Asianet Suvarna News Asianet Suvarna News

ನಾನು ಖಂಡ್ರೆ ಹೇಳುವ ಬದಲು ಖರ್ಗೆ ಹೇಳಿದ್ದೇನೆ: ಅವಹೇಳನಕಾರಿ ಹೇಳಿಕೆಗೆ ಆರಗ ಪ್ರತಿಕ್ರಿಯೆ!

ಹಿರಿಯರು, ಮುತ್ಸದ್ದಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. 

araga jnanendra clarification about his remarkable statement about mallikarjun kharge gvd
Author
First Published Aug 4, 2023, 11:02 PM IST

ತೀರ್ಥಹಳ್ಳಿ (ಆ.04): ಹಿರಿಯರು, ಮುತ್ಸದ್ದಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶುಕ್ರವಾರ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಬಗ್ಗೆ ಹೇಳುವ ಸಂದರ್ಭದಲ್ಲಿ ಬಾಯಿ ತಪ್ಪಿನಿಂದ ಖರ್ಗೆ ಅವರ ಹೆಸರು ಹೇಳಿದ್ದೇನೆಯೇ ಹೊರತು, ಖರ್ಗೆ ಕುರಿತಂತೆ ಅವಹೇಳನದ ಮಾತುಗಳನ್ನೇ ಆಡಿಲ್ಲಾ. 

ಕಾಂಗ್ರೆಸ್‌ ಮುಂಖಂಡರು ರಾಜಕಾರಣದ ಸಲುವಾಗಿ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದರು. ಡಾ.ಕಸ್ತೂರಿ ರಂಗನ್‌ ವರದಿಯ ಹಿನ್ನೆಲೆಯಲ್ಲಿ ಮಲೆನಾಡಿನ ಜನತೆಯ ಸಮಸ್ಯೆ ಕುರಿತಂತೆ ಆ ಸಭೆಯಲ್ಲಿ ಮಾತನಾಡಿದ್ದೇನೆ. ಅರಣ್ಯ ಸಚಿವರು ವರದಿ ಕುರಿತಂತೆ ಪರವಾಗಿ ಮಾತನಾಡಿದ ಕಾರಣ ಅವರಿಗೆ ಮಲೆನಾಡಿನ ಜನರ ಮತ್ತು ಅರಣ್ಯ ಸಮಸ್ಯೆಯ ಅರಿವಿಲ್ಲ ಎಂದು ಹೇಳಿದ್ದೇನೆ ಹೊರತು, ಯಾರ ಜಾತಿಯ ನಿಂದನೆಯನ್ನೂ ಮಾಡಿಲ್ಲ. ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು ದೂರನ್ನು ದಾಖಲಿಸಲಾಗಿದೆ. ಇದನ್ನು ಎದುರಿಸುವ ಶಕ್ತಿಯೂ ನನಗಿದೆ ಎಂದು ಹೇಳಿದರು.

ಎಂ.ಟಿ.ಆರ್ ಹೋಟೆಲ್ ದೋಸೆ ಸವಿದ ಸಿಎಂ ಸಿದ್ದರಾಮಯ್ಯ!

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದು, ಮುಂಗಡ ಪತ್ರದಲ್ಲಿ ದಲಿತರಿಗೆ ಮೀಸಲಿದ್ದ ಅರ್ಧದಷ್ಟುಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಆದಕಾರಣ ಸಾರಿಗೆ ವಿದ್ಯುತ್‌ ಮುಂತಾದ ಇಲಾಖೆಗಳ ನೌಕರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.

ಚುನಾವಣೆಯಲ್ಲಿ ಆಗಿರುವ ಸೋಲನ್ನು ಜೀರ್ಣಿಸಿಕೊಳ್ಳಲಾಗದೇ ಜಿದ್ದು ತೀರಿಸಲು ನನ್ನ ಚಾರಿತ್ರ್ಯಹರಣ ಮಾಡಲಾಗುತ್ತಿದೆ. ನಾನು ಜೀವಂತ ಇರುವುದೇ ಇವರಿಗೆ ಸಹಿಸಲಾಗುತ್ತಿಲ್ಲ ಎಂದೂ ಯಾರ ಹೆಸರನ್ನೂ ಉಲ್ಲೇಕಿಸದೇ ಶಾಸಕ ಆರಗ ಜ್ಞಾನೇಂದ್ರ ಮಾರ್ಮಿಕವಾಗಿ ಅಸ​ಮಾ​ಧಾನ ಹೊರ​ಹಾ​ಕಿ​ದರು. ಬಿಜೆಪಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್‌, ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಆರ್‌.ಮದನ್‌, ಕೆ.ಶ್ರೀನಿವಾಸ್‌, ಸಾಲೆಕೊಪ್ಪ ರಾಮಚಂದ್ರ, ನವೀನ್‌ ಹೆದ್ದೂರು, ಕವಿರಾಜ ಬೇಗುವಳ್ಳಿ, ಚಂದವಳ್ಳಿ ಸೋಮಶೇಕರ್‌, ಸಂದೇಶ್‌ ಜವಳಿ, ರಕ್ಷಿತ್‌ ಮೇಗರವಳ್ಳಿ, ಕುಕ್ಕೆ ಪ್ರಶಾಂತ್‌ ಇದ್ದರು.

ಉತ್ತರ ಕನ್ನಡ: ಜಿಲ್ಲಾ ಸರ್ಜನ್‌ಗೆ ಕ್ಲಾಸ್ ತೆಗೆದುಕೊಂಡ ಸಚಿವ ಮಂಕಾಳು ವೈದ್ಯ

‘ರಾಜ್ಯ ಸರ್ಕಾರ ಸುಪ್ರೀಂನಲ್ಲಿ ಸಮರ್ಥ ವಕೀ​ಲರ ನೇಮಿ​ಸ​ಲಿ​’: ಕಸ್ತೂರಿರಂಗನ್‌ ವರದಿ ಕುರಿತಂತೆ ಅರಣ್ಯ ಸಚಿವರು ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಏಕವ್ಯಕ್ತಿ ಅಭಿಪ್ರಾಯದ ಈ ವರದಿ ಕುರಿತಂತೆ ರಾಜ್ಯ ಸರ್ಕಾರ ಸರಿಯಾದ ವರದಿ ನೀಡದ ಕಾರಣ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ಇದನ್ನು ಕೈಗೆತ್ತುಕೊಂಡಿದೆ. ಯಥಾವತ್ತಾಗಿ ವರದಿ ಜಾರಿಯಾದರೆ ರಾಜ್ಯ 22 ಸಾವಿರ ಕಿ.ಮೀ.ನಷ್ಟುಪ್ರದೇಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂಥ ಸೂಕ್ಷ್ಮ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತದ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ. ರಾಜ್ಯ ಸರ್ಕಾರ ಈಗಲಾದರೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪಶ್ಚಿಮಘಟ್ಟದ ಪರವಾಗಿ ವಾದಿಸಲು ಸಮರ್ಥ ವಕೀಲರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios