Asianet Suvarna News Asianet Suvarna News

ಚಿಲ್ಲರೆ ಮಾತುಗಳಿಗೆ ಬೆಲೆ ಕೊಡಲ್ಲ: ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ

ಯಾವುದೇ ಚಿಲ್ಲರೆ ಮಾತುಗಳ ಬಗ್ಗೆ ಬೆಲೆ ಕೊಡಲ್ಲ, ಗಮನಾನೂ ಹರಿಸಲ್ಲ. ಇಂತಹ ಪ್ರತಿಭಟನೆಗಳನ್ನು‌ ಬಹಳ ನಾನು ನೋಡಿದ್ದೇನೆ. ಯಾವ ಅಧಿಕಾರಿಯೂ ಯಾರ ಗೊಂಬೆನೂ ಅಲ್ಲ. ಅಂಬೇಡ್ಕರ್‌ರವರು ಕೊಟ್ಟ ಸಂವಿಧಾನದಡಿ ಕೆಲಸ ಮಾಡಬೇಕಾಗುತ್ತೆ. ಯಾರೋ ಎಲ್ಲಿಂದಲೋ ಬಂದು ಬೇರೆ ತಾಲೂಕಿಂದ ಬಂದು ನಟನೆ‌ ಮಾಡೋದು ಕಂಡಿದ್ದೇನೆ: ಲಕ್ಷ್ಮಣ ಸವದಿ

Athani Congress MLA Laxman Savadi Slams Ramesh Jarkiholi grg
Author
First Published Sep 17, 2023, 9:52 AM IST

ಚಿಕ್ಕೋಡಿ(ಸೆ.17): ಅಥಣಿ ಕ್ಷೇತ್ರಕ್ಕೆ ಬಂದು ಗುಡುಗಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

ಅಥಣಿಯಿಂದಲೇ ಪ್ರತಿಭಟನೆ ಶುರು ಮಾಡ್ತೀವಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಯಾವುದೇ ಚಿಲ್ಲರೆ ಮಾತುಗಳ ಬಗ್ಗೆ ಬೆಲೆ ಕೊಡಲ್ಲ, ಗಮನಾನೂ ಹರಿಸಲ್ಲ. ಇಂತಹ ಪ್ರತಿಭಟನೆಗಳನ್ನು‌ ಬಹಳ ನಾನು ನೋಡಿದ್ದೇನೆ. ಯಾವ ಅಧಿಕಾರಿಯೂ ಯಾರ ಗೊಂಬೆನೂ ಅಲ್ಲ. ಅಂಬೇಡ್ಕರ್‌ರವರು ಕೊಟ್ಟ ಸಂವಿಧಾನದಡಿ ಕೆಲಸ ಮಾಡಬೇಕಾಗುತ್ತೆ. ಯಾರೋ ಎಲ್ಲಿಂದಲೋ ಬಂದು ಬೇರೆ ತಾಲೂಕಿಂದ ಬಂದು ನಟನೆ‌ ಮಾಡೋದು ಕಂಡಿದ್ದೇನೆ ಅಂತ ಹೇಳಿದ್ದಾರೆ. 

ಸವದಿಯವರೆ ಎಲ್ಲವೂ ಸಿಗುತ್ತೆ ತಾಳ್ಮೆಯಿಂದಿರಿ: ಡಿಸಿಎಂ ಡಿ.ಕೆ.ಶಿವಕುಮಾರ

ಇತ್ತೀಚೆಗೆ ಅಥಣಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ‌ ಅವರು ಲಕ್ಷ್ಮಣ ಸವದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಸರ್ಕಾರಿ ಅಧಿಕಾರಿಗಳ ವಿರುದ್ಧವೂ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದರು. ಅಥಣಿಯಿಂದಲೇ ರಾಜ್ಯ ಸರ್ಕಾರ ವಿರುದ್ಧ ಹೋರಾಟ ಶುರು ಮಾಡೋದಾಗಿ ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದರು. 

Follow Us:
Download App:
  • android
  • ios