Asianet Suvarna News Asianet Suvarna News

ಕಾಂಗ್ರೆಸ್‌ ಲೀಡರ್ ಭೇಟಿ: ಆಪರೇಷನ್ ಹಸ್ತ ಬಹಿರಂಗಪಡಿಸಿದ ಜೆಡಿಎಸ್ ನಾಯಕ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಆಹ್ವಾನಿಸಿರುವುದು ನಿಜವೆಂದು ಜೆಡಿಎಸ್ ನಾಯಕ ಬಹಿರಂಗಪಡಿಸಿದ್ದಾರೆ.

Ashok Poojary Gives Clarification about KPCC Working President Satish Jarkiholi Met rbj
Author
Bengaluru, First Published Feb 17, 2021, 9:05 PM IST

ಬೆಳಗಾವಿ, (ಫೆ.17):  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮನೆಗೆ ಭೇಟಿ ನೀಡಿರುವ ವಿಚಾರದ ಬಗ್ಗೆ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಸ್ಪಷ್ಟನೆ ಕೊಟ್ಟಿದ್ದಾರೆ.

ಈ  ಬಗ್ಗೆ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ, ನಿನ್ನೆ (ಫೆಬ್ರವರಿ 16) ನಮ್ಮ ಮನೆಗೆ ಸತೀಶ್ ಜಾರಕಿಹೊಳಿ ಬಂದಿದ್ದರು. ಅಧಿಕೃತವಾಗಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ ಭೇಟಿಗೆ ಬಂದಿದ್ದಾಗಿ ಹೇಳಿದ್ದರು. ಎಲ್ಲರೂ ಸೇರಿ ಹೊಸ ಅಧ್ಯಾಯ ಆರಂಭಿಸೋಣ ಎಂದೂ ತಿಳಿಸಿದರು ಎಂದು ಸ್ಪಷ್ಟಪಡಿಸಿದರು.

ಖುದ್ದು ಭೇಟಿ ಮಾಡಿ ಜೆಡಿಎಸ್ ನಾಯಕನನ್ನು ಕಾಂಗ್ರೆಸ್‌ಗೆ ಆಹ್ವಾಸಿದ ಕಾರ್ಯಾಧ್ಯಕ್ಷ

ಕಾಂಗ್ರೆಸ್ ಸೇರಲು ಸತೀಶ್ ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ. ಈ ಬಗ್ಗೆ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮಾತಾಡುತ್ತೇನೆ. ಅವರ ಜತೆ ಚರ್ಚಿಸಿ ನನ್ನ ನಡೆ ತಿಳಿಸುವುದಾಗಿ ಹೇಳಿದ್ದೇನೆ. ಅಲ್ಲದೇ ಸದ್ಯ ಗೋಕಾಕ್ ವ್ಯವಸ್ಥೆ ವಿರುದ್ಧ ಹೋರಾಟ ನಡೆದಿದೆ. ನಿಮ್ಮ ವಿಚಾರಧಾರೆ ನಮ್ಮ ವಿಚಾರಧಾರೆ ಒಂದೇ ಇದೆ ಎಂದರು. 

ಎಲ್ಲರೂ ಸೇರಿ ಹೊಸ ಅಧ್ಯಾಯ ಆರಂಭ ಮಾಡೋಣ ಎಂದಿದ್ದಾರೆ. ಆದರೆ ನನ್ಮ ರಾಜಕೀಯ ಗಾಡ್ ಫಾದರ್ ಎಚ್‌.ಡಿ.ದೇವೇಗೌಡ. ಹೀಗಾಗಿ ಅವರ ಬಳಿ ಕೇಳಿ ಅದಕ್ಕೆ ಪೂರಕವಾಗಿ ನನ್ನ ನಡೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದೇನೆ ಎಂಬುದಾಗಿ ತಿಳಿಸಿದರು.

ಬೆಳಗಾವಿ ಲೋಕಸಭೆ ಎಲೆಕ್ಷನ್ ಟಿಕೆಟ್ ಆಫರ್ ಏನೂ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಅಧಿಕೃತವಾಗಿ ಇದ್ದೇನೆ. ಈ ವೇಳೆ ಕಾಂಗ್ರೆಸ್ ಪಕ್ಷ ನನಗೆ ಎಂಪಿ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ ಎಂದರು.

Follow Us:
Download App:
  • android
  • ios