ನವದೆಹಲಿ/ಬೆಂಗಳೂರು, (ನ.13): ಕರ್ನಾಟಕ ಬಿಜೆಪಿ ಉಸ್ತುವಾರಿಯನ್ನ ಬದಲಾವಣೆ ಮಾಡಲಾಗಿದ್ದು, ಅರುಣ್ ಸಿಂಗ್ ಅವರನ್ನ ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಉಪ ಉಪ ಉಸ್ತುವಾರಿಯಾಗಿ ಡಿ.ಕೆ.ಅರುಣಾ ಅವರನ್ನ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.

'ವಿಜಯೇಂದ್ರಗೆ ಅಧ್ಯಕ್ಷ, ಇಲ್ಲ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಸಿಗಬಹುದು' 

 ಈ ಮೊದಲು ಮುರಳೀಧರ್ ರಾವ್ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿದ್ದರು. ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗ ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ರಾಜ್ಯಗಳ ಬಿಜೆಪಿ ಉಸ್ತುವಾರಿ ಹೊಣೆ ನೀಡಲಾಗಿದೆ.

 ಉತ್ತರ ಪ್ರದೇಶಕ್ಕೆ ರಾಧಾ ಮೋಹನ್ ಸಿಂಗ್​​​ ಅವರನ್ನ ಉಸ್ತುವಾರಿಯನ್ನಾಗಿಸಿದ್ರೆ ಬಿಹಾರ, ಗುಜರಾತ್ ರಾಜ್ಯಗಳಿಗೆ ಭೂಪೇಂದ್ರ ಯಾದವ್ ಅವರನ್ನ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.