ಸುಪ್ರೀಂಕೋರ್ಟ್ ಹೇಳಿದ ಜಾಗದಲ್ಲಿ 'ರಾಮಮಂದಿರ' ಕಟ್ಟಿಲ್ಲ: ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ
ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ಕಟ್ಟಿಲ್ಲ. ರಾಮಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ನಿರ್ಮೂಲನೆಯೇ ಆಗಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ (ಫೆ.18): ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ಕಟ್ಟಿಲ್ಲ. ರಾಮಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ನಿರ್ಮೂಲನೆಯೇ ಆಗಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕಾಗಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆಯಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ನಿರ್ಮಾಣ ಮಾಡಲಾಗಿಲ್ಲ. ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸಿದಂತ ಅವರು, ಕೇವಲ ರಾಮ, ರಹಿಮ, ಅಪ್ಘಾನಿಸ್ತಾನ, ಪಾಕಿಸ್ತಾನ ಹೆಸರು ಮುಂದೆ ಇಟ್ಟುಕೊಂಡು ಮತ ಕೇಳುವುದಷ್ಟೇ ಮಾಡಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹೊತ್ತಿನಲ್ಲೇ ರಾಮಮಂದಿರ ವಿಚಾರವನ್ನು ಇಟ್ಟುಕೊಂಡು ಮತ ಕೇಳೋದಕ್ಕಷ್ಟೇ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ ಎಂಬುದಾಗಿ ಹೇಳಿದರು.
ವಿಶ್ವಕ್ಕೆ ಸಮಾನತೆ ಸಾರಿದ ಬಸವೇಶ್ವರ: ಶಾಸಕ ಬಸವರಾಜ ರಾಯರಡ್ಡಿ
ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ನೀಡದಿದ್ದರೆ ಕ್ರಮ: ಹೊರಗುತ್ತಿಗೆ ನೌಕರರಿಗೆ ನಿಗದಿತ ಅವಧಿಯೊಳಗೆ ವೇತನ ಮತ್ತು ಸೌಕರ್ಯಗಳನ್ನು ಒದಗಿಸದಿದ್ದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಎಚ್ಚರಿಸಿದ್ದಾರೆ. ಸದಸ್ಯ ಎಂ.ನಾಗರಾಜು ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನೇಮಕಾತಿ ಆದೇಶ, ಗುರುತಿನ ಚೀಟಿ ಮತ್ತು ನಿಗದಿತ ವೇತನ ಪಾವತಿಸುವುದು ಕಡ್ಡಾಯ.
ನೌಕರರಿಗೆ ಪ್ರತಿ ತಿಂಗಳ 10ನೇ ದಿನ ಮುಕ್ತಾಯದ ಮೊದಲು ವೇತನ ಪಾವತಿಸಲು ಏಜೆನ್ಸಿಗಳು ಅಥವಾ ಮಾಲೀಕರು ಬಾಧ್ಯಸ್ಥರಾಗುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ವೇತನದ ಜೊತೆಗೆ ಪರಿಹಾರವನ್ನು ನೌಕರರಿಗೆ ಪಾವತಿಸಬೇಕು. ಗುತ್ತಿಗೆ ನೌಕರರ ಪ್ರಾವಿಡೆಂಡ್ ಫಂಡ್‌ಗೆ (ಪಿಎಫ್) ಸಂಬಂಧಿಸಿದಂತೆ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆಯಡಿ ಮುಖ್ಯ ಉದ್ಯೋಗದಾತನು ಎಲ್ಲಾ ಗುತ್ತಿಗೆ ನೌಕರರಿಗೆ ವಂತಿಗೆಯನ್ನು ನೀಡಲು ಬಾಧ್ಯಸ್ಥನಾಗುತ್ತಾನೆ ಎಂದು ತಿಳಿಸಿದ್ದಾರೆ.
ಕೊಟ್ಟ ಮಾತಿನಂತೆ ನಡೆಯುವ ಕಾಂಗ್ರೆಸ್ ಸರ್ಕಾರ: ಶಾಸಕ ಎಸ್.ಎನ್.ನಾರಾಯಣಸ್ವಾಮಿ
ಆದರೆ, ಕೆಲವು ಏಜೆನ್ಸಿಗಳು ಅಥವಾ ಮಾಲೀಕರು ಈ ರೀತಿಯ ಶಾಸನಾತ್ಮಕ ಸೌಲಭ್ಯಗಳನ್ನು ಹೊರಗುತ್ತಿಗೆ ನೌಕರರಿಗೆ ನೀಡದಿರುವುದು ಹೊರಗುತ್ತಿಗೆ ನೌಕರರು ಸೌಲಭ್ಯಗಳಿಂದ ವಂಚಿತರಾಗಲು ಕಾರಣ. ಈ ಸಂಬಂಧ ಇಲಾಖೆಯಲ್ಲಿ ದೂರುಗಳು ದಾಖಲಾಗುತ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ. ಬಾಧಿತ ಕಾರ್ಮಿಕರು ಅಥವಾ ನೌಕರರು ಕನಿಷ್ಠ ವೇತನ, ವೇತನ ಪಾವತಿ ಹಾಗೂ ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಉಚಿತ ಕಾರ್ಮಿಕ ಸಹಾಯವಾಣಿ 155214ಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ, ಮಾಹಿತಿ ಪಡೆದು ಪರಿಹಾರ ಪಡೆಯಬಹುದು ಎಂದು ಹೇಳಿದ್ದಾರೆ.