ಪೀಠಾಪುರಂನಿಂದ ಪವನ್ ಕಲ್ಯಾಣ್‌ ವಿರುದ್ಧ ಸ್ಪರ್ಧಿಸುವುದಾಗಿ ಉಲ್ಟಾ ಹೊಡೆದ ರಾಮಗೋಪಾಲ್ ವರ್ಮಾ!

ಲೋಕಸಭಾ ಚುನಾವಣೆ ಜೊತೆಗೆ  ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಚಟುವಟಿಕೆಗಳೂ ಗರಿಗೆದರಿದ್ದು, ನಟ  ಪವನ್‌ ಕಲ್ಯಾಣ್‌ ಅವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ರಾಮಗೋಪಾಲ್‌ ವರ್ಮಾ ಮಾಡಿರುವ ಟ್ವೀಟ್ ಚರ್ಚೆ ಹುಟ್ಟು ಹಾಕಿದ್ದು, ಈಗ ಸ್ಪಷ್ಟನೆ ನೀಡಿದ್ದಾರೆ.

Andhra Pradesh Assembly election  Ram Gopal Varma to contest against Pawan Kalyan From Peethapuram gow

ಅಮರಾವತಿ (ಮಾ.15): ದೇಶದ 18ನೇ ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಚಟುವಟಿಕೆಗಳೂ ಗರಿಗೆದರಿದ್ದು, ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್‌ ಕಲ್ಯಾಣ್‌ ಅವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಕುತೂಹಲ ಎಂದರೆ ವಿವಾದಿತ  ಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಪವನ್‌ ಕಲ್ಯಾಣ್‌ ಗೆ ವಿರೋಧಿಯಾಗಿ ವರ್ಮಾ ಸ್ಪರ್ಧಿಸಲಿದ್ದಾರೆ ಎಂದು ವ್ಯಾಪಕ ಸುದ್ದಿ ಹಬ್ಬಿತ್ತು.

ಆದರೆ ಇಂದು ಮತ್ತೆ ಟ್ವೀಟ್‌ ಮಾಡಿ ಸ್ಪಷ್ಟನೆ ಕೊಟ್ಟಿದ್ದು, ನನ್ನ ಟ್ವೀಟ್ ಅನ್ನು ತಪ್ಪಾಗಿ ಓದಿದ ಎಲ್ಲ ಮೂರ್ಖರಿಗೆ ಸ್ಪಷ್ಟಪಡಿಸುತ್ತಿದ್ದೇನೆ, ನಾನು ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಅದರಲ್ಲಿ ನಾನು ಪಿಠಾಪುರದಲ್ಲಿ ಚಿತ್ರೀಕರಿಸಿದ ಕಿರುಚಿತ್ರದ ಮೂಲಕ ಸ್ಪರ್ಧೆಗೆ ಪ್ರವೇಶ ಮಾಡುತ್ತೇನೆ. ನಾನು ಈ ತಪ್ಪು ಸಂವಹನಕ್ಕಾಗಿ  ವಿಷಾದಿಸುವುದಿಲ್ಲ. ಏಕೆಂದರೆ ನಾನು ಎಲ್ಲೂ ಚುನಾವಣೆ ಎಂಬ ಪದವನ್ನು ಉಲ್ಲೇಖಿಸಿಲ್ಲ ಮತ್ತು ಮಾಧ್ಯಮಗಳು ಊಹಾಪೋಹದ ಉನ್ಮಾದಕ್ಕೆ ಸುದ್ದಿ ಹಬ್ಬಿಸಿತು ಎಂದು ಬರೆದುಕೊಂಡಿದ್ದಾರೆ.

ಎಸ್‌ಬಿಐ ಚುನಾವಣಾ ಬಾಂಡ್‌ ದೇಣಿಗೆ ರಹಸ್ಯ ಆಯೋಗದಿಂದ ಬಹಿರಂಗ, ಬಿಜೆಪಿ ಟಾಪ್‌, ಜೆಡಿಎಸ್‌ಗೆ 43 ಕೋಟಿ!

ಇದೇ ವರ್ಷ ನಡೆಯುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ. ಇದರನ್ವಯ ಲೋಕಸಭೆಗೆ ಬಿಜೆಪಿ-6, ಟಿಡಿಪಿ - 17 ಹಾಗೂ ಜನಸೇನಾ 2 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ. ಇನ್ನು ವಿಧಾನಸಭೆಯಲ್ಲಿ ಬಿಜೆಪಿ - 10, ಟಿಡಿಪಿ - 144 ಹಾಗೂ ಜನಸೇನಾ - 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ರಾಮ್ ಗೋಪಾಲ್ ವರ್ಮಾ ಅವರು ರಾಜಕೀಯ ಮತ್ತು ದರೋಡೆಕೋರ ವಿಷಯದ ಚಲನಚಿತ್ರಗಳಿಗೆ ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಕೆಲವು ಗಮನಾರ್ಹ ಚಿತ್ರಗಳಲ್ಲಿ 'ಸತ್ಯ' (1998), 'ಕಂಪನಿ' (2002), 'ಸರ್ಕಾರ್' (2005), 'ರಂಗೀಲಾ' (1995), ಮತ್ತು 'ಭೂತ' (2003) ಸೇರಿವೆ.

Lok Sabha Election 2024: ಮತ್ತೊಂದು ಚುನಾವಣಾ ಸಮೀಕ್ಷೆ, ಎನ್‌ಡಿಎಗೆ 411, ಇಂಡಿಯಾಗೆ 105, ಕರ್ನಾಟಕದಲ್ಲಿ ಎಷ್ಟು? 

 

Latest Videos
Follow Us:
Download App:
  • android
  • ios