ಕಳೆದೊಂದು ವರ್ಷದಿಂದ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದ ಪಕ್ಷ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದೆ. ಈಗಾಗಲೇ 110 ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದ ರಾಜ್ಯ ಸಮಿತಿ ಇದೀಗ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಿಸಲಿದೆ.

ಬೆಂಗಳೂರು(ಮಾ.31): ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಗುರುವಾರ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕಳೆದೊಂದು ವರ್ಷದಿಂದ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದ ಪಕ್ಷ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದೆ. ಈಗಾಗಲೇ 110 ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದ ರಾಜ್ಯ ಸಮಿತಿ ಇದೀಗ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಿಸಲಿದೆ.

ಅಭ್ಯರ್ಥಿಗಳ ಆಯ್ಕೆಗೆ ವಿಶೇಷ ಪ್ರಕ್ರಿಯೆ ಅನುಸರಿಸಿದ್ದು, ಆಕಾಂಕ್ಷಿಗಳು ಈ ಪ್ರಕ್ರಿಯೆಯಲ್ಲಿ ಭಾವಗಹಿಸಿ ಪಕ್ಷದ ನೀತಿ ನಿಯಮಗಳ ಅನುಸಾರ ನಡೆದುಕೊಂಡು ಪಕ್ಷ ನೀಡಿದ ಗುರಿಗಳನ್ನು ತಲುಪಿದವರನ್ನು ಈ ಆಯ್ಕೆ ಪರಿಗಣಿಸಲಾಗಿದೆ. ಜತೆಗೆ ಅಭ್ಯರ್ಥಿಗಳಿಂದಲೂ ರಾಜ್ಯದ ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಸೇರಿದಂತೆ ಪ್ರತಿಜ್ಞೆ ತೆಗೆದುಕೊಂಡ ನಂತರವಷ್ಟೇ ಬಿ-ಫಾರಂ ನೀಡುವುದಾಗಿ ಕೆಆರ್‌ಎಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೀಪಕ್‌ ತಿಳಿಸಿದ್ದಾರೆ.

ರಾಯಚೂರು: ಚುನಾ​ವಣೆ ಘೋಷಣೆಯಾದ್ರೂ, 7 ಕ್ಷೇತ್ರಗಳಲ್ಲಿ ಮುಗಿಯದ ಅಭ್ಯರ್ಥಿಗಳ ಆಯ್ಕೆ ಗೊಂದಲ!

47 ಕ್ಷೇತ್ರದ ಅಭ್ಯರ್ಥಿಗಳು:

ತಿಪಟೂರು-ಗಂಗಾಧರ ಕರೀಕೆರೆ, ಕುಣಿಗಲ್‌-ರಘು ಜಾಣಗೆರೆ, ತುಮಕೂರು ನಗರ- ಗಜೇಂದ್ರಕುಮಾರ್‌ ಗೌಡ, ಕೊರಟಗೆರೆ-ರವಿಕುಮಾರ್‌ ಕೆ.ಸಿ., ಕೆ.ಆರ್‌.ಪುರ- ಬೈರತಿ ಆರೋಗ್ಯಸ್ವಾಮಿ, ಯಶವಂತಪುರ-ರವಿಕುಮಾರ್‌, ಬಸವನಗುಡಿ-ಎಲ್‌.ಜೀವನ್‌, ಮಹದೇವಪುರ- ಶಿವಾಜಿ ಆರ್‌.ಲಮಾಣಿ, ಬೆಂಗಳೂರು ದಕ್ಷಿಣ-ವಿಜಯರಾಘವ ಮರಾಠೆ, ಆನೇಕಲ್‌-ಅನ್ಬುರಾಜ್‌, ರಾಮನಗರ-ಶಿವಕುಮಾರ್‌ ಎಸ್‌., ಶ್ರೀರಂಗಪಟ್ಟಣ-ಅರುಣ್‌ಕುಮಾರ್‌ ಎಚ್‌.ಎಂ., ಕೃಷ್ಣರಾಜಪೇಟೆ-ಕಿಶೋರ್‌ ಎ.ಸಿ., ಅರಕಲಗೂಡು-ಕೇಶವಮೂರ್ತಿ ಎಚ್‌.ಟಿ., ಚಾಮುಂಡೇಶ್ವರಿ-ಮಾ.ಸ.ಪ್ರವೀಣ್‌, ನರಸಿಂಹರಾಜ-ಸುಂದರ ಪ್ರೇಮ್‌ಕುಮಾರ್‌.

ರಾಮದುರ್ಗ-ಬಸಪ್ಪ ಕುಂಬಾರ, ಯಲಹಂಕ-ರಘುನಂದನ್‌, ತುರುವೇಕೆರೆ- ರಾಂಪ್ರಸಾದ್‌ ತಿವಾರಿ, ಮಾಗಡಿ-ಅಭಿಷೇಕ್‌ ಕೆ.ಆರ್‌., ಅರಸೀಕೆರೆ- ಬಿ.ಎಂ.ಉಮೇಶ್‌, ದಾಸರಹಳ್ಳಿ-ಶ್ರೀಕುಮಾರ್‌ ಟಿ., ಸಿರಾ-ಪ್ರದೀಪ್‌ ಕುಮಾರ್‌, ಬೈಲಹೊಂಗಲ-ಇರ್ಫಾನ್‌ ಜೈಲಾನಿ ನಾಗೇವಾಡಿ, ಜಯನಗರ-ಮಣಿಕಂಠ ದ್ರಾವಿಡರ, ಬೊಮ್ಮನಹಳ್ಳಿ-ನಂದಾರೆಡ್ಡಿ, ಹೊಸಕೋಟೆ-ಬಿ.ಸೊಣ್ಣಪ್ಪ ಗೌಡ, ಹಾಸನ-ವಿ.ರಮೇಶ್‌, ಕನಕಪುರ-ಪ್ರಶಾಂತ್‌ಕುಮಾರ್‌ ಹೊಸದುರ್ಗ, ನಾಗಮಂಗಲ-ಜಿ.ಎಂ.ರಮೇಶ್‌ಗೌಡ, ಚನ್ನಪಟ್ಟಣ-ಶ್ಯಾಮಲಾ ರಮೇಶ್‌, ಬಂಗಾರಪೇಟೆ- ರಾಜು ಪೌಲ್‌, ವರುಣಾ- ರವಿಕುಮಾರ್‌ ಎಂ.

ಬಿಜೆಪಿ, ಕಾಂಗ್ರೆಸ್‌ಗೆ ಬಹುಮತ ಸಿಗದ ಭೀತಿ: ಕುಮಾರಸ್ವಾಮಿ

ಪಿರಿಯಾಪಟ್ಟಣ- ಜೋಗನಹಳ್ಳಿ ಗುರುಮೂರ್ತಿ, ಸಿಂಧನೂರು-ನಿರುಪಾದಿ ಗೋಮರ್ಸಿ, ಇಂಡಿ-ಅಶೋಕ್‌ ಧೋಂಡು ಜಾಧವ್‌, ಗೋವಿಂದರಾಜನಗರ-ಬಿ.ಆರ್‌.ಶಶಿಕುಮಾರ್‌, ಮಹಾಲಕ್ಷ್ಮೇ ಲೇಔಟ್‌- ಅಮಿತ್‌ ರೆಬೆಲ್ಲೋ, ದೇವನಹಳ್ಳಿ-ನಿಖಿಲ್‌ ಎಂ., ಹುಣಸೂರು-ತಿಮ್ಮಾಬೋವಿ, ಬಸವನ ಬಾಗೇವಾಡಿ-ಎಸ್‌.ಪ್ರವೀಣ್‌ ಕುಮಾರ್‌ ರಾಯಗೊಂಡ, ಬಿಟಿಎಂ ಲೇಔಟ್‌- ಜನನಿ ವತ್ಸಲ, ಕಲಘಟಗಿ-ಚಂದ್ರಶೇಖರ ಮಠದ್‌, ನೆಲಮಂಗಲ-ಅರುಣ್‌ಕುಮಾರ್‌, ವಿಜಯನಗರ-ಕಣದಾಳು ಮಂಜುನಾಥ, ಹಿರಿಯೂರು-ವಿನಯ್‌ ಎಸ್‌., ಹಗರಿಬೊಮ್ಮನಹಳ್ಳಿ- ಸಂತೋಷ್‌ ಕುಮಾರ್‌.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.