Asianet Suvarna News Asianet Suvarna News

ಹೆಣ್ಣು ಮಕ್ಕಳ ರಕ್ಷಣೆಗಾಗಿ ಲವ್‌ ಜಿಹಾದ್‌ ವಿರೋಧಿ ಕಾನೂನು ಅಗತ್ಯ: ರೇಣುಕಾಚಾರ್ಯ ಸಮರ್ಥನೆ

ಕೆಲ ಮುಸ್ಲಿಂ ಗೂಂಡಾಗಳು ಹೆಣ್ಣುಮಕ್ಕಳಿಗೆ ಬಲೆಹಾಕುತ್ತಾರೆ. ಇದರಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಲವ್‌ ಜಿಹಾದ್‌ ವಿರುದ್ಧ ಕಾನೂನು ಜಾರಿಗೊಳಿಸುವುದು ಬಿಜೆಪಿ ಅಜೆಂಡಾ ಆಗಿದೆ.

Anti Love Jihad Law Needed to Protect Girl Child Renukacharya Advocates sat
Author
First Published Jan 4, 2023, 3:27 PM IST

ಬೆಂಗಳೂರು (ಜ.04): ರಾಜ್ಯದಲ್ಲಿ ನಮ್ಮ ಸರ್ಕಾರ ಅಭಿವೃದ್ಧಿಯನ್ನು ಮಾಡುತ್ತಿದೆ. ಕೆಲ ಮುಸ್ಲಿಂ ಗೂಂಡಾಗಳು ಹೆಣ್ಣುಮಕ್ಕಳಿಗೆ ಬಲೆಹಾಕುತ್ತಾರೆ. ಇದರಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಲವ್‌ ಜಿಹಾದ್‌ ವಿರುದ್ಧ ಕಾನೂನು ಜಾರಿಗೊಳಿಸುವುದು ಬಿಜೆಪಿ ಅಜೆಂಡಾ ಆಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಲವ್ ಜಿಹಾದ್ ಗೆ ಅವಕಾಶ ನೀಡಲ್ಲ. ನಮ್ಮ ರಾಜ್ಯಾಧ್ಯಕ್ಷರು ಹೇಳಿರುವುದರಲ್ಲಿ ತಪ್ಪಿಲ್ಲ. ಹೌದು ಲವ್ ಜಿಹಾದ್ ನಮ್ಮ ಅಜೆಂಡಾ ಆಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ನ್ಯಾಯ ಸಿಗಬೇಕು ಎನ್ನುವುದು ಪಕ್ಷದ ಅಜೆಂಡಾ ಆಗಿದ್ದು, ಈ ಬಗ್ಗೆ ರಾಜ್ಯಾಧ್ಯಕ್ಷರು ಸರಿಯಾಗಿ ಹೇಳಿದ್ದಾರೆ. ಲವ್ ಜಿಹಾದ್‌ನಿಂದ ನಮ್ಮ ಹೆಣ್ಣು ಮಕ್ಕಳು ಹೊರಗೆ ಬರಬೇಕು. ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಆರೋಗ್ಯ ಸೇರಿದಂತೆ ಎಲ್ಲಾ ವಿಚಾರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಲವ್ ಜಿಹಾದ್‌ನಿಂದ ನಮ್ಮ ಹಿಂದು ಹೆಣ್ಣು ಮಕ್ಕಳು ಹಾಳಾಗಬೇಕಾ.? ಅದಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು.

Assembly election: ರಸ್ತೆ, ಚರಂಡಿ ಸಮಸ್ಯೆ ಬಿಡಿ, ಲವ್ ಜಿಹಾದ್ ಬಗ್ಗೆ ಚರ್ಚಿಸಿ: ಸಂಸದ ಕಟೀಲ್ ಸಲಹೆಗೆ ಭಾರಿ ವಿರೋಧ

ತ್ರಿವಳಿ ತಲಾಖ್ ರದ್ದುಗೊಳಿಸಿ ನ್ಯಾಯ ಕೊಟ್ಟಿದೆ: ಈಗಾಗಲೇ ಕೇಂದ್ರದಲ್ಲಿ ತ್ರಿವಳಿ ತಲಾಕ್ ವಿಚಾರವಾಗಿ ಮುಸ್ಲಿಂ ಹೆಚ್ಚು ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡಿದೆ. ತ್ರಿವಳಿ ತಲಾಕ್ ನಿಂದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಅವಮಾನ ಮತ್ತು ಅನ್ಯಾಯ ಆಗುತ್ತಿತ್ತು. ಮೂರು ಬಾರಿ ತಲಾಕ್ ಹೇಳಿದ್ದರೆ ಹೆಣ್ಣುಮಗಳ ಭವಿಷ್ಯ ಮುಗಿದು ಹೋಗುತ್ತಿತ್ತು. ಬೇಕು ಬೇಕು ಎನಿಸಿದಾಗ ಯಾರನ್ನ ಬೇಕಾದ್ರೂ ಕರೆತರಬಹುದಾ.? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಯಾವ ತರ ಗೌರವಿಸುತ್ತಿದ್ದೀರಿ? ಅದೇ ರೀತಿ ದೇಶದಲ್ಲಿ, ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನ ಗೌರವಿಸಿದ ಪಕ್ಷ ಬಿಜೆಪಿ ಆಗಿದೆ ಎಂದರು. 

ಕೊಡಗು : ಪ್ರಧಾನಿ ಮೋದಿ ಎದುರು ಸಿಎಂ ಬೊಮ್ಮಾಯಿ ನಾಯಿಮರಿ ರೀತಿ ನಿಲ್ಲುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿಕೆ ನೀಡುವ ಮುನ್ನ ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಬೇಕು. ಅವರು ಕೂಡ ಸಿಎಂ ಆಗಿದ್ದವರು. ಈಗ ಬೊಮ್ಮಾಯಿ ನಮ್ಮ ಸಿಎಂ ಆಗಿದ್ದಾರೆ. ಯಾರೇ ಆದರೂ ಈ ರೀತಿ ಲಘುವಾಗಿ ಮಾತನಾಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಟುಕಿದ ಹಳ್ಳಿ ಹಕ್ಕಿ, ವಿಧಾನಪರಿಷತ್‌ ಎಚ್. ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ. 

ರಸ್ತೆ & ಚರಂಡಿ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಯೋಚಿಸಿ: ನಳಿನ್ ಕುಮಾರ್ ಕಟೀಲ್

ಕೇರಿಯಲ್ಲಿರುವ ನಮಗೆ ರಸ್ತೆ, ಚರಂಡಿ ಮುಖ್ಯ: ವಿಶ್ವನಾಥ್: ಅಭಿವೃದ್ಧಿ ಬಗ್ಗೆ ಮಾತನಾಡದೇ ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂದು ನಳಿನ್‌ ಕುಮಾರ ಕಟೀಲ್ ಹೇಳಿರುವುದು ಸಮಂಜಸಲ್ಲ. ನಿಮಗೆ ಇದು ಸಣ್ಣ ಪುಟ್ಟ ವಿಷಯವೇ. ಆದರೆ ಕೇರಿಯಲ್ಲಿ ಬದುಕುವವನ ಕಥೆ ಏನು? ಕೇರಿಯಲ್ಲಿ ಬದುಕುವ ನಮಗೆ ನಮ್ಮ ಮೂಲಭೂತ ಸೌಲಭ್ಯ ಮುಖ್ಯವಾಗಿದೆ. ನಮ್ಮ ಪಾಯಿಖಾನೆ ಏನಾಯ್ತು, ನಮ್ಮ ಚರಂಡಿ, ರಸ್ತೆ ಮನೆ ಏನಾಯ್ತು? ನಮ್ಮ ಕೇರಿ ನೀರೇನಾಯ್ತು ಎಂಬುದೇ ನಮ್ಮ ಸಮಸ್ಯೆ ಆಗಿದೆ. ಲವ್‌ ಜಿಹಾದ್‌ ಮೂಲಕ ನೀವು ಜನರನ್ನು ಹೇಗೆ ದಿಕ್ಕು ತಪ್ಫಿಸುತ್ತೀರಾ? ಒಂದು ರಾಜ್ಯದ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು ಎಂದರು.

ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿಯವರನ್ನು ನಾಯಿಗೆ ಹೋಲಿಸುವಷ್ಟು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ನಾಯಿ, ನರಿ ಅಂತಾ ಟೀಕೆ ಮಾಡೋದು ನಾಯಿಗೂ ಮಾಡುವ ಅಪಮಾನ ಆಗಿದೆ. ಟೀಕೆ ನಿಲ್ಲಿಸಿ, ಒಳ್ಳೆಯ ರಾಜಕಾರಣ ಮಾಡಿ. ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡುವುದರಿಂದ ನೀವು ಉದ್ಧಾರ ಆಗಲ್ಲಾ, ಜನ ನಿಮಗೆ ಓಟ್ ಹಾಕಲ್ಲಾ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಆಗಲಿ ಅಂತಾ ಅಧಿವೇಶನದಲ್ಲಿ ಕೇಳಿಲ್ಲ. ಕಾಂಗ್ರೆಸ್‌ ನಾಯಕರದ್ದು ಇವತ್ತು ಒಂದು ದುರ್ಬಲ ಅಪೋಜಿಷನ್ ಆಗಿದೆ. ಅವರಿಗೆ ಶಕ್ತಿಯೂ ಇಲ್ಲ, ಏನೂ ಇಲ್ಲ. ಸದನದಲ್ಲಿ ಯಾವುದೋ ವಿಷಯ ಕೊಟ್ಟು ನಾಲ್ಕು ಮಾತಾಡಿ ಎದ್ದು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಕಿಡಿಕಾರಿದರು. 

Follow Us:
Download App:
  • android
  • ios