ಹೈದರಾಬಾದ್, (ಜ.30): ಪೊಲೀಸರ ಮೇಲೆ ಹಲ್ಲೆ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರದ ಬಿಜೆಪಿ ಶಾಸಕರೊಬ್ಬರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಗೋಷಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಎಂಬವರಿಗೆ ಅಲ್ಲಿನ ವಿಶೇಷ ಸೆಷನ್ಸ್ ನ್ಯಾಯಾಧೀಶರು ಒಂದು ವರ್ಷ ಜೈಲು ಶಿಕ್ಷೆ ಹಾಗೂ 5,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ, ಜನ ಸೇವೆಗೆ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಅಂದ್ರು...!

2015 ಡಿಸೆಂಬರ್  12ರಂದು ಒಸ್ಮಾನಿಯಾ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಬೀಫ್ ಫೆಸ್ಟಿವಲ್ ಆಚರಿಸಲಾಗಿತ್ತು. ಈ ವೇಳೆ ಬಿಜೆಪಿ ಎಮ್​ಎಲ್​ಎ ರಾಜಾ ಸಿಂಗ್ ವಿರೋಧ ವ್ಯಕ್ತಪಡಿಸಿದ್ದರು. ಘಟನೆಯಲ್ಲಿ ಮಂಗಳ್​ಹಟ್​ ಪೊಲೀಸರು ರಾಜಾಸಿಂಗ್​ರನ್ನ ವಶಕ್ಕೆ ಪಡೆದು ಸಿಆರ್​ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಶಾಸಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ರಾಜಾಸಿಂಗ್ ಬಂಧನದ ವಿಚಾರ ತಿಳಿದು ಬಿಜೆಪಿ ಕಾರ್ಯಕರ್ತರು ಬೊಲ್ಲಾರಾಮ್ ಪೊಲೀಸ್ ಸ್ಟೇಷನ್​ಗೆ ತೆರಳಿ ರಾಜಾಸಿಂಗ್​ರನ್ನ ಭೇಟಿಯಾಗಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸ್ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಮಲ್ಲೇಶ್ ಭೇಟಿಗೆ ಅವಕಾಶ ನೀಡಲಿಲ್ಲವೆಂದು ರಾಜಾಸಿಂಗ್ ಸಬ್​ಇನ್​ಸ್ಪೆಕ್ಟರ್​ಗೆ ಥಳಿಸಿದ ಆರೋಪ ಕೇಳಿಬಂದಿತ್ತು.

ಘಟನೆಯ ಪರಿಣಾಮ ಬೊಲ್ಲಾರಾಮ್ ಪೊಲೀಸರು ಐಪಿಸಿ ಸೆಕ್ಷನ್ 353 ಮತ್ತು 506 ರ ಅಡಿ ರಾಜಾಸಿಂಗ್ ವಿರುದ್ಧ ಕೇಸ್ ದಾಖಲಿಸಿದ್ದರು.