Asianet Suvarna News Asianet Suvarna News

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮತ್ತೊಂದು ಪಾದಯಾತ್ರೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ. 7ನೇ ಪಾದಯಾತ್ರೆ ಎನ್ನಬೇಕಿಲ್ಲ, ಪಕ್ಷದೊಳಗೆ ಎಲ್ಲರೂ ಕೂಡಿ ಯೇ ಹೋರಾಟ ತೀವ್ರಗೊಳಿಸುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರು ಸೇರಿ ರಾಷ್ಟ್ರೀಯ ನಾಯಕರು ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧಸಲಿದ್ದಾರೆ. ರಾಜ್ಯದ ಎಲ್ಲಾ ನಾಯಕರ ಮುಂದಾಳತ್ವದಲ್ಲೇ ಪಾದಯಾತ್ರೆ ನಡೆಯುತ್ತದೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Another Padayatra against the Karnataka Congress government Says Union Minister Pralhad Joshi grg
Author
First Published Sep 5, 2024, 7:05 AM IST | Last Updated Sep 5, 2024, 7:05 AM IST

ನವದೆಹಲಿ(ಸೆ.05):  ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಮತ್ತು ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಸುಯಾದ ದಿಕ್ಕಿನಲ್ಲೇ ಹೋರಾಟ ನಡೆಯುತ್ತಿದೆ. ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ ಎಂದರು. 

ಸಿದ್ದರಾಮಯ್ಯ ಯಾರೆಂಬುದು ನಮಗೇನು ಗೊತ್ತು?: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ. 7ನೇ ಪಾದಯಾತ್ರೆ ಎನ್ನಬೇಕಿಲ್ಲ, ಪಕ್ಷದೊಳಗೆ ಎಲ್ಲರೂ ಕೂಡಿ ಯೇ ಹೋರಾಟ ತೀವ್ರಗೊಳಿಸುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರು ಸೇರಿ ರಾಷ್ಟ್ರೀಯ ನಾಯಕರು ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧಸಲಿದ್ದಾರೆ. ರಾಜ್ಯದ ಎಲ್ಲಾ ನಾಯಕರ ಮುಂದಾಳತ್ವದಲ್ಲೇ ಪಾದಯಾತ್ರೆ ನಡೆಯುತ್ತದೆ ಎಂದರು. 

8 ವರ್ಷ ಏಕೆ ಸುಮ್ಮನಿದ್ರು?: 

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಅಕ್ರಮ ಎಸಗಿದ್ದಾರೆಂದು ಹೇಳುವ ಕಾಂಗ್ರೆಸ್‌ನವರು ತಾವು ಅಧಿಕಾರದಲ್ಲಿದ್ದ 8 ವರ್ಷ ಏನು ಕತ್ತೆ ಕಾಯುತ್ತಿದ್ದರಾ? ಎಂದು ಪ್ರಲಾದ ಜೋಶಿ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರ ಕೇಸ್ ಇದ್ದದ್ದು 2005-06ರಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಆಗ ಏಕೆ ಸುಮ್ಮನಿದ್ದರು? ಅಲ್ಲದೇ 2018ರಲ್ಲಿ ಕುಮಾರಸ್ವಾಮಿ ಅವರ ಕೈ ಕಾಲು ಹಿಡಿದು ಸರ್ಕಾರ ರಚಿಸಿದ್ದೂ ಕಾಂಗ್ರೆಸ್‌ನವರೇ. ಆಗಿನ ಒಂದೂವರೆ ವರ್ಷದ ಆಡಳಿತದಲ್ಲೂ ಸುಮ್ಮನಿದ್ದರು. ಈಗ 2024ರ ಒಂದೂವರೆ ವರ್ಷದ ಆಡಳಿತದಲ್ಲಿ ಸಹ ಮೌನ ತಾಳಿದ್ದರು. ಆದರೆ, ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಎಚ್‌ಡಿಕೆ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. 

ಬ್ಲಾಕ್ ಮೇಲ್ ತಂತ್ರ: 

ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಮೇಲಿನ ಆರೋಪ 2004ರದ್ದು, ಮುರುಗೇಶ ನಿರಾಣಿ ಮೇಲಿನ ಆರೋಪ 2008ರನ್ನು, ಕಾಂಗ್ರೆಸ್ಸಿಗರು ಈಗ ಏಕೆ ಇವುಗಳನ್ನು ಮುನ್ನಲೆಗೆ ತರುತ್ತಿದ್ದಾರೆ? ಇದು ಬ್ಲಾಕ್‌ಮೇಲ್ ತಂತ್ರವಲ್ಲವೇ? ಎಂದು ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. 

Latest Videos
Follow Us:
Download App:
  • android
  • ios