ಬಿಜೆಪಿ ದುರಾಡಳಿತಕ್ಕೆ ಬೇಸತ್ತ ಜನತೆ: ಎಚ್‌.ವೈ.ಮೇಟಿ

ನೀವೆಲ್ಲ ಮತ ನೀಡಿ ಗೆಲ್ಲಿಸಿ ಗ್ರಾಮದ ಅಭಿವೃದ್ಧಿಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಬಿಜೆಪಿ ದುರಾಡಳಿತದಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅ​ಧಿಕಾರಕ್ಕೆ ಬರಲಿದೆ ಎಂದ ಎಚ್‌.ವೈ.ಮೇಟಿ. 

Bagalkot Congress Candidate Slams BJP Government grg

ಬಾಗಲಕೋಟೆ(ಏ.23):  ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಬಡವರು, ಮಧ್ಯಮ ವರ್ಗದ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಎಚ್‌.ವೈ.ಮೇಟಿ ಹೇಳಿದರು.

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ತಿಮ್ಮಾಪುರ, ಹಿರೇಮಾಗಿ, ರಾಂಪೂರ, ಆಲೂರು, ಹಂಟರಗಲ್ಲ, ಮಾಗನೂರು ಗ್ರಾಮಗಳ ಯುವಕರು, ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವೆಲ್ಲ ಮತ ನೀಡಿ ಗೆಲ್ಲಿಸಿ ಗ್ರಾಮದ ಅಭಿವೃದ್ಧಿಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಬಿಜೆಪಿ ದುರಾಡಳಿತದಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅ​ಧಿಕಾರಕ್ಕೆ ಬರಲಿದೆ ಎಂದರು.

ಸುಳ್ಳೇ ಕಾಂಗ್ರೆಸ್‌ನ ಬಂಡವಾಳ: ಶ್ರೀಕಾಂತ ಕುಲಕರ್ಣಿ

ಕಾಂಗ್ರೆಸ್‌ ಸೇರ್ಪಡೆ:

ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರ ಸಮ್ಮುಖದಲ್ಲಿ ಹಿರೇಮಾಗಿ ಬಾಬುಗೌಡ ಮೇದಿನಾಪುರ, ರಾಮಣ್ಣ ಆಸಂಗಿ, ಬಸು ಮಾಚಾ, ಪ್ರವೀಣ ಆಸಂಗಿ, ನರಿಯಪ್ಪ ಜೂಲಕಟ್ಟಿ, ಸಂಗಣ್ಣ ಗೌಡರ, ಗೌಡಪ್ಪ ಪಾಟೀಲ, ನಿಂಗಪ್ಪ ಬಾವಿಕಟ್ಟಿ, ಹನಮಂತ, ದೇವರಾಮಪ್ಪ ಭಜಂತ್ರಿ ಸೇರಿದಂತೆ 20ಕ್ಕೂ ಹೆಚ್ಚು ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಬಿಜೆಪಿ ತೊರೆದ ಯುವಕರು:

ನಿವೃತ್ತ ಶಿಕ್ಷಕ ಆರ್‌.ಎಸ್‌.ಪೂಜಾರಿ ಅವರ ಸಮ್ಮುಖದಲ್ಲಿ ನಿಂಗಪ್ಪ ಕಾಬಂಡರೆ, ಮಾಜಿ ತಾಪಂ ಸದಸ್ಯ ಹೊಳಿಯಪ್ಪ ಗೌಡರ, ಅಲ್ಲಾಸಾಬ ಓಲೇಕಾರ, ಪ್ರಮೋದ ಕಮ್ಮಾರ, ಮುತ್ತಪ್ಪ ಗಂಜೀಹಾಳ, ದುರ್ಗಪ್ಪ ಮಾದರ, ಚಂದ್ರಶೇಖರ ಐಯೊಳೆ, ಅಬ್ದುಲ್‌ ಹೊನ್ನಾಳ, ಸುರೇಶ ತಳವಾರ, ಶೇಖಪ್ಪ ಹಡಪದ, ರಾಜು ಇಟಿಗಿ ಸೇರಿದಂತೆ ಇತರರು ಕಾಂಗ್ರೆಸ್‌ ಸೇರಿದರು.

ಜೆಡಿಎಸ್‌ ತೊರೆದು ಯುವಕರು:

ಜೆಟ್ಟೆಪ್ಪ ಆಚನೂರ, ಯಲ್ಲಪ್ಪ ಮೇಟಿ, ಶರಣಪ್ಪ ಮೇಟಿ, ಸಂಗಪ್ಪ ಚಲವಾದಿ, ಭೀಮಪ್ಪ ಚಲವಾದಿ ಕಾಂಗ್ರೆಸ್‌ ಸೇರ್ಪಡೆಯಾದರು. ಆಲೂರು ಗ್ರಾಮದ ಯುವಕರಾದ ನಿಂಗಪ್ಪ ಅಕಳವಾಡಿ, ಹನಮಂತ ಮೇಟಿ, ಭೀಮಸಿ ಗೌಡರ, ಮಹಾದೇವಪ್ಪ ಮಾದರ, ಮಾನಪ್ಪ ಮಾದರ, ಶೇಕಪ್ಪ ಮಾದೇವಪ್ಪ ಭಜಂತ್ರಿ, ಶಿವಪುತ್ರಪ್ಪ ಭಜಂತ್ರಿ, ಕುಶಲ್‌ ಭಜಂತ್ರಿ, ಲವಕುಮಾರ ಭಜಂತ್ರಿ, ಕೆಂಚಪ್ಪ ಭಜಂತ್ರಿ, ಬಸವರಾಜ ಭಜಂತ್ರಿ ಮುಂತಾದವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು.

ಲಿಂಗಾಯತರನ್ನು ಸಿಎಂ ಆಗಿ ಘೋಷಿಸುವ ತಾಕತ್ತು ಕೈಗಿದೆಯೇ?: ಮುರುಗೇಶ ನಿರಾಣಿ

ಮಾಜಿ ಜಿಪಂ ಅಧ್ಯಕ್ಷ ಬಸವರಾಜ ಮೇಟಿ, ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಗ್ರಾಮೀಣ ಘಟಕದ ಅಧ್ಯಕ್ಷ ಎಸ್‌ ಎನ್‌ ರಾಂಪೂರ, ಯುವ ಮುಖಂಡ ಉಮೇಶ ಮೇಟಿ, ಸಂಗಮೇಶ ಹಾವಳಗಿ, ಪ್ರಭು ಮಾಗನೂರ, ಶಶಿಕಾಂತ ಪೂಜಾರ, ಮಲ್ಲಪ್ಪ ದ್ಯಾಮಣ್ಣವರ, ಗುರುನಾಥ ಗೌಡರ, ರಮೇಶ ಅಕಳವಾಡ, ನರಿಯಪ್ಪ ದ್ಯಾಮಣ್ಣವರ, ರಾಯಪ್ಪ ಮೇಟಿ, ಲಕ್ಷ್ಮಣ ವಾಲೀಕಾರ, ಯಲ್ಲಪ್ಪ ವಾಲೀಕಾರ ಇತರರು ಇದ್ದರು.

ತಿಮಾಪುರ ಗ್ರಾಮದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವೈ.ಮೇಟಿ, ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರ ಸಮ್ಮುಖದಲ್ಲಿ ಹಿರೇಮಾಗಿ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios