Asianet Suvarna News Asianet Suvarna News

ವಿಧಾನಸಭೆ: ಮನೆ ವಿಚಾರಕ್ಕೆ ಸಿದ್ದು-ಸೋಮಣ್ಣ ನಡುವೆ ವಾಗ್ವಾದ

  • ಮನೆ ವಿಚಾರಕ್ಕೆ ಸಿದ್ದು-ಸೋಮಣ್ಣ ನಡುವೆ ವಾಗ್ವಾದ
  • -ಒಂದೂ ಹೊಸ ಮನೆ ಮಂಜೂರಾಗಿಲ್ಲ: ಸಿದ್ದು
  • ಕೆಲಸ ಮಾಡಿಲ್ಲ ಎಂದರೆ ಸದನಕ್ಕೆ ಕಾಲಿಡಲ್ಲ: ಸೋಮಣ್ಣ

 

Argument between Siddu and Somanna over the house issue in assembly rav
Author
First Published Feb 15, 2023, 4:52 AM IST | Last Updated Feb 15, 2023, 4:52 AM IST

ವಿಧಾನಸಭೆ (ಫೆ.15) ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಲ್ಲಿ ನಿರ್ಮಿಸಿದ್ದು ಕೇವಲ 4.93 ಲಕ್ಷ ಮನೆಗಳು ಮಾತ್ರ. ಹೊಸದಾಗಿ ಒಂದೂ ಮನೆ ಮಂಜೂರು ಮಾಡಿಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ವಸತಿ ಸಚಿವ ವಿ.ಸೋಮಣ್ಣ ‘ವಸತಿ ಯೋಜನಾ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ನನ್ನ ಕೆಲಸ ತೋರಿಸುತ್ತೇನೆ ಬನ್ನಿ. ನಾನು ಕೆಲಸ ಮಾಡಿಲ್ಲ ಎಂದಾದರೆ ಮತ್ತೆ ಈ ಸದನಕ್ಕೆ ಕಾಲಿಡುವುದಿಲ್ಲ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ ಘಟನೆ ಸದನದಲ್ಲಿ ಮಂಗಳವಾರ ನಡೆಯಿತು.

Amit shah interview :ಕುಟುಂಬ ರಾಜಕೀಯಕ್ಕೆ ಕರ್ನಾಟಕ ಗುಡ್‌ಬೈ: ಅಮಿತ್ ಶಾ

ಇದರಿಂದಾಗಿ ಈ ಇಬ್ಬರೂ ನಾಯಕರ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆಯಿತು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಕುರಿತ ಭಾಷಣದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಈ ವಿಷಯ ಪ್ರಸ್ತಾಪಿಸಿ, ನಮ್ಮ (ಕಾಂಗ್ರೆಸ್‌) ಸರ್ಕಾರದ 5 ವರ್ಷಗಳ ಆಡಳಿತದಲ್ಲಿ ನಿರಾಶ್ರಿತರಿಗೆ ವಿವಿಧ ವಸತಿ ಯೋಜನೆಗಳಡಿ 14.54 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ನಾಲ್ಕು ವರ್ಷದಲ್ಲಿ ಕೇವಲ 4.93 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದೆ. ಅವೂ ಕೂಡ ಬಿಜೆಪಿ ಸರ್ಕಾರ ಹೊಸದಾಗಿ ಮಂಜೂರು ಮಾಡಿ ನಿರ್ಮಿಸಿದ ಮನೆಗಳಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳು ಎಂದು ಆರೋಪಿಸಿದರು.

ಇದಕ್ಕೆ, ತೀಕ್ಷ$್ಣವಾಗಿಯೇ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ(V Somanna), ನಿಮ್ಮ ಸರ್ಕಾರದಲ್ಲಿ ಬರೀ ಮನೆಗಳನ್ನು ಮಂಜೂರು ಮಾಡಿ ಹಣ ನೀಡದೆ ಹೋಗಿದ್ದಿರಿ. ಕಾಂಗ್ರೆಸ್‌ ಅವಧಿಯಲ್ಲಿ ಮಂಜೂರಾತಿ ನೀಡಿದ್ದ 7 ಲಕ್ಷ ಮನೆಗಳಿಗೆ ನಮ್ಮ ಸರ್ಕಾರದಲ್ಲಿ ಹಣ ನೀಡಿದ್ದೇವೆ. ಇದರ ನಡುವೆ ಕೋವಿಡ್‌, ನೆರೆ ಹಾವಳಿಯಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮೊದಲು ಅವುಗಳನ್ನು ಪೂರ್ಣಗೊಳಿಸದೆ ಮತ್ತಷ್ಟುಮನೆಗಳನ್ನು ಮಂಜೂರು ಮಾಡಿಕೊಂಡು ಕುಳಿತಿದ್ದರೆ ಹಣ ಎಲ್ಲಿಂದ ತರಬೇಕಿತ್ತು. ರಾಜ್ಯಪಾಲರ ಭಾಷಣದಲ್ಲಿ ನಾವು ಸಂಪೂರ್ಣ ನಿರ್ಮಾಣ ಮಾಡಿರುವ ಮನೆಗಳನ್ನಷ್ಟೇ ತಂದಿದ್ದೇವೆ. ಇವುಗಳ ಜತೆಗೆ ಇನ್ನೂ 10 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನಾವು ಮಾಡಿದ ಕೆಲಸಗಳನ್ನು ತೋರಿಸುತ್ತೇವೆ. ಯೋಜನಾ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಆಗಿರುವ ಕಾಮಗಾರಿಗಳ ಗುಣಮಟ್ಟವನ್ನು ತೋರಿಸುತ್ತೇವೆ ಬನ್ನಿ. ಕೆಲಸ ಮಾಡಿಲ್ಲ ಎಂದಾದರೆ ಮತ್ತೆ ಈ ಸದನಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

Siddaramaiah : ಸದನದಲ್ಲಿ ಮೊದಲಸಲ 40% ಕಮಿಷನ್ ಕದನ

ಇದಕ್ಕೆ, ಬಿಜೆಪಿ ಸರ್ಕಾರ ಬಂದ ಮೇಲೆ ಹೊಸ ಮನೆಗಳನ್ನು ಮಂಜೂರು ಮಾಡಿದ್ದರೆ ಸಂಬಂಧಿಸಿದ ಆದೇಶಗಳನ್ನು ಕೊಡಲಿ ಎಂದು ಪ್ರತಿಪಕ್ಷದ ನಾಯಕ ಪಂಥಾಹ್ವಾನ ನೀಡಿದರು. ವಸತಿ ಸಚಿವರು ಈ ಮಾತನ್ನು ಒಪ್ಪಲಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾದ 9.77 ಲಕ್ಷ ಮನೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲಿ ಮಂಜೂರಾದಂಥವು ಎಂದು ಸಚಿವರು ಸಮರ್ಥನೆ ಮಾಡಿಕೊಂಡರು. ಆದರೆ ಪಟ್ಟು ಬಿಡದ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ 14 ಲಕ್ಷ ಮನೆಗಳನ್ನು ಕಟ್ಟಲಾಗಿತ್ತು ಎಂದು ಹೇಳಿದರು.

Latest Videos
Follow Us:
Download App:
  • android
  • ios