* ಜೆಡಿಎಸ್​ ಸದಸ್ಯರಿಗೆ ಬಿಜೆಪಿ ಹಣದ ಆಮೀಷ * ಅರಸೀಕೆರೆ ನಗರಸಭೆ ಜೆಡಿಎಸ್ ಸದಸ್ಯರಿಗೆ ಹಣದ ಆಮೀಷ* ಹಣದ ಬಂಡಲ್ ಜತೆ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ

ಹಾಸನ, (ಜೂನ್.25): ಅರಸೀಕೆರೆ ನಗರಸಭೆ ಜೆಡಿಎಸ್​ ಸದಸ್ಯರಿಗೆ ಬಿಜೆಪಿ ಹಣದ ಆಮೀಷವೊಡ್ಡಿದೆ ಎಂದು ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಬಂಡಲ್ ಹಣ ಇಟ್ಟು ಗಂಭೀರ ಆರೋಪ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜೆಡಿಎಸ್​ ಹೆಚ್​ಡಿ ರೇವಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ನಗರಸಭೆ ಸದಸ್ಯರೊಬ್ಬರ ಮನೆಯಲ್ಲಿ 10 ಲಕ್ಷ ರೂಪಾಯಿ ಇಟ್ಟು ಹೋಗಿದ್ದಾರೆ ಎನ್ನಲಾಗಿರುವ ಹಣವನ್ನ ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು.

ಮಾಜಿ ಸಚಿವ ಎಚ್‌ಡಿ ರೇವಣ್ಣ ವಿರುದ್ಧ ದೂರು ದಾಖಲು

ಬಳಿಕ ಮಾತನಾಡಿದ ರೇವಣ್ಣ, ಅರಸಿಕೆರೆ ಪುರಸಭೆಯಲ್ಲಿ ಮೆಜಾರಿಟಿ ಪಡೆದುಕೊಳ್ಳಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಹಣದ ಆಮಿಷವೊಡ್ಡಿದ್ದಾರೆ. ಬಿಜೆಪಿ‌ ಪಕ್ಷಕ್ಕೆ ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗರು ಹಣವನ್ನ ನೀಡಿ ಹೋಗಿದ್ದಾರೆ ಎಂದು ಆರೋಪಿಸಿದರು.

 ಎರಡನೇ ವಾರ್ಡ್​ನ ನಗರಸಭೆ ಸದಸ್ಯೆ ಕಲೈರಸಿಗೆ 10 ಲಕ್ಷ ಹಣ ಸಂತೋಷ್ ನೀಡಿದ್ದಾರೆ. ಈಗ 10 ಲಕ್ಷ ಕೊಟ್ಟಿದ್ದಾರೆ, ಬಂದ ನಂತರ 15 ಲಕ್ಷ ಕೊಡುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ. ಇದರ ಹಿಂದೆ ಸಿಎಂ ಕೈವಾಡವೂ ಇರಬಹುದು. ಹಾಗಾಗಿ ಇದರ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿದರು.