ಬೆಂಗಳೂರಿನ ಅಭಿವೃದ್ಧಿ ಯೋಜನಾಬದ್ಧವಾಗಿ ಆಗಿಲ್ಲ. ಕಳೆದ 9 ವರ್ಷದಿಂದ ಬಿಜೆಪಿ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ 75 ಸಾವಿರ ಕೋಟಿ ರೂ. ಅನುದಾನ ನೀಡಿದ ವಿವರವನ್ನು ಅಮಿತ್‌ ಶಾ ಹಂಚಿಕೊಂಡರು.

ಬೆಂಗಳೂರು (ಏ.30): ಬೆಂಗಳೂರಿನಲ್ಲಿ ಯಾವ ತರಹದ ಮೂಲಸೌಕರ್ಯಗಳ ಅಭಿವೃದ್ಧಿ ಆಗಬೇಕಿತ್ತೋ ಅದು ಆಗಿಲ್ಲ. ಇದಕ್ಕೆ ಹಿಂದಿನವರ ರಾಜಕಾರಣ ಕಾರಣವಾಗಿದೆ. ಕೇಂದ್ರ ಸರ್ಕಾರ 9 ಹಾಗೂ ರಾಜ್ಯ ಸರ್ಕಾರ 4 ವರ್ಷ ಆಡಳಿತ ಮಾಡಿದೆ. ಈ 9 ವರ್ಷದ ಸಮಯದಲ್ಲಿ ಬೆಂಗಳೂರಿಗೆ ಏನೆಲ್ಲಾ ಅನುದಾನ ಕೊಡಲಾಗಿದೆ ಅಂತ ನಿಮಗೆ ಹೇಳುತ್ತೇನೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫುಲ್‌ ಲಿಸ್ಟ್‌ ಕೊಟ್ಟಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ಅಜಿತ್‌ ಹನುಮಕ್ಕನವರ್‌ ಅವರು ಕೇಂದ್ರ ಸಚಿವ ಅಮಿತ್‌ ಶಾ ಅವರೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಮಾಡಿದ ವಿಶೇಷ ಸಂದರ್ಶನದಲ್ಲಿ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದ್ರೂ ಸಾಕು ತೊಂದರೆಯಾಗುತ್ತೆ.. 28 ಕ್ಷೇತ್ರಗಳಿದ್ದರೂ ಮೂಲಸೌಕರ್ಯಗಳ ಕೊರತೆಯಿದೆ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಮಿತ್‌ ಶಾ ಅವರು, ತುಂಬಾ ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಹಾಗೂ ಕಳೆದ 4 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದೆ. ಈ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳು ಹಾಗೂ ಅನುದಾನವನ್ನು ಕೊಟ್ಟಿದ್ದೇವೆ ಎಂದು ದೊಡ್ಡ ಪಟ್ಟಿಯೇ ಇದೆ ಎಂದರು.

ಹಿಂದೂ ಹುಲಿ ಯತ್ನಾಳ್‌, ಸೋಲಿಸಲು ಒಂದಾದ ಕೈ-ದಳದ ಮುಸ್ಲಿಂ ಅಭ್ಯರ್ಥಿಗಳು

2024ಕ್ಕೆ 100 ಕಿ.ಮೀ ಮೆಟ್ರೋ ಸಂಚಾರ: 
​ಬೆಂಗಳೂರು ಮೆಟ್ರೋಗೆ 13 ಸಾವಿರ ಕೋಟಿ ನೀಡಲಾಗಿದೆ. ಮೋದಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿನಲ್ಲಿ ಕೇವಲ 7 ಕಿಲೋ ಮೀಟರ್ ಮೆಟ್ರೋ ಇತ್ತು. ಅದು ಈಗ 56 ಕಿಲೋ ಮೀಟರ್ನಷ್ಟು ಆಗಿದೆ. 2024ರೊಳಗೆ ಇದು 100 ಕಿಲೋ ಮೀಟರ್ ಆಗಲಿದೆ. 100 ಕಿಲೋ ಮೀಟರ್ ಮೆಟ್ರೋದಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಅನ್ನೋದನ್ನ ನೀವು ಒಪ್ಪಿಕೊಳ್ಳಬೇಕು.​ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ 15,800 ಕೋಟಿ ನೀಡಿದೆ. ಕಳೆದ 40 ವರ್ಷಗಳಿಂದ ಕೆಲಸ ಆಗಿರಲಿಲ್ಲ.. ಈಗ ಕೆಲಸ ಪ್ರಾರಂಭವಾಗಿದೆ. ಭೂಮಿ ಸ್ವಾಧೀನ ಪ್ರಕ್ರಿಯೆಯೂ ನಡೆಯುತ್ತಿದೆ. ಬೆಂಗಳೂರಿಗೆ ಸ್ಯಾಟಲೈಟ್ ರಿಂಗ್ ರೋಡ್ ನಿರ್ಮಾಣ ಮಾಡಲಾಗ್ತಿದೆ, ಇದಕ್ಕೆ 15 ಸಾವಿರ ಕೋಟಿ ಖರ್ಚಾಗಲಿದೆ.. ಎಲ್ಲವನ್ನೂ ಕೇಂದ್ರ ಸರ್ಕಾರವೇ ಭರಿಸಲಿದೆ. ಹತ್ತಿರ ಹತ್ತಿರ 42 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಸಣ್ಣ ಸಣ್ಣ ಅಭಿವೃದ್ಧಿಗೆ 9,600 ಕೋಟಿ ಅನುದಾನ: ​ಬೆಂಗಳೂರಿನ ಇತರೆ ಅಭಿವೃದ್ಧಿ ಕಾರ್ಯಕ್ಕೆ 9,600 ಕೋಟಿ ನೀಡಲಾಗಿದೆ.. ಪ್ಲೈಓವರ್ .. ಅಂಡರ್ ಪಾಸ್.. ರೈಲ್ವೆ ಓವರ್ ಬ್ರಿಡ್ಜ್ ಈ ರೀತಿ ಕೆಲಸಗಳಿಗೆ.. ಅಮೃತ್ ನಗರೋತ್ಥಾನ ಯೋಜನೆಯಡಿ ಮತ್ತೆ 6 ಸಾವಿರ ಕೋಟಿ ನೀಡಲಾಗಿದೆ. 35 ಯೋಜನೆಗಳು ಆಗಲೇ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ​ಕಾವೇರಿ ಜಲ ಆಕೃತಿ ಯೋಜನೆಯಡಿ ಬೆಂಗಳೂರು ಕುಡಿಯುವ ನೀರಿಗಾಗಿ 5,500 ಕೋಟಿ ಹಣ ನೀಡಲಾಗಿದೆ. ಭಯ ಮುಕ್ತ ಬೆಂಗಳೂರು ಯೋಜನೆಗಾಗಿ 1,800 ಕೋಟಿ ಹಣವನ್ನ ಕೇಂದ್ರ ಸರ್ಕಾರ ನೀಡಿದೆ. ಇನ್ನುಳಿದ 60 ಪರ್ಸೆಂಟ್ ಹಣವನ್ನ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ನೀಡಿದೆ.. ಒಟ್ಟು 5 ಸಾವಿರ ಕೋಟಿ ಯೋಜನೆ​ ರೂಪಿಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್, ದಳಪತಿಗಳ ಭದ್ರಕೋಟೆಯಲ್ಲಿ ಗುಡುಗಿದ ಮೋದಿ

ಪ್ಲ್ಯಾನಿಂಗ್‌ ಮಾಡಿ 77 ಸಾವಿರ ಕೋಟಿ ರೂ. ಕೆಲಸ ಮಾಡಿದ್ದೇವೆ: ಬೆಂಗಳೂರು ಮಂಡ್ಯ ಹೊಸ ಹೈವೇಗಾಗಿ 1,900 ಕೋಟಿ ನೀಡಿದ್ದೇವೆ. ಬೆಂಗಳೂರು ಏರ್ಪೋರ್ಟ್ 2ನೇ ಟರ್ಮಿನಲ್ ನಿರ್ಮಾಣ ಮಾಡಿದ್ದೇವೆ ಇದಕ್ಕೆ 15,000 ಕೋಟಿ ನೀಡಿದ್ದೇವೆ. 9 ವರ್ಷದಲ್ಲಿ ಬೆಂಗಳೂರಿಗಾಗಿ ಸುಮಾರು 75 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಈಗಾಗಲೇ ಬಹುಪಾಲು ಹಣ ಖರ್ಚಾಗಿದೆ​. ಹಿಂದಿನ ಸರ್ಕಾರಗಳ ಕಾರಣದಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಆದ್ರೆ ನಮಗೆ ಸಿಕ್ಕ ಸಮಯದಲ್ಲಿ ಅಂದ್ರೆ ಕೇಂದ್ರ ಸರ್ಕಾರದ 9 ವರ್ಷ ಹಾಗೂ ರಾಜ್ಯ ಸರ್ಕಾರದ 4 ವರ್ಷದಲ್ಲಿ ಕೆಲಸ ಮಾಡಿದ್ದೇವೆ.. ಪ್ಲ್ಯಾನಿಂಗ್ ಮಾಡಿ.. ಹಣ ಕೊಟ್ಟು, ಕೆಲಸವನ್ನು ಮಾಡಿದ್ದೇವೆ ಎಂದು ಅಮಿತ್‌ ಶಾ ತಿಳಿಸಿದರು.