ನಮ್ಮ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ತಡೆಯಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಬಡವರಿಗೆ ಅಕ್ಕಿ ಕೊಡಬಾರದು. ಅವರು ಉಪವಾಸ ಸಾಯಲಿ ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜೂ.24) : ನಮ್ಮ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ತಡೆಯಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಬಡವರಿಗೆ ಅಕ್ಕಿ ಕೊಡಬಾರದು. ಅವರು ಉಪವಾಸ ಸಾಯಲಿ ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಶತಾಯಗತಾಯ ತಡೆಯಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಇದನ್ನು ಪ್ರೆಸ್ಟೀಜ್ ಇಶ್ಯು ಮಾಡಿಕೊಂಡಿದ್ದಾರೆ ಎಂದರು.
ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವಂತೆ ಕೇಳ್ತಾ ಇದ್ದೇವೆ. ಆದರೆ ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ನಾವೇನು ಸುಮ್ನೆ ಕೇಳ್ತಾ ಇಲ್ಲ,ಹಣ ಕೊಡ್ತೀವಿ ಅಕ್ಕಿ ಕೊಡಿ ಅಂತಾ ಕೇಳ್ತಿದ್ದೇವೆ. ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವೇ ಮುಂದೆ ಬಂದು ಕೊಡಬೇಕು. ಅದನ್ನು ಬಿಟ್ಟು ಅಕ್ಕಿ ಕೊಡದೇ ಅದನ್ನು ಬಿಟ್ಟು ರಾಜಕೀಯ ಮಾಡ್ತಾ ಇದೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ಇದ್ರೂ ಕೊಡ್ತಿಲ್ಲ; ಬಿಎಸ್‌ವೈಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ? ಸಿಎಂ ವಾಗ್ದಾಳಿ!
ಬೇರೆ ದೇಶಕ್ಕೆ ಕೊಡ್ತಿವಿ ಇಲ್ಲಿನ ಜನರಿಗೆ ಕೊಡದಿಲ್ಲ ಅಂದ್ರೆ ಹೇಗೆ? ವಿದೇಶಗಳಿಗೆ ಕೊಡ್ತೇವೆ, ಇಲ್ಲಿನವರಿಗೆ ಕೊಡೋದಿಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಸಂವಿಧಾನ ಉಳಿಸಲು ಎಲ್ಲ ಪಕ್ಷಗಳು ಒಗ್ಗಟ್ಟು
ದೇಶದಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ದೇಶದ ಸಂವಿಧಾನ ಉಳಿಸಬೇಕು ಅನ್ನೋ ಚಿಂತನೆ ಇರುವ ಪಕ್ಷಗಳು ಸೇರಿ ಚುನಾವಣೆ ಎದುರಿಸಬೇಕಿದೆ. ಈ ಸಂಬಂಧ ಸಿಮ್ಲಾ ದಲ್ಲಿ ಸಭೆ ಮಾಡಲಿದ್ದೇವೆ. ಯಾವ ರೀತಿ ಹೊಂದಾಣಿಕೆ ಮಾಡಬೇಕು ಅನ್ನೋ ವಿಚಾರಗಳನ್ನು ಮಾತಾಡುತ್ತೇವೆ. ಜುಲೈ ನಲ್ಲಿ ಪಾರ್ಲಿಮೆಂಟ್ ನಡೆಯಲಿದೆ. ಆ ಸಂಧರ್ಭದಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಯಾವ ಅಜೆಂಡಾಗಳ ಮೇಲೆ ಹೋಗಬೇಕು ಅಂತಾ ಮಾತಾಡ್ತೀವಿ ಎಂದರು.
