Asianet Suvarna News Asianet Suvarna News

ಕೇಜ್ರಿವಾಲ್ ಕುರ್ಚೀಲಿ ಕೂರದೆ ಆತಿಶಿ ಅಧಿಕಾರ..!

ರಾಮಾಯಣದಲ್ಲಿ ಭರತ ತನ್ನ ಸಹೋದರ ಶ್ರೀ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ಮಾಡಿದಂತೆ ನಾನು ಮುಂದಿನ 4 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಘನತೆಗೆ ಉದಾಹರಣೆಯಾಗಿರುವ ಕೇಜ್ರಿವಾಲ್ ಅವರ ಸ್ಥಾನ ಖಾಲಿಯೇ ಇರಲಿದೆ. ಅವರು ಪುನಃ ಗೆದ್ದ ಬಳಿಕ ಆ ಸ್ಥಾನ ಭರ್ತಿ ಆಗಲಿದೆ ಎಂದ ಮುಖ್ಯಮಂತ್ರಿ ಆತಿಶಿ ಮಾರ್ಲೇನಾ

Atishi Marlena taken charge as the Chief Minister of Delhi grg
Author
First Published Sep 24, 2024, 6:58 AM IST | Last Updated Sep 24, 2024, 6:58 AM IST

ನವದೆಹಲಿ(ಸೆ.24): ಅರವಿಂದ್ ಕೇಜ್ರಿವಾಲ್ ರಾಜೀನಾಮೆಯ ನಂತರ ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಆತಿಶಿ ಮಾರ್ಲೇನಾ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಕೇಜ್ರಿವಾಲ್ ಕೂರುತ್ತಿದ್ದ ಸಿಎಂ ಕುರ್ಚಿಯಲ್ಲಿ ಕೂರಲು ನಿರಾಕರಿಸಿ ಅದರ ಪಕ್ಕ ಇನ್ನೊಂದು ಕುರ್ಚಿ ಹಾಕಿಕೊಂಡು ಆಸೀನರಾಗಿದ್ದಾರೆ. 

ಈ ಬಗ್ಗೆ ಮಾತನಾಡಿದ ಆತಿಶಿ, 'ರಾಮಾಯಣದಲ್ಲಿ ಭರತ ತನ್ನ ಸಹೋದರ ಶ್ರೀ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ಮಾಡಿದಂತೆ ನಾನು ಮುಂದಿನ 4 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಘನತೆಗೆ ಉದಾಹರಣೆಯಾಗಿರುವ ಕೇಜ್ರಿವಾಲ್ ಅವರ ಸ್ಥಾನ ಖಾಲಿಯೇ ಇರಲಿದೆ. ಅವರು ಪುನಃ ಗೆದ್ದ ಬಳಿಕ ಆ ಸ್ಥಾನ ಭರ್ತಿ ಆಗಲಿದೆ' ಎಂದರು.

ದೇಶದ ರಾಜಕೀಯದ ಇತಿಹಾಸದಲ್ಲಿ ಅತಿ ಹೆಚ್ಚು ಸಮಯ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಮಹಿಳೆಯರು

ಬಿಜೆಪಿ ಕಿಡಿ: 

ಈ ನಡೆ ಟೀಕಿಸಿರುವ ದೆಹಲಿ ಬಿಜೆಪಿಯ ಮುಖ್ಯಸ್ಥ ವೀರೇಂದ್ರ ಸಚದೇವ, 'ನೂತನ ಮುಖ್ಯಮಂತ್ರಿ ಆತಿಶಿ ಮಾಡಿದ್ದು ಸರಿಯಲ್ಲ. ಇದು ಸಾಂವಿಧಾನಿಕ ನಿಯಮಗಳು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ. ಅವರು ದೆಹಲಿ ಜನತೆಯ ಮನಸ್ಸನ್ನು ನೋಯಿಸಿದ್ದಾರೆ. ಕೇಜ್ರಿವಾಲ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರ ನಡೆಸುತ್ತಾರೆಯೇ ಎಂಬ ಬಗ್ಗೆ ಉತ್ತರಿಸಬೇಕು' ಎಂದಿದ್ದಾರೆ.

Latest Videos
Follow Us:
Download App:
  • android
  • ios