Asianet Suvarna News Asianet Suvarna News

ಮತ ಗಳಿಕೆಗಾಗಿ ಉಚಿತ ವಿದ್ಯುತ್‌ ಘೋಷಣೆ ಅಪಾಯಕಾರಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

‘ನಮಗೆ ಮತ ಕೊಡಿ, ನಾವು ನಿಮಗೆ ಉಚಿತವಾಗಿ ವಿದ್ಯುತ್‌ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಏಕೆಂದರೆ ಅವರು ನಿಮಗೆ ಉಚಿತವಾಗಿ ವಿದ್ಯುತ್ ನೀಡಲ್ಲ. ಬದಲಿಗೆ ವಿದ್ಯುತ್‌ ನಿಮಗೆ ಸಿಗದಂತೆ ಮಾಡುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ. 

Announcement of free electricity to win votes is dangerous Says Union Minister Pralhad Joshi gvd
Author
First Published Sep 7, 2024, 6:24 PM IST | Last Updated Sep 7, 2024, 6:24 PM IST

ನವದೆಹಲಿ (ಸೆ.07): ‘ನಮಗೆ ಮತ ಕೊಡಿ, ನಾವು ನಿಮಗೆ ಉಚಿತವಾಗಿ ವಿದ್ಯುತ್‌ ಕೊಡುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಏಕೆಂದರೆ ಅವರು ನಿಮಗೆ ಉಚಿತವಾಗಿ ವಿದ್ಯುತ್ ನೀಡಲ್ಲ. ಬದಲಿಗೆ ವಿದ್ಯುತ್‌ ನಿಮಗೆ ಸಿಗದಂತೆ ಮಾಡುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಸೇರಿ ಹಲವು ಕಾಂಗ್ರೆಸ್ ಆಡಳಿತದ ರಾಜ್ಯಗಳು ಜಾರಿಗೆ ತಂದ ಉಚಿತ ವಿದ್ಯುತ್‌ ಯೋಜನೆಗಳನ್ನು ಟೀಕಿಸಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ‘ಉಚಿತ ವಿದ್ಯುತ್‌ ಒದಗಿಸುವುದು ನಿರಂತರವಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಸೂರ್ಯ ಘರ್‌ 300 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ನಿಜಕ್ಕೂ ನಿರಂತರವಾಗಿರುತ್ತದೆ’ ಎಂದರು. 

‘ಪ್ರಧಾನಿ ಸೂರ್ಯಘರ್‌ ಯೋಜನೆಯಲ್ಲಿ ವಿದ್ಯುತ್ತನ್ನು ನವೀಕರಿಸಬಹುದಾದ ಮೂಲದಿಂದ (ಸೌರ) ನೀಡಲಾಗುತ್ತದೆ. ಇದು ಜನರಿಗೆ ಉಳಿತಾಯವನ್ನಷ್ಟೇ ಮಾಡುವುದಿಲ್ಲ. ಹೆಚ್ಚುವರಿ ವಿದ್ಯುತ್‌ ಮಾರಾಟದ ಮೂಲಕ ಅವರಿಗೆ ಆದಾಯವನ್ನೂ ತಂದುಕೊಡುತ್ತದೆ. ಈ ಯೋಜನೆಯಡಿ ಪ್ರತಿ ಕುಟುಂಬ ವಾರ್ಷಿಕ 15 ಸಾವಿರ ರು.ಗಳನ್ನು ಉಳಿಸಬಹುದಾಗಿದೆ’ ಎಂದು ಹೇಳಿದರು. ‘ದಶಕದ ಹಿಂದೆ ಅಂದರೆ, 2010-11ರಲ್ಲಿ ಪ್ರತಿ ಯುನಿಟ್‌ ಸೌರ ವಿದ್ಯುತ್‌ಗೆ ದರ 10.95 ರು. ಇತ್ತು. ಅದು ಈಗ 2.60 ರು.ಗೆ ಇಳಿಕೆಯಾಗಿದೆ. ಸೌರ ವಿದ್ಯುತ್‌ ವೆಚ್ಚಗಳು ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ’ ಎಂದು ತಿಳಿಸಿದರು.

ಅಂಧ ವಿದ್ಯಾರ್ಥಿಗೆ ಇಟಲಿ ವೀಸಾ ಕೊಡಿಸಿದ ಜೋಶಿ: ಅಂಧ ವಿದ್ಯಾರ್ಥಿ ಇಟಲಿಗೆ ವ್ಯಾಸಂಗಕ್ಕೆ ಹೋಗಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹಕಾರದಿಂದ ವೀಸಾ ಸಿಕ್ಕಿದೆ. ಸುಹಾಸ್‌ ಎನ್ನುವ ವಿದ್ಯಾರ್ಥಿಗೆ ಇಟಲಿಯ ಟ್ರೇಂಟೋ ವಿವಿಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅವರಿಗೆ ವಿವಿಯು ಸ್ಕಾಲರ್‌ಶಿಪ್ ನೀಡುವ ಜತೆಗೆ ಪ್ರತಿ ವರ್ಷ ಭರಿಸಬೇಕಾದ ₹12 ಲಕ್ಷ ಬೋಧನಾ ಶುಲ್ಕವನ್ನು ಮನ್ನಾ ಮಾಡಿದೆ. ವೀಸಾ ಅರ್ಜಿಯನ್ನು ಇಟಲಿ ರಾಯಭಾರಿ ಕಚೇರಿ ತಿರಸ್ಕರಿಸಿದ ಬಳಿಕ ಸುಹಾಸ್‌ರ ಪೋಷಕರು, ಜೋಶಿ ಅವರ ಗಮನಕ್ಕೆ ತಂದಿದ್ದರು. ಜೋಶಿ, ವಿದೇಶಾಂಗ ಸಚಿವರೊಂದಿಗೆ ಸಮಾಲೋಚಿಸಿ ವೀಸಾ ದೊರೆಯುವಂತೆ ಮಾಡಿದ್ದಾರೆ.

'ಯುವರ್ಸ್‌ ಸಿನ್ಸಿಯರ್ಲಿ ರಾಮ್‌' ಎಂದು ಮತ್ತೆ ಜತೆಯಾದ ರಮೇಶ್‌ ಅರವಿಂದ್‌, ಗಣೇಶ್‌: ಏನಿದು ಹೊಸ ಕತೆ!

ಸೆಪ್ಟೆಂಬರ್‌ನಲ್ಲಿ ತರಗತಿಗೆ ಹಾಜರಾಗುವಂತೆ ಸೂಚಿಸಿತ್ತು. ಸುಹಾಸ್ ಜೂನ್ ತಿಂಗಳಲ್ಲೇ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ರಾಯಭಾರ ಕಚೇರಿಯು ಅಗತ್ಯ ದಾಖಲೆ ಸಲ್ಲಿಸಿದ ನಂತರವೂ ಸಕಾರಣ ನೀಡದೇ ಅರ್ಜಿ ತಿರಸ್ಕರಿಸಿತ್ತು. ಸುಹಾಸನ ಪೋಷಕರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೂ ತಂದಿದ್ದರು. ಸಚಿವರು, ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ ಅವರೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗೆ ವೀಸಾ ದೊರೆಯುವಂತೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios