'ಮಾಜಿ ಸಿಎಂ ಸಿದ್ದರಾಮಯ್ಯಗೆ ಬಾದಾಮಿಯೇ ಸುರಕ್ಷಿತ'
ಬಾದಾಮಿ ಮತಕ್ಷೇತ್ರದ ಅಭವೃದ್ದಿಗೆ ಮೂರುವರೆ ಸಾವಿರ ಕೋಟಿ ಅನುದಾನ ತಂದು ನಾನಾ ಯೋಜನೆಗಳನ್ನು ಕೈಕೊಂಡಿದ್ದು ಜನರ ಮನೆಮಾತಾಗಿದೆ, ಹಿಂದೆಂದೂ ಆಗದ ಅಭಿವೃದ್ಧಿ ಕಾಮಗಾರಿಗಳಾಗಿವೆ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಸಿದ್ರಾಮಯ್ಯ ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ: ಬನ್ನೂರ
ಕೆರೂರ(ಜ.14): ಬಾದಾಮಿಯಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದರೆ ಮಾಜಿ ಸಿಎಂ ಬಾದಾಮಿಯ ಶಾಸಕ ಸಿದ್ರಾಮಯ್ಯ ಅನಿವಾರ್ಯ ಇಲ್ಲದಿದ್ದರೆ ಕಾಂಗ್ರೆಸ್ ನೆಲಕಚ್ಚುವ ಸಾಧ್ಯತೆಗಳೆ ಹೆಚ್ಚೆಂಬ ರಾಜಕೀಯ ವಿಶ್ಲೇಶಕರ ಅಭಿಪ್ರಾಯ ಕೇಳಿಬರುತ್ತಿದೆ ಸಿದ್ರಾಮಯ್ಯನವರಿಗಾದರೂ ಬಾದಾಮಿಯೇ ಸೇಫ್. ಇಲ್ಲಿ ಅವರ ಗೆಲುವಿಗೆ ಶ್ರಮಿಸುವ ಕಾರ್ಯಕರ್ತರ ಪಡೆ ದೊಡ್ಡದಾಗಿದೆ. ಬಹುಸಂಖ್ಯಾಕ ಮತದಾರರು ಅವರ ಉಮೇದುವಾರಿಕೆ ಬಯಸಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಸನ್ನದ್ದರಾಗಿದ್ದಾರೆಂದು ಕೆಪಿಸಿಸಿ ಪದವೀಧರ ಹಾಗೂ ಶಿಕ್ಷಕರ ಕೋಷ್ಟದ ಮಾಜಿ ಪ್ರಧಾನ ಕಾರ್ಯದರ್ಶಿ ಎನ್.ಬಿ.ಬನ್ನೂರ ಹೇಳಿದರು. ಅವರು ಶುಕ್ರವಾರ ಕೆರೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಾದಾಮಿ ಮತಕ್ಷೇತ್ರದ ಅಭವೃದ್ದಿಗೆ ಮೂರುವರೆ ಸಾವಿರ ಕೋಟಿ ಅನುದಾನ ತಂದು ನಾನಾ ಯೋಜನೆಗಳನ್ನು ಕೈಕೊಂಡಿದ್ದು ಜನರ ಮನೆಮಾತಾಗಿದೆ, ಹಿಂದೆಂದೂ ಆಗದ ಅಭಿವೃದ್ಧಿ ಕಾಮಗಾರಿಗಳಾಗಿವೆ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಸಿದ್ರಾಮಯ್ಯ ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗ ತಮಗೆ ರಾಜಕೀಯ ಮರುಜನ್ಮ ನೀಡಿದ ಬಾದಾಮಿ ತಾಲೂಕನ್ನು ಮತದಾರರ ಕಾರ್ಯಕರ್ತರ ಧುರೀಣರ ಸಮ್ಮತಿ ಪಡೆಯದೇ 2023 ರ ಚುನಾವಣೆಗೆ ಕೋಲಾರ ಬಯಸುವದು ಸರಿಯೇ? ಎಂಬ ಚರ್ಚೆ ತಾಲೂಕಿನಾದ್ಯಂತ ನಡೆಯುತ್ತಿದೆ ಬಾದಾಮಿಯಿಂದಲೇ ಸ್ಪರ್ದಿಸಬೇಕೆಂಬ ಅನೇಕರ ಕೂಗು ಅವರಿಗೆ ತಲುಪಿದೆ ಅಷ್ಟೇ ಅಲ್ಲ ಧರಣಿ ನಡೆಸಲು ಸಹ ಸಿದ್ದರಾಗಿದ್ದಾರೆ.
ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್.ಈಶ್ವರಪ್ಪ
ಕೋಲಾರ ಸೇಫ್ ಅಲ್ಲ;
ಕೋಲಾರದಲ್ಲಿ ನಾಯಕರ ದೊಡ್ಡ ಗುಂಪು ಸಿದ್ರಾಮಯ್ಯನವರ ಬೆಂಬಲಕ್ಕಿದೆ ಅಂದ ಮಾತ್ರಕ್ಕೆ ಅದು ಸೇಫ ಅಲ್ಲ, ಅಲ್ಲಿಯ ಜನರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು ಸುಧೀರ್ಘ ಸಮಯ ಬೇಕು ಆದರೆ ಬಾದಾಮಿಯಲ್ಲಿ ಹಾಗಿಲ್ಲ ಇಲ್ಲಿ ಎಲ್ಲರೂ ಅವರ ಹತ್ತಿರದವರೇ ಆಗಿದ್ದಾರೆ ಕೂಗಿ ಕೂಗಿ ಕರೆಯುತ್ತಿದ್ದಾರೆ. ನಾನು ಈ ವಿಷಯವನ್ನು ಸ್ವತಃ ಸಿದ್ರಾಮಯ್ಯನವರೊಂದಿಗೆ ಚರ್ಚಿಸಿದ್ದೇನೆ.ಕೊನೆ ಘಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿ ಬಾದಾಮಿಗೆ ಬರುತ್ತಾರೆಂಬ ವಿಶ್ವಾಸ ನಾಗರಿಕರಲ್ಲಿದೆ ನಾವೆಲ್ಲ ಅವರ ಗೆಲುವಿಗೆ ಶತಾಯ ಗತಾಯ ಪ್ರಯತ್ನಿಸಿ ಗೆಲ್ಲಿಸುತ್ತೇವೆ ಬಾದಾಮಿಯಲ್ಲಿ ಸಿದ್ರಾಮಯ್ಯ ಇದ್ದರೆ ಮಾತ್ರ ಕಾಂಗ್ರೆಸ್ ಗೆಲವು ಇಲ್ಲದಿದ್ದರೆ ಕಾಂಗ್ರೆಸ್ ಗೆಲವು ಅಸಾಧ್ಯವೆಂದು ಕಟ್ಟೆಮಾತುಗಳು ಧೃಡಪಡಿಸಿವೆ. ಮಾಜಿ ಸಿಎಂ ಸಿದ್ರಾಮಯ್ಯ ಬಾದಾಮಿಯಿಂದಲೇ ಸ್ಪರ್ದಿಸಬೇಕು ಅವರ ಗೆಲುವು ಸುಲಭವೆಂದರು.