ಬಾಗಲಕೋಟೆ, (ಜ.16): ಕೇಂದ್ರ ಗೃಹ ಸಚಿವ ಅಮಿತ್ ಶಾ ಅಮಿತ್ ಶಾ ಗೋ ಬ್ಯಾಕ್ ಚಳವಳಿಯನ್ನು ರೈತರು ವಾಪ್ ಪಡೆದುಕೊಂಡಿದ್ದಾರೆ.

ನಾಳೆ (ಜ.16)ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಸಚಿವ ಮುರುಗೇಶ ನಿರಾಣಿ ಒಡೆತನದ ಕೇದಾರನಾಥ ಶುಗರ್ ಫ್ಯಾಕ್ಟರಿ ಉದ್ಘಾಟನೆಗೆ  ಅಮಿತ್ ಶಾ ಆಮಿಸುತ್ತಿದ್ದಾರೆ. ಈ ವೇಳೆ ಕಬ್ಬು ಬಾಕಿ ಹಣ ನೀಡದಿರುವುದರಿಂದ ಅಮಿತ್ ಶಾ ಆಗಮನದ ವೇಳೆ ಪ್ರತಿಭಟನೆಗೆ ರೈತರು ಮುಂದಾಗಿದ್ದರು.

ಈ ಬಗ್ಗೆ ಇಂದು (ಶನಿವಾರ) ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ನೂತನ ಸಚಿವ ನಿರಾಣಿ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಂಧಾನ ಸಭೆ ಯಶಸ್ವಿಯಾಗಿದ್ದು, ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.

 ಫೆಬ್ರವರಿ ಮೊದಲ ವಾರ ಸಿಎಂ ಸೇರಿದಂತೆ ರಾಜ್ಯ ಕಬ್ಬು ಆಯುಕ್ತರೊಂದಿಗೆ ಮಾತುಕತೆ ನಡೆಸಿ ಬಾಕಿ ಹಣ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ನಿರಾಣಿ ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ ಸಚಿವ ನಿರಾಣಿ ಅವರ ಮಾತಿನಂತೆ ಅಮಿತ್ ಶಾ ವಿರುದ್ಧದ ಪ್ರತಿಭಟನೆಯನ್ನು ಕಬ್ಬು ಬೆಳೆಗಾರ ರೈತರು ವಾಪಸ್ ಪಡೆದುಕೊಂಡಿದ್ದಾರೆ.