Asianet Suvarna News Asianet Suvarna News

Assembly election: ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಪರೇಡ್‌

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ತಮ್ಮ ನಡೆ ಚುರುಕುಗೊಳಿಸಿದ್ದಾರೆ. ಆಕಾಂಕ್ಷಿಗಳೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಲು ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮುಂದೆ ಶುಕ್ರವಾರ ಚಿತ್ರದುರ್ಗದಲ್ಲಿ ಆಕಾಂಕ್ಷಿಗಳ ಬೆಂಬಲಿಗರು ಪರೇಡ್‌ ನಡೆಸಿದರು. ಪ್ಲೇಕಾರ್ಡ್‌ ಹಿಡಿದು ತಮ್ಮ ನಾಯಕನ ಪರ ಘೋಷಣೆ ಕೂಗಿದರು.

assembly election Candidates parade in Congress for ticket at chitradurga rav
Author
First Published Dec 31, 2022, 7:03 AM IST

ಚಿತ್ರದುರ್ಗ (ಡಿ.31) : ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ತಮ್ಮ ನಡೆ ಚುರುಕುಗೊಳಿಸಿದ್ದಾರೆ. ಆಕಾಂಕ್ಷಿಗಳೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆಸಲು ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮುಂದೆ ಶುಕ್ರವಾರ ಚಿತ್ರದುರ್ಗದಲ್ಲಿ ಆಕಾಂಕ್ಷಿಗಳ ಬೆಂಬಲಿಗರು ಪರೇಡ್‌ ನಡೆಸಿದರು. ಪ್ಲೇಕಾರ್ಡ್‌ ಹಿಡಿದು ತಮ್ಮ ನಾಯಕನ ಪರ ಘೋಷಣೆ ಕೂಗಿದರು.

ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಜಿಲ್ಲಾ ಕಾಂಗ್ರೆಸ್‌(Congress)ಕಚೇರಿ ಮುಂಭಾಗ ಲಭ್ಯವಾಗುವ ಎಲ್ಲಜಾಗಗಳಲ್ಲಿ ಕಟೌಟ್‌, ಫ್ಲೆಕ್ಸ್‌ ಗಳ ಹಾಕಿ ಟಿಕೆಟ್‌ಗಾಗಿ ಸಲೀಂ ಅಹಮ(Saleem ahmed)ದ್‌ ಮುಂದೆ ಭ ರ್ಜರಿ ಪ್ರದರ್ಶನಕ್ಕೆ ಇಳಿದರೆ, ವೀರೇಂದ್ರ ಪಪ್ಪಿ ಬೆಂಬಲಿಗರು ಪ್ಲೇ ಕಾರ್ಡ್‌ ಹಿಡಿದು ಘೋಷಣೆ ಕೂಗಿದ್ದು, ವಿಶೇಷವಾಗಿತ್ತು. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಂದ ಟಿಕೆಟ್‌ ಬಯಸಿ ಒಟ್ಟು 57 ಮಂದಿ ಅರ್ಜಿ ಸಲ್ಲಿಸಿದ್ದು ಎಲ್ಲರೂ ತಮಗಿಷ್ಟವಾದ ಶೈಲಿಯಲ್ಲಿ ತಾಲೀಮು ನಡೆಸಿದರು.

Chitradurga News: ಭದ್ರಾ ಕಾಲುವೆ ಅಡ್ಡಗಾಲಿಗೆ ನಾರಾಯಣಸ್ವಾಮಿ ಆಕ್ರೋಶ

ಸ್ಪರ್ಧಾಕಾಂಕ್ಷಿಗಳ ಜೊತೆ ಚುನಾವಣಾ ಸಮಿತಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹಮದ್‌, ಆರು ತಾಲೂಕಿನಿಂದ 57 ಆಕಾಂಕ್ಷಿಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ಕ್ಷೇತ್ರದ ಆಕಾಂಕ್ಷಿಗಳು ಹಾಗೂ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಟಿಕೆಟ್‌ ಕೇಳುತ್ತಿದ್ದಾರೆ. ಆದರೆ ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಯಾರನ್ನೆ ಅಭ್ಯರ್ಥಿಯನ್ನಾಗಿ ಮಾಡಲಿ ಅವರ ಗೆಲುವಿಗೆ ಶ್ರಮಿಸುವುದಾಗಿ ಪ್ರತಿಯೊಬ್ಬರೂ ಹೇಳಿದ್ದಾರೆ ಎಂದರು.

ರಾಜ್ಯದ ಹಿತಕ್ಕಾಗಿ ವಿಧಾನಸಭೆ ಚುನಾವಣೆ(Assembly election)ಯಲ್ಲಿ ಕಾಂಗ್ರೆಸ್‌ ಗೆಲುವು ಮುಖ್ಯ. 224 ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ 1350 ಅರ್ಜಿಗಳು ಬಂದಿದೆ. ಎಲ್ಲಾ ಜಿಲ್ಲೆಗಳಿಗೂ ಹೋಗಿ ಮುಖಂಡರುಗಳನ್ನು ಭೇಟಿ ಮಾಡಿದ್ದೇವೆ. ಎಐಸಿಸಿ ಸಭೆ ಕೂಡ ನಡೆದಿದೆ. 150 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿ ಎಂದು ತಿಳಿಸಿದರು.

ಬಿಜೆಪಿ ಕ್ಷಮೆಯಾತ್ರೆ ನಡೆಸಲಿ:

ಕಳಸಾ ಬಂಡೂರಿ ಯೋಜನೆ(kalasa-bandoori project)ಗೆ ಡಿಪಿಆರ್‌ ಮಾಡಲು ಡಬ್ಬಲ್‌ ಇಂಜಿನ್‌ ಸರ್ಕಾರ(Double engin govt)ಕ್ಕೆ ಮೂರು ವರ್ಷಗಳು ಬೇಕಾಯಿತಾ ಎಂದು ಪ್ರಶ್ನಿಸಿದ ಸಲೀಂ ಅಹಮದ್‌ ಪರಿಸರ, ಅರಣ್ಯ ಇಲಾಖೆಯ ಕ್ಲಿಯರೆನ್ಸ್‌ ಸಿಕ್ಕಿದೆಯಾ? ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದನ್ನು ವಿರೋಧಿಸಿ ಜ.2 ರಂದು ಹೋರಾಟ ಮಾಡುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ನಲವತ್ತು ಪರ್ಸೆಂಟ್‌ ಕಮಿಷನ್‌ ಪಡೆಯವನ ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ಜನಸಂಕಲ್ಪ ಯಾತ್ರೆ ಹೊರಟಿದೆ. ರಾಜ್ಯದ ಜನರ ಕ್ಷಮೆಯಾತ್ರೆ ನಡೆಸಲಿ ಎಂದು ಆಗ್ರಹಿಸಿದರು. ಚಿಲುಮೆ ಸಂಸ್ಥೆ ಮೂಲಕ ಹುಬ್ಬಳ್ಳಿ, ಬಿಜಾಪುರ, ಬೆಂಗಳೂರಿನಲ್ಲಿ ಓಟುಗಳನ್ನು ಕದಿಯುವ ಕೆಲಸ ಮಾಡುತ್ತಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದೆæ ಎಂದರು.

ಜ.11 ರಂದು ಬೆಳಗಾವಿಯಿಂದ ಕಾಂಗ್ರೆಸ್‌ ಬಸ್‌ಯಾತ್ರೆ ಹೊರಟು ಇಪ್ಪತ್ತು ಜಿಲ್ಲೆಗಳಲ್ಲಿ ಸಂಚರಿಸಲಿದೆ. 30 ರ ನಂತರ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಎರಡು ತಂಡಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರ ಸರ್ಕಾರ ನೀಡುವುದು ನಮ್ಮ ಗುರಿ. ಜ.15ರೊಳಗೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 150 ಸೀಟುಗಳನ್ನು ಅಂತಿಮಗೊಳಿಸಲಾಗುವುದೆಂದು ಹೇಳಿದರು.

Chitradurga: ಮುರುಘಾ ಶ್ರೀ ವಿರುದ್ದ ಪಿತೂರಿ ಪ್ರಕರಣ, ಮಾಜಿ ಶಾಸಕ ಬಸವರಾಜನ್ ಜೈಲಿನಿಂದ ಬಿಡುಗಡೆ

ಎಐಸಿಸಿ ಕಾರ್ಯದರ್ಶಿ ಮಯೂರ್‌ ಜೈಕುಮಾರ್‌, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ, ಪ್ರಧಾನ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಮುರಳಿಧರ ಹಾಲಪ್ಪ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಡಿ.ಸುಧಾಕರ್‌, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಜಯಸಿಂಹ, ಬಾಲರಾಜ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್‌, ಡಿ.ಎನ್‌.ಮೈಲಾರಪ್ಪ ಹಾಜರಿದ್ದರು.

Follow Us:
Download App:
  • android
  • ios