ದು, ಇಂದಿನಿಂದ ನೇರವಾಗಿ ಚುನಾವಣಾ ಕಣಕ್ಕೆ ಧುಮುಕಲು ಬಜರಂಗ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ಕೆಲಸ ಮಾಡಬೇಕು. ಬಿಜೆಪಿ ಮತ್ತು ಹಿಂದುತ್ವ ಬೆಂಬಲಿಸುವ ಅಭ್ಯರ್ಥಿಗಳ ಪರ ಫೀಲ್ಡಿಗಿಳಿಯಲು ಸೂಚನೆ ನೀಡಿದ್ದಾರೆ. ಇದು ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತದೆ. ಭಜರಂಗದಳದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
60 ಸಾವಿರ ಹಳ್ಳಿಗಳಲ್ಲಿ ಭಜರಂಗದಳ ಇದೆ: ರಾಜ್ಯದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಬೇಕು. ಕಾಂಗ್ರೆಸ್ ಸೋಲಿಸಲು ಎಲ್ಲರೂ ಶ್ರಮ ಹಾಕಬೇಕು. ಭಜರಂಗದಳ ರಾಷ್ಟ್ರೀಯ ಸಂಘಟನೆಯಾಗಿದೆ. ದೇಶದ 60ಸಾವಿರ ಹಳ್ಳಿಗಳಲ್ಲಿ ಭಜರಂಗದಳ ಇದೆ. ಭಜರಂಗದಳ ಎಂದೂ ರಾಷ್ಟ್ರ ವಿರೋಧಿ ಕಾರ್ಯ ಮಾಡಿಲ್ಲ. ಹಿಂದೂ ಹೆಣ್ಣು, ಗೋವು ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ಪಿಎಫ್ ಐ ಮತೀಯ ಸಂಘಟನೆ,ರಾಷ್ಟ್ರ ದ್ರೋಹಿ ಸಂಘಟನೆ. ಭಜರಂಗದಳ ವನ್ನು ಪಿಎಫ್ಐ ಜೊತೆ ಹೋಲಿಸೋದು ಸರಿಯಲ್ಲ. ಹಿಂದೂ ಧರ್ಮ ಕಾರ್ಯದಲ್ಲಿ ಭಜರಂಗದಳ ಹೋರಾಡಿದೆ. ಕಾಂಗ್ರೆಸ್ ನಲ್ಲಿರುವ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಭಜರಂಗದಳವನ್ನು ನಿಷೇಧ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್ ನಲ್ಲಿರುವ ಹಿಂದೂಗಳು ಅರಿಯಬೇಕು ಎಂದರು.
ಹನುಮ ಭಕ್ತ ಜನರೇ ಕಾಂಗ್ರೆಸ್‌ಗೆ ದಾರಿ ತೋರಲಿದ್ದಾರೆ: ಈ ಕುರಿತು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ತನ್ನ ಅಂತಿಮ ಯಾತ್ರೆಯ ಶವಪೆಟ್ಟಿಗೆಯ ಮೊಳೆ ಹೊಡೆಯುವ ಕೆಲಸ ಕಾರ್ಯ ಮಾಡುತ್ತಿದೆ. ಈ ಬಾರಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಇದೆ. ಕಾಂಗ್ರೆಸ್ ಅಧಿಕಾರ ಬಂದ್ರೆ ತಾಕತ್ತಿದ್ದರೆ ಬಜರಂಗಳ ನಿಷೇಧ ಮಾಡಿ. ಕಾಂಗ್ರೆಸ್ ಅವಸಾನದತ್ತ ಹೋಗುತ್ತಿದೆ. ಸಿದ್ದರಾಮಯ್ಯ, ಡಿಕೆಶಿಯವರ ಮುತ್ತಾತ ನೆಹರೂ, ಅಜ್ಜಿ ಇಂದಿರಾ ಗಾಂಧಿಯವರು ಆರ್ ಎಸ್ ಎಸ್ ನಿಷೇಧ ಮಾಡಲು ಹೊರಟಿದ್ದರು. ಆಗ ಇಡೀ ದೇಶದಲ್ಲಿ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳು ದೇಶಾದ್ಯಂತ ಬಲವಾಗಿ ಬೆಳೆಯಲು ಕಾರಣವಾಯಿತು. ಜನರ ಭಾವನೆಗಳನ್ನು ಪ್ರಶ್ನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎಸ್ ಡಿಪಿಐಯಂತಹ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡಿ, ಚುನಾವಣೆಗಳು ಬರುವ ವೇಳೆ ಸಂಧಾನ ಮಾಡುತ್ತಾರೆ. ಎಸ್ ಡಿಪಿಐ, ಪಿಎಫ್ಐ ಜನರು ಜೈಲಿನೊಳಗಿದ್ದಾಗ ಅವರನ್ನು ಬಿಡುಗಡೆ ಮಾಡುವ ನೀವು ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದೀರಿ. ಹನುಮಭಕ್ತ ಜನ ಈ ಬಾರಿ ನಿಮಗೆ ದಾರಿ ತೋರಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಷೇಧದ ಭರವಸೆ, ದೇಶದ ಬಲ 'ಭಜರಂಗದಳ' ಟ್ವಿಟರ್‌ನಲ್ಲಿ ಟ್ರೆಂಡ್!
ಪಿಎಫ್‌ಐ ಜೊತೆಗೆ ಬಜರಂಗದಳ ತುಲನೆ ಸೂಕ್ತವಲ್ಲ:
ಭಯೋತ್ಪಾದನೆ, ಹಿಂಸೆ ಹಾಗೂ ದೇಶದ್ರೋಹದ ಚಟುವಟಿಕೆ ನಡೆಸುವ ಪಿ.ಎಫ್.ಐ ಜೊತೆ ಧರ್ಮ, ಪರಂಪರೆ ಹಾಗೂ ಇತಿಹಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಭಜರಂಗದಳವನ್ನು ತುಲನೆ ಮಾಡುವುದು ದೊಡ್ಡ ಅಪರಾಧ. ಆದರೇ ಕಾಂಗ್ರೆಸ್ ಇಂತಹ ತಪ್ಪು ಮಾಡಿ, ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ. ಹನುಮ ಭಕ್ತರು ಸಿಡಿದು ನಿಂತರೇ, ಈಗಾಗಲೇ ಅವಸಾನದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಈ ದೇಶದಿಂದ ಕಿತ್ತೆಸೆಯುತ್ತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ದಕ್ಷಿಣದ ಅಂಜನಾದ್ರಿಯಲ್ಲಿ ಶ್ರೀ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯವಾಗಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
